Posts

Showing posts from September, 2018

ವಿಜೇತರಾದ ರೂಪದರ್ಶಿಗಳಿಗೆ ರಾಗಿಣಿ ದ್ವಿವೇದಿ

Image
ಫ್ರಾಂಕ್ಲಿನ್, ಮಧುಲಿಕ ಶ್ರೀರಾಮ್‍ಗೆ ``ಫೇಸ್ ಆಫ್ ಪೀಪಲ್’’ ಕಿರೀಟ ವಿಜೇತರಾದ ರೂಪದರ್ಶಿಗಳಿಗೆ ರಾಗಿಣಿ ದ್ವಿವೇದಿ     ಬೆಂಗಳೂರು, ಸೆಪ್ಟಂಬರ್ 11, 2018: ಆದಿತ್ಯ ಬಿರ್ಲಾ ಫ್ಯಾಷನ್ ಅಂಡ್ ರೀಟೇಲ್ ಲಿಮಿಟೆಡ್‍ನ ಯುವಪೀಳಿಗೆಯ ನೆಚ್ಚಿನ ಬ್ರ್ಯಾಂಡ್ ಆಗಿರುವ  ಪೀಪಲ್ ಬೆಂಗಳೂರಿನ  ನಾಗರಭಾವಿಯಲ್ಲಿರುವ ತನ್ನ ಸ್ಟೋರ್‍ನಲ್ಲಿ ನಗರದ ಅತಿದೊಡ್ಡ ಮಾಡೆಲ್ ಶೋಧ ಕಾರ್ಯಕ್ರಮವಾದ ``ಫೇಸ್ ಆಫ್ ಪೀಪಲ್’’ ಅನ್ನು ಆರಂಭ ಮಾಡಿದೆ. ಈ ರೂಪದರ್ಶಿಗಳ ಶೋಧ ಅಭಿಯಾನದಲ್ಲಿ 300 ಕ್ಕೂ ಹೆಚ್ಚು ಜನರು ಮತ್ತು ರೂಪದರ್ಶಿಗಳು ಪಾಲ್ಗೊಂಡು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಇದರಲ್ಲಿ ವಿಜೇತರಾದ ಸೇಂಟ್ ಜೋಸೆಫ್ ಸ್ವಾಯತ್ತ ಕಾಲೇಜಿನ ಫ್ರಾಂಕ್ಲಿನ್ ವೈ ಮತ್ತು ಜೈನ್ ಕಾಲೇಜಿನ ಮಧುಲಿಕ ಶ್ರೀರಾಮ್ ಅವರಿಗೆ  ಸ್ಯಾಂಡಲ್‍ವುಡ್‍ನ ಖ್ಯಾತ ತಾರೆ ರಾಗಿಣಿ ದ್ವಿವೇದಿ ಅವರು ಕಿರೀಟ ತೊಡಿಸಿದರು.       ಇದಲ್ಲದೇ, ಇಬ್ಬರಿಗೂ ತಲಾ 20,000 ರೂಪಾಯಿಗಳ ನಗದು ಬಹುಮಾನವನ್ನೂ ನೀಡಲಾಯಿತು. ಈ ಇಬ್ಬರೂ ರೂಪದರ್ಶಿಗಳಿಗೆ ಪೀಪಲ್‍ನ ಡಿಜಿಟಲ್ ಜಾಹೀರಾತು ಮತ್ತು ಹೊರಾಂಗಣ ಹೋರ್ಡಿಂಗ್‍ಗಳಲ್ಲಿ ಜಾಹೀರಾತಿನಲ್ಲಿ ರೂಪದರ್ಶಿಗಳಾಗುವ ಅವಕಾಶವೂ ಸಿಕ್ಕಿದೆ.         ಈ ಸಂದರ್ಭದಲ್ಲಿ ಮಾತನಾಡಿದ ಆದಿತ್ಯ ಬಿರ್ಲಾ ಫ್ಯಾಷನ್ ಅಂಡ್ ರೀಟೇಲ್ ಲಿಮಿಟೆಡ್‍ನ ಪೀಪಲ್‍ನ ಬ್ರ್ಯಾಂಡ್ ಮುಖ್ಯಸ್ಥರಾದ ರಶ್ಮಿ ಶುಕ್ಲಾ ಅವರು, ``ವಿಭಿನ್ನ ಬಗೆಯ ಸ್ಟೈಲ್‍ಗಳು ಮತ್ತು ಹೊಸ ಹೊಸ ವಿನ್ಯ

2018-19 ರ ಬಿಬಿಎಂಪಿ ಮೇಯರ್ ಪಟ್ಟ ?

Image
2018-19 ರ ಬಿಬಿಎಂಪಿ ಮೇಯರ್ ಪಟ್ಟ ? ಮೇಯರ್ ಸ್ಥಾನದ ಮೇಲೆ ಜೆಡಿಎಸ್ ಕಣ್ಣು   ನಮಗೊಂದು ಬಾರಿ ಪಟ್ಟ ಕಟ್ಟಿ               ಬೆಂಗಳೂರು: ಬಿಬಿಎಂಪಿ ಮೇಯರ್ ಪಟ್ಟಕ್ಕಾಗಿ ಕಾಂಗ್ರೆಸ್‍ನಲ್ಲಿ ಭಾರೀ ಪೈಪೋಟಿ ನಡೆಯುತ್ತಿರುವ ಬೆನ್ನಲ್ಲೇ ಜೆಡಿಎಸ್ ಕೂಡ ಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟಿದೆ.       ಸದ್ಯ ಸೆ.28ರಂದು ನಡೆಯಲಿರುವ ಚುನಾವಣೆಯಲ್ಲಿ ಸಾಮಾನ್ಯ ವರ್ಗಕ್ಕೆ ಸೇರಿದ ಮಹಿಳೆಯೊಬ್ಬರು ಮಹಾಪೌರರಾಗಿ ಆಯ್ಕೆಯಾಗಲಿದ್ದಾರೆ. ಆದರೆ ಮೇಯರ್ ಸ್ಥಾನಕ್ಕೆ ಜಯನಗರ ವಾರ್ಡ್‍ನ ಕಾಂಗ್ರೆಸ್ ಸದಸ್ಯೆ ಗಂಗಾಂಬಿಕೆ ಅಥವಾ ಶಾಂತಿನಗರ ವಾರ್ಡ್‍ನ ಸೌಮ್ಯ ಶಿವಕುಮಾರ್ ಪೈಕಿ ಯಾರನ್ನು ಆಯ್ಕೆ ಮಾಡಬಹುದು ಎಂಬ ಕುತೂಹಲ ಹೆಚ್ಚಾಗಿದೆ.           ಇದರ ಬೆನ್ನಲ್ಲೇ ವಿಪಕ್ಷ ಬಿಜೆಪಿಯೂ ಮೇಯರ್ ಸ್ಥಾನ ದಕ್ಕಿಸಿಕೊಳ್ಳಲು ಅಗತ್ಯ ಸಂಖ್ಯಾಬಲ ಹೊಂದಿಲ್ಲವಾದರೂ ತಮ್ಮ ಪಕ್ಷದ ಮಹಿಳೆ ಸದಸ್ಯೆಯನ್ನು ಚುನಾವಣಾ ಕಣಕ್ಕಿಳಿಸಲು ತೀರ್ಮಾನ ಕೈಗೊಂಡಿದೆ. ಅಲ್ಲದೆ, ಬಿಜೆಪಿ ಕಾಂಗ್ರೆಸ್‍ನಲ್ಲೀ ಮೇಯರ್ ಪಟ್ಟಕ್ಕಾಗಿ ನಡೆಯುತ್ತಿರುವ ಭಾರೀ ಪೈಪೋಟಿಯನ್ನೆ ಬಳಸಿಕೊಂಡು ಮೇಯರ್ ಸ್ಥಾನ ಗಿಟ್ಟಿಸಿಕೊಳ್ಳಲು ಭಾರೀ ರಣತಂತ್ರ ರೂಪಿಸಿದೆ. ಇನ್ನು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜೆಡಿಎಸ್ ಕೂಡ ಸುಮ್ಮನೇ ಕೂರದೇ ತಾನು ಕೂಡ ಮೇಯರ್ ಪಟ್ಟಕ್ಕೆ ಇನ್ನಿಲ್ಲದ ಸರ್ಕಸ್ ಆರಂಭಿಸಿದೆ.          ಪ್ರಸುತ್ತ ಕಾಂಗ್ರೆಸ್‍ಗೆ ಮೂರು ಬಾರಿ ಮೇಯರ್ ಸ್ಥಾನ ಬಿಟ್ಟು