Posts

Showing posts from December, 2020

ಅಲೈಯನ್ಸ್ ವಿವಿ ಪ್ರಕರಣ ಸೂಕ್ತ ತನಿಖೆಯಾಗಲಿ ಮಧುಕರ್ ಜಿ ಅಂಗೂರ್

Image
  ಅಲೈಯನ್ಸ್ ವಿವಿ ನಕಲಿ ಸಹಿ ಬಳಸಿ ಬಹುಕೋಟಿ ಹಗರಣ ಪ್ರಕರಣ ಸೂಕ್ತ ತನಿಖೆಯಾಗಲಿ:   ಸಂಸ್ಥಾಪಕ ಮಧುಕರ್ ಜಿ. ಆಂಗೂರ್           ಪ್ರಪಂಚದಲ್ಲಿ ಕರೋನ ಆರ್ಭಟ ಇಳಿಮುಖಗೊಳ್ಳುತ್ತಿದ್ದಂತೆ, ಜನರನ್ನು ನಾನಾ ಬಗೆಯ ಹಗರಣಗಳ ಸುದ್ಧಿಗಳು ಆಕರ್ಷಿಸುತ್ತಿವೆ. ಅಂತಹ ಸುದ್ಧಿಗಳ ನಡುವೆ ಜನರನ್ನು ಹುಬ್ಬೆರಿಸುವಂತೆ ಮಾಡಿರುವ ಸುದ್ಧಿಗಳಲ್ಲಿ ಬೆಂಗಳೂರಿನಲ್ಲಿನ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಕೋಟ್ಯಾಂತರ ರೂಪಾಯಿ ವಂಚನೆಯ ಹಗರಣವು ಪ್ರಮುಖ ಸುದ್ಧಿ ಆಗಿ ಗಮನ ಸೆಳೆದಿದೆ.        ಬೆಂಗಳೂರಿನ “ಅಲೈಯನ್ಸ್ ಯೂನಿವರ್ಸಿಟಿ”ಯಲ್ಲಿ ನಡೆದಿದೆ ಎನ್ನಲಾಗಿರುವ ಬಹುಕೋಟಿ ಹಗರಣವು ರಾಜ್ಯ ಮಟ್ಟದಲ್ಲೇ, ಅಲ್ಲದೇ ರಾಷ್ಟ್ರಮಟ್ಟದಲ್ಲೇ ಸದ್ದು ಮಾಡುತ್ತಿದೆ. ಈ ಸಂಬಂಧವಾಗಿ ನಮ್ಮ ವಾಹಿನಿಯ ಸಂದರ್ಶನದ ವೇಳೆ ನಮ್ಮ ಸುದ್ಧಿಗಾರರೊಂದಿಗೆ ವಿಶ್ವವಿದ್ಯಾಲಯದ ಸಂಸ್ಥಾಪಕರು ಹಾಗೂ ಆಜೀವ ಕುಲಪತಿಗಳಾಗಿ ಸೇವೆ ಸಲ್ಲಿಸುತ್ತಿರುವ ಮಧುಕರ್ ಜಿ. ಆಂಗೂರ್ ಮಾತನಾಡಿ ನಾನು ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯನಾಗಿದ್ದು, ಅಲ್ಲಿ ದುಡಿದ ಹಣವನ್ನು ಸದುಪಯೋಗಪಡಿಸುವ ಉದ್ದೇಶದಿಂದ, ಇಲ್ಲಿ ನಮ್ಮ ಭಾರತದಲ್ಲಿ ವಿದ್ಯಾ ರಂಗದ ಮುಖಾಂತರ ಸೇವೆಯನ್ನು ಮಾಡುವ ಕನಸಿನ ಫಲವಾಗಿ, ಇದೇ ನಮ್ಮ ಬೆಂಗಳೂರಿನಲ್ಲಿ “ಅಲೈಯನ್ಸ್ ಯೂನಿವರ್ಸಿಟಿ”ಯ ಜನನವಾಯಿತು. ವಿಡಿಯೋ ನೋಡಲು ಈ ಕೆಳಗೆ ಕ್ಲಿಕ್ ಮಾಡಿ  Click here to watch this video        ಅನಿವಾಸಿ ಭಾರತೀಯನಾಗಿರುವ ನನಗೆ ಈ ಕೆಲಸ

ಭಾರತ್ ಬಂದ್ ಗೆ ದಲಿತ ಯುವಕರ ಸೇವಾ ದಳದ ಬೆಂಬಲ : ಎಸ್. ವೆಂಕಟೇಶ್

Image
  ಭಾರತ ಬಂದ್‌ಗೆ ದಲಿತ ಯುವಕರ ಸೇವಾದಳದ ಬೆಂಬಲ : ಎಸ್.ವೆಂಕಟೇಶ್          ಬೆಂಗಳೂರು : ಕೇಂದ್ರದ ನೂತನ ಕೃಷಿ ಮಸೂದೆ ವಿರೋಧಿಸಿ ಡಿ.8ರಂದು ಕರೆ ನೀಡಿರುವ ಭಾರತ ಬಂದ್‌ಗೆ ದಲಿತ ಯುವಕರ ಸೇವಾದಳ ಬೆಂಬಲ ಸೂಚಿಸಿದೆ.      ದಲಿತ ಯುವಕರ ಸೇವಾದಳದ ಅಧ್ಯಕ್ಷ ಎಸ್. ವೆಂಕಟೇಶ್ ಮಾತನಾಡಿ ಹಲವು ಸಂಘಟನೆಗಳು ಬೆಂಬಲ ಸೂಚಿಸಿದ್ದಾರೆ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುವ ಭಾರತ ಬಂದ್‌ನಲ್ಲಿ ನಾವು ಕೂಡ ಪಾಲ್ಗೊಳ್ಳಲಿದ್ದೇವೆ ಎಂದು ತಿಳಿಸಿದರು. ವಿಡಿಯೋ ನೋಡಲು ಈ ಕೆಳಗೆ ಕ್ಲಿಕ್ ಮಾಡಿ  Click here to watch this video       ದೆಹಲಿ ಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ದಲಿತ ಯುವಕರ ಸೇವಾ ದಳದ ಬೆಂಬಲವಿದೆ, ಬೇರೆ ಬೇರೆ ಜಿಲ್ಲೆಗಳಿಂದ ರೈತರು ಮಂಗಳವಾರ ಬೆಂಗಳೂರಿಗೆ ಆಗಮಿಸಲಿದ್ದು, ಎಲ್ಲರೂ ಸೇರಿ ಪ್ರತಿಭಟನೆ ನಡೆಸಲಿದ್ದೇವೆ. ನಾವು ಕೂಡ ಎಪಿಎಂಸಿ ಬಿಲ್ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ. ಕೇಂದ್ರ ಸರ್ಕಾರ ತಂದಿರುವ ಹೊಸ ಕೃಷಿ ಕಾಯ್ದೆಗಳಿಂದ ರೈತರ ಕಲ್ಯಾಣವಾಗುವುದಿಲ್ಲ ಎಂದರು.        ದೇಶದ ರೈತರು ಅಲ್ಪಸ್ವಲ್ಪ ಉಸಿರಾಡುತ್ತಿರುವುದು ಕೃಷಿ ಉತ್ಪನ್ನ ಮಾರುಕಟ್ಟೆಗಳು ಮತ್ತು ಕನಿಷ್ಠ ಬೆಂಬಲ ಬೆಲೆಯಿಂದಾಗಿ, ಆದರೆ ಎಪಿಎಂಸಿಗಳನ್ನು ಕೇಂದ್ರ ಸರ್ಕಾರ ನಗಣ್ಯಗೊಳಿಸುವ, ಅದರ ಮೂಲಕ ನಾಶಪಡಿಸುವ ಉದ್ದೇಶ ಹೊಂದಿದೆ. ಖಾಸಗಿ ಮಂಡಿಗಳನ್ನು ತಂದು, ರೈತರನ್ನು ಮೊದಮೊದಲು ಆಕರ್ಷಿಸಿನಂತರ ಪಾತಾಳಕ್ಕೆ ತಳ್ಳುವ ಕಾಯ್ದೆಯಿ

ಡಾ.ಬಿ.ಆರ್.ಅಂಬೇಡ್ಕರ್ ರವರ 64ನೇ ಮಹಾ ಪರಿನಿರ್ವಾಣ ಕಾರ್ಯಕ್ರಮ

Image
  ದಲಿತ ಯುವಕರ ಸೇವಾದಳದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ  64ನೇ ಮಹಾ ಪರಿನಿರ್ವಾಣದ ದಿನ       ಡಾ. ಬಿ.ಆರ್.ಅಂಬೇಡ್ಕರ್  ಸಂವಿಧಾನ ರಚನಾ ಸಂದರ್ಭದಲ್ಲಿ ಪ್ರಸ್ತಾಪಿಸಲಾಗಿದ ಅಂಶಗಳು ಸರಿಯಾದ ರೀತಿಯಲ್ಲಿ ಅನುಷ್ಠಾನ ಗೊಂಡರೆ ಅವರಆಶಯಗಳನ್ನು ಈ ಡೇರಿಸಿದಂತಾಗುತ್ತದೆ ಎಂದು ದಲಿತ ಯುವಕರ ಸೇವಾದಳದ ಅಧ್ಯಕ್ಷ ಎಸ್. ವೆಂಕಟೇಶ್ ಹೇಳಿದ್ದಾರೆ.             ವಿಡಿಯೋ ನೋಡಲು ಈ ಕೆಳಗೆ ಕ್ಲಿಕ್ ಮಾಡಿ         Click here to watch this video      ಡಾ.ಬಿ.ಆರ್.ಅಂಬೇಡ್ಕರ್ 64ನೇ ಮಹಾ ಪರಿನಿರ್ವಾಣದ ದಿನವಾದ ಇಂದು ವಿಧಾನ ಸೌಧ ಮುಂಭಾಗದಲ್ಲಿರುವ ಪ್ರತಿಮೆಗೆ ಪುಷ್ಪವಿರಿಸಿ ಮಾತನಾಡಿದ ಅವರು. ಅಂಬೇಡ್ಕರ್ ಅವರು ಬಡವರ ಹಾಗೂ ದಲಿತರ ಏಳಿಗೆಗಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಇವುಗಳು ನಿಜವಾಗಲೂ ಬಡವರಿಗೆ ತಲುಪಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು. ನಮ್ಮ ಸಂಘಟನೆ ವತಿಯಿಂದ ಬೆಂಗಳೂರಿನ ವಿವಿಧಡೆ ಸುಮಾರು ಎರಡು ಸಾವಿರ ಮಂದಿ ದಲಿತ ಬಡವರಿಗೆ ಹಕ್ಕುಪತ್ರ ಕೊಡಿಸುವಲ್ಲಿ ಹೋರಾಟ ನಡೆಸಿದ್ದೇವೆ ಎಂದರು.