ಭಾರತದ ಮೊದಲ ಇಂಟಲಿಜೆಂಟ್ ಸೀಲಿಂಗ್ ಫ್ಯಾನ್ ಹ್ಯಾವೆಲ್ಸ್ ಕಾರ್ನೆಸಿಯಾ

ಭಾರತದ ಮೊದಲ ಇಂಟಲಿಜೆಂಟ್ ಸೀಲಿಂಗ್ ಫ್ಯಾನ್ ಹ್ಯಾವೆಲ್ಸ್ ಕಾರ್ನೆಸಿಯಾ-1 ಬಿಡುಗಡೆ 


ಬೆಂಗಳೂರು: ದೇಶದ ತಂತ್ರಜ್ಞಾನ ಆಧಾರಿತ ಫಾಸ್ಟ್ ಮೂವಿಂಗ್ ಎಲೆಕ್ಟ್ರಿಕಲ್ ಗೂಡ್ಸ್ (ಎಫ್‍ಎಂಇಜಿ) ಮತ್ತು ಕನ್ಸೂಮರ್ ಡ್ಯುರೇಬಲ್ ಕಂಪನಿಯಾಗಿರುವ ಹ್ಯಾವೆಲ್ಸ್ ಇಂಡಿಯಾ ಲಿಮಿಟೆಡ್ ದೇಶದ ಮೊದಲ ಇಂಟಲಿಜೆಂಟ್ ಫ್ಯಾನ್ ಆದ ಸ್ಮಾರ್ಟ್ ಮೋಡ್‍ನ ಕಾರ್ನೆಸಿಯಾ- I ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಫ್ಯಾನ್ ಅತ್ಯಂತ ಸುಧಾರಿತ ತಂತ್ರಜ್ಞಾನ- ಐಒಟಿಯನ್ನು ಹೊಂದಿದೆ. ಗ್ರಾಹಕರಿಗೆ ಅನುಕೂಲ ಮತ್ತು ಆರಾಮದಾಯಕತೆಯನ್ನು ಅತ್ಯಂತ ಕ್ಷಿಪ್ರಗತಿಯಲ್ಲಿ ತಂದುಕೊಡಲಿದೆ. ಈ ಚತುರ ಫ್ಯಾನ್ ಆಕರ್ಷಕ ಬೆಲೆಯಾದ 4500 ರೂಪಾಯಿಗಳಲ್ಲಿ ಲಭ್ಯವಿದೆ.

     ಈ ಹೊಸ ಫ್ಯಾನ್ ಅನ್ನು ಬಿಡುಗಡೆ ಮಾಡಿ ಮಾತನಾಡಿದ ಹ್ಯಾವೆಲ್ಸ್ ಇಂಡಿಯಾ ಲಿಮಿಟೆಡ್‍ನ ಎಲೆಕ್ಟ್ರಿಕಲ್ ಕನ್ಸೂಮರ್ ಡ್ಯುರೇಬಲ್ಸ್‍ನ ಅಧ್ಯಕ್ಷ ರವೀಂದ್ರ ಸಿಂಗ್ ನೇಗಿ ಅವರು, ``ಹ್ಯಾವೆಲ್ಸ್ ಆವಿಷ್ಕಾರಕ, ತಂತ್ರಜ್ಞಾನ ಸುಧಾರಣೆ ಮತ್ತು ವಿನೂತನ ವೈಶಿಷ್ಟ್ಯತೆಗಳನ್ನು ಗ್ರಾಹಕರಿಗೆ ನೀಡುತ್ತಾ ಬಂದಿದೆ. ನಮ್ಮ ಉತ್ಪನ್ನ ತತ್ತ್ವಕ್ಕೆ ಕಾರ್ನೆಸಿಯಾ- I ಒಂದು ಸ್ಪಷ್ಟ ಉದಾಹರಣೆಯಾಗಿದೆ. ಈ ಚತುರ ಫ್ಯಾನ್ ತಾಪಮಾನ ಮತ್ತು ಆದ್ರ್ರತೆಯನ್ನು ಗ್ರಹಿಸಲಿದೆ. ಇದಕ್ಕೆ ತಕ್ಕಂತೆ ನಮ್ಮ ಗ್ರಾಹಕರಿಗೆ ಸರಿಯಾದ ವೇಗದಲ್ಲಿ ಗಾಳಿಯನ್ನು ನೀಡುತ್ತದೆ. ಗುಣಮಟ್ಟದ `ಸೆಗ್ಮೆಂಟ್ ಫಸ್ಟ್’ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಉದ್ಯಮದಲ್ಲಿ ತನ್ನದೇ ಆದ ಫೂಟ್‍ಪ್ರಿಂಟ್ ಅನ್ನು ಬಲವರ್ಧನೆಗೊಳಿಸಲಿದೆ. ವಿಭಿನ್ನವಾಗಿ ಮಾಡಬೇಕೆಂಬ ನಮ್ಮ ತತ್ತ್ವದ ಆಧಾರದಲ್ಲಿ ನಮ್ಮ ಗ್ರಾಹಕರನ್ನು ಸಂತುಷ್ಟಗೊಳಿಸಲಿದೆ’’ ಎಂದು ತಿಳಿಸಿದರು.

     ಅಲೆಕ್ಸಾ & ಗೂಗಲ್ ಹೋಂನಂತಹ ಧ್ವನಿ ಆಧಾರಿತ ಡಿವೈಸ್‍ಗಳಿಗೂ ಅಕ್ಸೆಸ್ ಆಗುವ ಈ ಸ್ಮಾರ್ಟ್‍ಫ್ಯಾನ್ ಮೊಬೈಲ್ ಅಪ್ಲಿಕೇಷನ್‍ಗಳಿಂದಲೂ ಕಾರ್ಯ ನಿರ್ವಹಣೆಯಾಗುತ್ತದೆ. ಕಾರ್ನೆಸಿಯಾ- I ಮಲ್ಟಿ ಯೂಸರ್ ಮೋಡ್‍ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಮೂಲಕ ಒಂದು ಫ್ಯಾನ್ ಅನ್ನು ಹಲವು ಮಂದಿ ಆಪರೇಟ್ ಮಾಡಬಹುದಾಗಿದೆ. ಸ್ಮಾರ್ಟ್ ಮೋಡ್ ಕೊಠಡಿಯ ತಾಪಮಾನ ಮತ್ತು ಆದ್ರ್ರತೆಯನ್ನು ಗ್ರಹಿಸಿ ಅದಕ್ಕೆ ತಕ್ಕಂತೆ ವೇಗವನ್ನು ಹೊಂದಿಸಿಕೊಂಡು ಆಹ್ಲಾದಕರವಾದ ಗಾಳಿಯನ್ನು ನೀಡಲಿದೆ. ಇದಲ್ಲದೇ, ಸ್ಲೀಪ್ ಮತ್ತು ಬ್ರೀಜ್‍ನೊಂದಿಗೆ ರಾತ್ರಿ ವೇಳೆ ನೈಸರ್ಗಿಕವಾದ ತಂಗಾಳಿಯನ್ನು ನೀಡಲಿದೆ. ಐದು ಹಂತದ ವೇಗ ನಿಯಂತ್ರಕಗಳನ್ನು ಹೊಂದಿದ್ದು, ಟೈಮರ್ ಸೆಟ್ಟಿಂಗ್ ಮತ್ತು ಆಟೋಮ್ಯಾಟಿಕ್ ಆನ್ ಮತ್ತು ಆಫ್ ಸೌಲಭ್ಯವನ್ನು ಹೊಂದಿದೆ.

      ಪ್ರಸ್ತುತ ಭಾರತದ ಸಂಘಟಿತ ಫ್ಯಾನ್ ಮಾರುಕಟ್ಟೆಯು 8000 ಕೋಟಿ ರೂಪಾಯಿಗಳದ್ದಾಗಿದೆ. ಹ್ಯಾವೆಲ್ಸ್ 2003 ರಲ್ಲಿ ಫ್ಯಾನ್ ವಿಭಾಗಕ್ಕೆ ಕಾಲಿರಿಸಿದ್ದು, ಪ್ರಸ್ತುತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಫ್ಯಾನ್ ಕಂಪನಿಗಳಲ್ಲಿ ಒಂದಾಗಿದೆ. ಅತ್ಯಂತ ವಿಶ್ವಾಸಾರ್ಹವಾದ ಮತ್ತು ದೇಶದ ಟಾಪ್ 2 ಕಂಪನಿಗಳ ಪೈಕಿ ಒಂದಾಗಿದೆ. ಕಂಪನಿಯು ಪ್ರಸ್ತುತ ಪ್ರೀಮಿಯಂ & ಸೂಪರ್ ಪ್ರೀಮಿಯಂ ವಿಭಾಗದಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಅತ್ಯುತ್ತಮವಾದ ಕಾರ್ಯದಕ್ಷತೆ, ಅಲಂಕಾರಿಕ ಮತ್ತು ಇಂಧನ ಉಳಿತಾಯದಲ್ಲಿ ಉತ್ತಮವೆನಿಸಿದೆ. ಈ ಅಂಶಗಳನ್ನು ಪರಿಗಣಿಸಿದ ಗ್ರಾಹಕರು ಹ್ಯಾವೆಲ್ಸ್ ಕಡೆಗೆ ಹೆಚ್ಚು ಒಲವು ತೋರುತ್ತಿದ್ದಾರೆ.
 
    ಹ್ಯಾವೆಲ್ಸ್ ಉತ್ತರಖಂಡದ ಹರಿದ್ವಾರದಲ್ಲಿ ಅತ್ಯಾಧುನಿಕವಾದ ಫ್ಯಾನ್ ತಯಾರಿಕಾ ಘಟಕವನ್ನು ಹೊಂದಿದೆ. ಭಾರತದ ಮೊದಲ ಮತ್ತು ದೊಡ್ಡ ಫ್ಯಾನ್ ತಯಾರಿಕಾ ಘಟಕ ಇದಾಗಿದೆ. ಸೀಲಿಂಗ್, ಟೇಬಲ್, ವಾಲ್, ಎಕ್ಸಾಸ್ಟ್ & ಪೆಡೆಸ್ಟಲ್ ಸೇರಿದಂತೆ ಇನ್ನೂ ಹಲವಾರು ಬಗೆಯ ಫ್ಯಾನ್‍ಗಳನ್ನು ಒಂದೇ ಸೂರಿನಡಿ ತಯಾರಿಸುತ್ತಿದೆ. ಪ್ರಸ್ತುತ ಈ ಘಟಕದಲ್ಲಿ ವಾರ್ಷಿಕ 10 ದಶಲಕ್ಷ ಫ್ಯಾನ್‍ಗಳನ್ನು ತಯಾರಿಸುವ ಸಾಮಥ್ರ್ಯವನ್ನು ಹೊಂದಿದೆ. ಆಟೋಮೇಟೆಡ್ ಸಿಎನ್‍ಸಿ ಮಶಿನ್‍ಗಳು, ಕಂಪ್ಯೂಟರಿಕೃತ ಕನ್ವೇಯರ್ ಅಸೆಂಬ್ಲಿ ಲೈನ್ ಮತ್ತು ಪರೀಕ್ಷಾ ಸೌಲಭ್ಯಗಳನ್ನು ಹೊಂದಿದೆ.


Comments

Popular posts from this blog

RACE FOR 7: BANGALORE WALKS FOR RARE DISEASES

ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದ ಸಿ ವಿ ರಾಮಾಂಜಿ

"ಕುಚ್ ಈಸ್ ತರ"