ವಿಜೇತರಾದ ರೂಪದರ್ಶಿಗಳಿಗೆ ರಾಗಿಣಿ ದ್ವಿವೇದಿ

ಫ್ರಾಂಕ್ಲಿನ್, ಮಧುಲಿಕ ಶ್ರೀರಾಮ್‍ಗೆ
``ಫೇಸ್ ಆಫ್ ಪೀಪಲ್’’ ಕಿರೀಟ

ವಿಜೇತರಾದ ರೂಪದರ್ಶಿಗಳಿಗೆ ರಾಗಿಣಿ ದ್ವಿವೇದಿ

    ಬೆಂಗಳೂರು, ಸೆಪ್ಟಂಬರ್ 11, 2018: ಆದಿತ್ಯ ಬಿರ್ಲಾ ಫ್ಯಾಷನ್ ಅಂಡ್ ರೀಟೇಲ್ ಲಿಮಿಟೆಡ್‍ನ ಯುವಪೀಳಿಗೆಯ ನೆಚ್ಚಿನ ಬ್ರ್ಯಾಂಡ್ ಆಗಿರುವ  ಪೀಪಲ್ ಬೆಂಗಳೂರಿನ  ನಾಗರಭಾವಿಯಲ್ಲಿರುವ ತನ್ನ ಸ್ಟೋರ್‍ನಲ್ಲಿ ನಗರದ ಅತಿದೊಡ್ಡ ಮಾಡೆಲ್ ಶೋಧ ಕಾರ್ಯಕ್ರಮವಾದ ``ಫೇಸ್ ಆಫ್ ಪೀಪಲ್’’ ಅನ್ನು ಆರಂಭ ಮಾಡಿದೆ. ಈ ರೂಪದರ್ಶಿಗಳ ಶೋಧ ಅಭಿಯಾನದಲ್ಲಿ 300 ಕ್ಕೂ ಹೆಚ್ಚು ಜನರು ಮತ್ತು ರೂಪದರ್ಶಿಗಳು ಪಾಲ್ಗೊಂಡು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಇದರಲ್ಲಿ ವಿಜೇತರಾದ ಸೇಂಟ್ ಜೋಸೆಫ್ ಸ್ವಾಯತ್ತ ಕಾಲೇಜಿನ ಫ್ರಾಂಕ್ಲಿನ್ ವೈ ಮತ್ತು ಜೈನ್ ಕಾಲೇಜಿನ ಮಧುಲಿಕ ಶ್ರೀರಾಮ್ ಅವರಿಗೆ 
ಸ್ಯಾಂಡಲ್‍ವುಡ್‍ನ ಖ್ಯಾತ ತಾರೆ ರಾಗಿಣಿ ದ್ವಿವೇದಿ ಅವರು ಕಿರೀಟ ತೊಡಿಸಿದರು.
      ಇದಲ್ಲದೇ, ಇಬ್ಬರಿಗೂ ತಲಾ 20,000 ರೂಪಾಯಿಗಳ ನಗದು ಬಹುಮಾನವನ್ನೂ ನೀಡಲಾಯಿತು. ಈ ಇಬ್ಬರೂ ರೂಪದರ್ಶಿಗಳಿಗೆ ಪೀಪಲ್‍ನ ಡಿಜಿಟಲ್ ಜಾಹೀರಾತು ಮತ್ತು ಹೊರಾಂಗಣ ಹೋರ್ಡಿಂಗ್‍ಗಳಲ್ಲಿ ಜಾಹೀರಾತಿನಲ್ಲಿ ರೂಪದರ್ಶಿಗಳಾಗುವ ಅವಕಾಶವೂ ಸಿಕ್ಕಿದೆ.
        ಈ ಸಂದರ್ಭದಲ್ಲಿ ಮಾತನಾಡಿದ ಆದಿತ್ಯ ಬಿರ್ಲಾ ಫ್ಯಾಷನ್ ಅಂಡ್ ರೀಟೇಲ್ ಲಿಮಿಟೆಡ್‍ನ ಪೀಪಲ್‍ನ ಬ್ರ್ಯಾಂಡ್ ಮುಖ್ಯಸ್ಥರಾದ ರಶ್ಮಿ ಶುಕ್ಲಾ ಅವರು, ``ವಿಭಿನ್ನ ಬಗೆಯ ಸ್ಟೈಲ್‍ಗಳು ಮತ್ತು ಹೊಸ ಹೊಸ ವಿನ್ಯಾಸಗಳಿಗೆ ನಾಗರಭಾವಿ ಮೂಲ ವೇದಿಕೆಯಾಗಿದೆ ಮತ್ತು ಇದಕ್ಕೆ ಪ್ರಶಸ್ತವಾದ ಸ್ಥಳವಾಗಿದೆ. 
ಈ ನಮ್ಮ ``ಫೇಸ್ ಆಫ್ ಪೀಪಲ್’’ ಎಂಬ ಈ ಫ್ಯಾಷನ್ ಶೋ ಮೂಲಕ ನಾವು ನಮ್ಮ ಗ್ರಾಹಕರನ್ನು ತಲುಪುವತ್ತ ಹೆಜ್ಜೆ ಇಟ್ಟಿದ್ದೇವೆ. ಪೀಪಲ್ ಸ್ಟೋರ್‍ನಲ್ಲಿ ನಾವು ನಮ್ಮ ಗ್ರಾಹಕರಿಗೆ ಪ್ರತಿ ವಾರ ಕೈಗೆಟುಕುವ ದರದಲ್ಲಿ ಹೊಸ ಹೊಸ ಸ್ಟೈಲ್‍ಗಳ ಉಡುಪುಗಳನ್ನು ಪರಿಚಯಿಸುತ್ತಿದ್ದೇವೆ. ಇಲ್ಲಿ ಟ್ರೆಂಡ್ ಸೆಟ್ಟಿಂಗ್‍ನ 1200 ಕ್ಕೂ ಹೆಚ್ಚು 
ಸ್ಟೈಲ್‍ಗಳ ಉತ್ಪನ್ನಗಳು ಲಭ್ಯವಿದ್ದು, ಇವುಗಳ ಬೆಲೆ 249 ರೂಪಾಯಿಗಳಿಂದ ಆರಂಭವಾಗುತ್ತದೆ. 
     ಈ ನಮ್ಮ ಕೊಡುಗೆಗಳು ಮಾರುಕಟ್ಟೆಯಲ್ಲಿ ಗ್ರಾಹಕರಲ್ಲಿ ಬೆಳೆಯುತ್ತಿರುವ ಬೇಡಿಕೆಯನ್ನು ಪೂರೈಸಲಿದೆ ಎಂಬ 
ವಿಶ್ವಾಸ ನಮಗಿದೆ’’ ಎಂದು ತಿಳಿಸಿದರು.
       ನಾಗರಭಾವಿಯ 80 ಅಡಿ ರಸ್ತೆಯಲ್ಲಿ 4200 ಚದರಡಿ ವಿಸ್ತೀರ್ಣದ ಈ ಪೀಪಲ್ ಸ್ಟೋರ್ ಇತ್ತೀಚಿನ ಹೊಸ ಹೊಸ ವಿನ್ಯಾಸದ ಸಂಗ್ರಹವನ್ನು ಹೊಂದಿದ ಅತ್ಯುತ್ತಮವಾದ ಸ್ಟೋರ್ ಎನಿಸಿದೆ. ಇಲ್ಲಿರುವ ಬಹುವಿಧದ ಉತ್ಪನ್ನಗಳು ಕೈಗೆಟುಕುವ ದರದಲ್ಲಿ ಲಭ್ಯವಿದ್ದು, ಗ್ರಾಹಕಸ್ನೇಹಿಯಾಗಿವೆ. 
   ಜಗತ್ತಿನಾದ್ಯಂತ ಜನಪ್ರಿಯವಾಗಿರುವ ಅತ್ಯುತ್ತಮ ಸಂಗ್ರಹಗಳನ್ನು ಹೊಂದಿದ್ದು, ಇದರಲ್ಲಿ ಪ್ರಮುಖವಾಗಿ ಕಾಶುವಲ್ ಶರ್ಟ್‍ಗಳು, ಟೀ-ಶರ್ಟ್‍ಗಳು, ಟಾಪ್ಸ್, ಕುರ್ತಾಗಳು ಮತ್ತು ಫ್ಯೂಷನ್ ಟಾಪ್ಸ್, ಜೀನ್ಸ್, ವಿಂಟರ್-ವೇರ್ ಮತ್ತು ಇತರೆ ಉತ್ಪನ್ನಗಳು ಲಭ್ಯವಿವೆ. ಇದಲ್ಲದೇ, ಶರತ್ಕಾಲ 2018 ಸಂಗ್ರಹಗಳನ್ನೂ ಹೊಂದಿದ್ದು, ಗ್ರಾಹಕರ ಮೆಚ್ಚಿನ ಮತ್ತು ನೆಚ್ಚಿನ ಉಡುಪುಗಳನ್ನು ಪೂರೈಸುತ್ತಿದೆ.
       ಈ ಪೀಪಲ್ ಸ್ಟೋರ್‍ನಲ್ಲಿ ಗ್ರಾಹಕರು 249 ರೂಪಾಯಿಗಳಿಂದ ಆರಂಭವಾಗುವ ಉತ್ಪನ್ನಗಳನ್ನು ಖರೀದಿಸಿ ತಮ್ಮ ಶಾಪಿಂಗ್‍ಗೆ ಮತ್ತಷ್ಟು ಮೆರಗು ತಂದುಕೊಳ್ಳಬಹುದಾಗಿದೆ

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ