Posts

Showing posts from February, 2020

ರೋಟರಿ ಕ್ಲಬ್ 115ನೇ ವಾರ್ಷಿಕೋತ್ಸವ;

Image
ರೋಟರಿ ಕ್ಲಬ್ 115ನೇ ವಾರ್ಷಿಕೋತ್ಸವ;  ಬೆಂಗಳೂರಿನಲ್ಲಿ ಬೃಹತ್ ಶಾಂತಿ ನಡಿಗೆ ಕಾರ್ಯಕ್ರಮ      ಬೆಂಗಳೂರು-ರೋಟರಿಯನ್ ಇಂಟರ್ ನ್ಯಾಷನಲ್ ಡಿಸ್ಟ್ರಿಕ್ಟ್ 3190 ಇಂಟರ್ ನ್ಯಾಷನಲ್ ತನ್ನ 115ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಭಾನುವಾರ 23ರಂದು ರೋಟರಿ ಶಾಂತಿ ನಡಿಗೆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿದೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಿಂದ ಆರಂಭಗೊಳ್ಳುವ ಶಾಂತಿ ನಡಿಗೆ ಮೈಸೂರು ಬ್ಯಾಂಕ್ ವೃತ್ತವರೆಗೆ ನಡೆಯಲಿದೆ. ಬೆಳಗ್ಗೆ 7.30 ರಿಂದ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.               ರೋಟರಿ ನಂದಿನಿಯ ಅಧ್ಯಕ್ಷ ಮದುಸೂಧನ್ ಆರ್ ಬಿಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಂತಿ ಸಂದೇಶ ಸಾರಲು ಈ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು 50ಕ್ಕೂ ಹೆಚ್ಚು ರೋಟರಿ ಕ್ಲಬ್‍ಗಳು ಈ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ ಜೊತೆಗೆ ಬಿಳಿ, ನೀಲಿ, ಹಸಿರು, ಹಳದಿ ಬಲೂನ್‍ಗಳನ್ನು  ಇದೇ ಸಂದರ್ಭದಲ್ಲಿ ಹಾರಿ ಬಿಡುವ ಮೂಲಕ  ದೇಶದಲ್ಲಿ ಶಾಂತಿ ಸೌಹಾÀರ್ದತೆ ನೆಲೆಸ ಬೇಕು ಎಂಬ ಸಂದೇಶವನ್ನು ನೀಡಲಾಗುವುದು ಎಂದು ತಿಳಿಸಿದರು.              ಬಿಳಿ, ನೀಲಿ, ಹಸಿರು, ಹಳದಿ ಬಲೂನ್ ಗಳನ್ನು ಜಿಲ್ಲಾ ರೋಟರಿ ಗವರ್ನರ್ ಡಾ. ಸಮೀರ್ ಹರಿಣಿ ಮತ್ತು ಮತ್ತಿತರ ಗಣ್ಯರು ಹಾರಿ ಬಿಡಲಿದ್ದಾರೆ ಎಂದರು.

ಕರ್ನಾಟಕ ಬಹುಜನ ಫೆಡರೇಷನ್ ನ ಪದಾಧಿಕಾರಿಗಳ ಪ್ರಾಥಮಿಕ ಸಭೆ

Image
ಕರ್ನಾಟಕ ಬಹುಜನ ಫೆಡರೇಷನ್ ನ ಪದಾಧಿಕಾರಿಗಳ ಪ್ರಾಥಮಿಕ ಸಭೆ        ಕರ್ನಾಟಕ ಬಹುಜನ ಫೆಡರೇಷನ್ ನ ಪದಾಧಿಕಾರಿಗಳ ಪ್ರಾಥಮಿಕ ಸಭೆ ಬೆಂಗಳೂರಿನಲ್ಲಿಂದು ನಡೆಯಿತು. ಸಭೆಯಲ್ಲಿ ಅಧ್ಯಕ್ಷರಾದ ಜಿ.ಹೆಚ್.ಶಂಕರ್, ಉಪಾಧ್ಯಕ್ಷರಾದ ಆದರ್ಶ ಸಂಪತ್, ಸದಸ್ಯರಾದ ಎಸ್.ಆರ್.ವೇಣು, ಎಸ್.ಕೆ. ಶ್ರೀನಿವಾಸ್, ಹೇಮಂತ್ ಕುಮಾರ್, ಡಿ.ಸಿ ಹರೀಶ್ ಮತ್ತಿತರರು ಹಾಜರಿದ್ದರು. ಸಭೆಯಲ್ಲಿ ಪ್ರಮುಖವಾಗಿ ಪುಲಕೇಶಿ ನಗರ ವ್ಯಾಪ್ತಿಯಲ್ಲಿ ಇರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಪೌರಕಾರ್ಮಿಕರು ಹಾಗೂ ಅಲ್ಪಸಂಖ್ಯಾತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದರ ನಿವಾರಣೆಗಾಗಿ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಹಾಗೂ ಸರ್ಕಾರದ ಮೇಲೆ ಒತ್ತಡ ತರುವ ಕುರಿತು ಚರ್ಚೆ ನಡೆಸಲಾಯಿತು.  ವಿಡಿಯೊ ನೋಡಲು ಕೆಳಗೆ ಕ್ಲಿಕ್ ಮಾಡಿ  click to watch this video      ವಿಶೇಷವಾಗಿ ಪುಲಕೇಶಿ ನಗರಕ್ಕೆ ಅಗತ್ಯವಾಗಿ ಬೇಕಾಗಿರುವ ಮೂಲಸೌಕರ್ಯ ಒದಗಿಸುವ ಕುರಿತು ಚರ್ಚೆ ನಡೆಸಲಾಯಿತು. ಈ ಒಕ್ಕೂಟಕ್ಕೆ ಇನ್ನಷ್ಟು ಶಕ್ತಿ ತುಂಬುವ ಕುರಿತು ಪ್ರಮುಖವಾಗಿ ಚರ್ಚೆ ನಡೆಸಲಾಯಿತು.

ಹಿಂದೂ ಮಹಾಸಭಾ ಸಮಾವೇಶ

Image
  ಹಿಂದೂ ಮಹಾಸಭಾ ಸಮಾವೇಶ ಸ್ವಾಮಿ ಚಕ್ರಪಾಣಿ ಮಹಾರಾಜರಿಗೆ ಅಭಿನಂದನಾ ಸಮಾರಂಭ             ಅಖಿಲ ಭಾರತ ಹಿಂದೂ ಮಹಾಸಭಾ ವತಿಯಿಂದ ಇದೇ ಮಾರ್ಚ್ 15 ರಂದು ಬೆಂಗಳೂರಿನ ರಾಜಾಜಿನಗರದ ರಾಮಮಂದಿರ ಆಟದ ಮೈದಾನದಲ್ಲಿ ಹಿಂದೂ ಮಹಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಾಧ್ಯಕ್ಷ ಎಲ್.ಕೆ.ಸುವರ್ಣ ತಿಳಿಸಿದ್ದಾರೆ.             ಬೆಂಗಳೂರಿನಲ್ಲಿಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಸಮಾವೇಶದಲ್ಲಿ ಹಿಂದುತ್ವವಾದಿಯಾಗಿರುವ ಸ್ವಾಮಿ ಚಕ್ರಪಾಣಿ ಮಹಾರಾಜ್ ಮುಂಬೈನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೊಂದಿರುವ ಸ್ಥಳವನ್ನು ನ್ಯಾಯಾಲಯದ ಮೂಲಕ ಪಡೆದು ಆ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿ ದಾವುದ್ ಅವರ ಅಹಂಗೆ ತಕ್ಕ ಉತ್ತರ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದಿಸಲಾಗುವುದು ಎಂದು ಹೇಳಿದರು.      ಅಖಿಲ ಭಾರತ ಹಿಂದೂ ಮಹಾಸಭಾ ರಾಷ್ಟ್ರಧರ್ಮವನ್ನು ಕಾಪಾಡಲು ಹಾಗೂ ಹಿಂದೂ ಧರ್ಮದ ಒಗ್ಗಟ್ಟಿಗಾಗಿ ಶ್ರಮಿಸುತ್ತಿದೆ. ಯಾವುದೇ ಪ್ರತಿಫಲಾಕ್ಷಿಯಿಲ್ಲದೆ ಸಾವಿರಾರು ಕಾರ್ಯಕರ್ತರು ಪ್ರಾಮಾಣಿಕವಾಗಿ ಶಿಸ್ತಿನಿಂದ ಸಂಘಟನೆ ಮಾಡುತ್ತಿದ್ದರೂ ಕೆಲ ಅಪ್ರಾಮಾಣಿಕರು ಅಪ್ರಬುದ್ಧ ನಡವಳಿಕೆಯಿಂದ ದ್ರೋಹ ಬಗೆಯುತ್ತಿರುವುದು ಕಂಡುಬಂದಿದೆ. ಇದು ಸರಿಯಲ್ಲ, ಬೆಂಗಳೂರು ನಗರ ಅಧ್ಯಕ್ಷರಾಗಿದ್ದ ಅರುಣ್ ಪರಮೇಶ್ ರಾಜ್ ಶಿಸ್ತು ಉಲ್ಲಂಘಿಸಿ ಹಿರಿಯ ಮುಖಂಡರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾ

ಭಾರತದ ಮೊದಲ ಇಂಟಲಿಜೆಂಟ್ ಸೀಲಿಂಗ್ ಫ್ಯಾನ್ ಹ್ಯಾವೆಲ್ಸ್ ಕಾರ್ನೆಸಿಯಾ

Image
ಭಾರತದ ಮೊದಲ ಇಂಟಲಿಜೆಂಟ್ ಸೀಲಿಂಗ್ ಫ್ಯಾನ್ ಹ್ಯಾವೆಲ್ಸ್ ಕಾರ್ನೆಸಿಯಾ-1 ಬಿಡುಗಡೆ   ಬೆಂಗಳೂರು: ದೇಶದ ತಂತ್ರಜ್ಞಾನ ಆಧಾರಿತ ಫಾಸ್ಟ್ ಮೂವಿಂಗ್ ಎಲೆಕ್ಟ್ರಿಕಲ್ ಗೂಡ್ಸ್ (ಎಫ್‍ಎಂಇಜಿ) ಮತ್ತು ಕನ್ಸೂಮರ್ ಡ್ಯುರೇಬಲ್ ಕಂಪನಿಯಾಗಿರುವ ಹ್ಯಾವೆಲ್ಸ್ ಇಂಡಿಯಾ ಲಿಮಿಟೆಡ್ ದೇಶದ ಮೊದಲ ಇಂಟಲಿಜೆಂಟ್ ಫ್ಯಾನ್ ಆದ ಸ್ಮಾರ್ಟ್ ಮೋಡ್‍ನ ಕಾರ್ನೆಸಿಯಾ- I ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಫ್ಯಾನ್ ಅತ್ಯಂತ ಸುಧಾರಿತ ತಂತ್ರಜ್ಞಾನ- ಐಒಟಿಯನ್ನು ಹೊಂದಿದೆ. ಗ್ರಾಹಕರಿಗೆ ಅನುಕೂಲ ಮತ್ತು ಆರಾಮದಾಯಕತೆಯನ್ನು ಅತ್ಯಂತ ಕ್ಷಿಪ್ರಗತಿಯಲ್ಲಿ ತಂದುಕೊಡಲಿದೆ. ಈ ಚತುರ ಫ್ಯಾನ್ ಆಕರ್ಷಕ ಬೆಲೆಯಾದ 4500 ರೂಪಾಯಿಗಳಲ್ಲಿ ಲಭ್ಯವಿದೆ.      ಈ ಹೊಸ ಫ್ಯಾನ್ ಅನ್ನು ಬಿಡುಗಡೆ ಮಾಡಿ ಮಾತನಾಡಿದ ಹ್ಯಾವೆಲ್ಸ್ ಇಂಡಿಯಾ ಲಿಮಿಟೆಡ್‍ನ ಎಲೆಕ್ಟ್ರಿಕಲ್ ಕನ್ಸೂಮರ್ ಡ್ಯುರೇಬಲ್ಸ್‍ನ ಅಧ್ಯಕ್ಷ ರವೀಂದ್ರ ಸಿಂಗ್ ನೇಗಿ ಅವರು, ``ಹ್ಯಾವೆಲ್ಸ್ ಆವಿಷ್ಕಾರಕ, ತಂತ್ರಜ್ಞಾನ ಸುಧಾರಣೆ ಮತ್ತು ವಿನೂತನ ವೈಶಿಷ್ಟ್ಯತೆಗಳನ್ನು ಗ್ರಾಹಕರಿಗೆ ನೀಡುತ್ತಾ ಬಂದಿದೆ. ನಮ್ಮ ಉತ್ಪನ್ನ ತತ್ತ್ವಕ್ಕೆ ಕಾರ್ನೆಸಿಯಾ- I ಒಂದು ಸ್ಪಷ್ಟ ಉದಾಹರಣೆಯಾಗಿದೆ. ಈ ಚತುರ ಫ್ಯಾನ್ ತಾಪಮಾನ ಮತ್ತು ಆದ್ರ್ರತೆಯನ್ನು ಗ್ರಹಿಸಲಿದೆ. ಇದಕ್ಕೆ ತಕ್ಕಂತೆ ನಮ್ಮ ಗ್ರಾಹಕರಿಗೆ ಸರಿಯಾದ ವೇಗದಲ್ಲಿ ಗಾಳಿಯನ್ನು ನೀಡುತ್ತದೆ. ಗುಣಮಟ್ಟದ `ಸೆಗ್ಮೆಂಟ್ ಫಸ್ಟ್’ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಉದ್ಯಮದಲ್ಲಿ