ಎಂ ಲಕ್ಷ್ಮೀನಾರಾಯಣ್ ಅವರ 61ನೇ ಹುಟ್ಟುಹಬ್ಬ ಆಚರಣೆ
ಅರ್ಥಪೂರ್ಣ ಹುಟ್ಟುಹಬ್ಬ ಆಚರಣೆ ಬೆಂಗಳೂರು: ಮಾಜಿ ಉಪ ಮಹಾಪೌರರಾದ ಎಂ. ಲಕ್ಷ್ಮೀನಾರಾಯಣ್ ಅವರ 61ನೇ ಹುಟ್ಟುಹಬ್ಬದ ಪ್ರಯುಕ್ತ ಎಂ. ಲಕ್ಷ್ಮೀನಾರಾಯಣ್ ಅಭಿಮಾನಿಗಳ ಬಳಗದ ವತಿಯಿಂದ ದೀಪಾಂಜಲಿ ನಗರ ವಾರ್ಡ್ನಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸ್ನೇಹಿತರು ಹಿತೈಷಿಗಳು ಅಭಿಮಾನಿಗಳು ಸೇರಿದಂತೆ ಹಲವು ಗಣ್ಯರು ಹುಟ್ಟುಹಬ್ಬದ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಎಂ. ಲಕ್ಷ್ಮಿನಾರಾಯಣ್ ರವರು ಮಾತನಾಡಿ ಜನಪ್ರತಿನಿಧಿಗಳು ಜನಸೇವಕರಾಗಿ ಕೆಲಸ ಮಾಡಬೇಕು. ದೀಪಾಂಜಲಿ ನಗರ ವಾರ್ಡ್ ನಲ್ಲಿ ಬಡವರು, ಮಧ್ಯಮ ವರ್ಗದವರು ಹೆಚ್ಚಾಗಿ ವಾಸಿಸುನ ವಾರ್ಡ್ಗಗಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ದೀಪಾಂಜಲಿ ನಗರ ವಾರ್ಡ್ ಸಮಗ್ರ ಅಭಿವೃದ್ದಿಗೆ ನಾಗರಿಕರ ಸಹಕಾರದಲ್ಲಿ ಅಭಿವೃದ್ದಿ ಪಡಿಸಲಾಗಿದೆ. ಆರೋಗ್ಯ ಸೇವೆ ಮತ್ತು ಮೂಲಭೂತ ಸೌಲಭ್ಯ ರಸ್ತೆ ನೀರು, ಚರಂಡಿ ವ್ಯವಸ್ತೆ, ಸಿ.ಸಿ.ಕ್ಯಾಮರ ಆಳವಡಿಕೆ. ಸಾರ್ವಜನಿಕರ ಕುಂದುಕೂರತೆ ಅಲಿಸಲು 24/7ನಲ್ಲಿ ಅನ್ ಲೈನ್ ದೂರು ಸ್ವೀಕಾರ ಮತ್ತು ಪರಿಹಾರ. ದೀಪಾಂಜಲಿ ನಗರ ವಾರ್ಡ್ ಸ್ವಚ್ಚತೆ ಮತ್ತು ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ. ಬಡವರಿಗೆ ಉತ್...