Posts

Showing posts from May, 2018

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Image
ಕೇಂದ್ರ ಸರ್ಕಾರದ  ವಿರುದ್ಧ ಕಾಂಗ್ರೆಸ್ ಪ್ರತಿಭಟನೆ    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕೇಂದ್ರದ ತನಿಖಾ ತಂಡಗಳನ್ನು ಬಳಸಿಕೊಂಡು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಸೇಡು ತೀರಿಸಿಕೊಳ್ಳುವ ಕಾರ್ಯ ಮಾಡುತ್ತಿದ್ದಾರೆ ಎಂದು  ಆರೋಪಿಸಿ  ರಾಜ್ಯ ಕಾಂಗ್ರೆಸ್ ನಾಯಕರು  ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು.      ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಕಾಂಗ್ರೆಸ್ ಮುಖಂಡ ಎಸ್. ಮನೋಹರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.        ಮನೋಹರ್ ಮಾತನಾಡಿ, ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸಿಬಿಐ ಬಳಸಿಕೊಂಡು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ದಾಳಿ ಮಾಡಿಸಿ, ಸೇಡು ತೀರಿಸಿಕೊಳ್ಳುವ ಯತ್ನ ಮಾಡಿತ್ತಿದೆ. ಇಂದು ನಮ್ಮ ನಾಯಕರಾದ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ವಿರುದ್ಧ ಸಿಬಿಐ ದಾಳಿಗೆ ಮುಂದಾಗಿರುವ  ವಿಷಯ ತಿಳಿದಿದೆ. ಇದರ ವಿರುದ್ಧ ಅವರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ನಮ್ಮ ನಾಯಕರ ವಿರುದ್ಧ ಕೇಂದ್ರ ಸರ್ಕಾರಸೇಡಿನ ರಾಜಕಾರಣ ಮಾಡುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.          ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿಶ್ ಷಾ ಮೋಡಿ ರಾಜರಾಜೇಶ್ವರಿ ನಗರ ದಲ್ಲಿ ನಡೆದಿಲ್ಲ. ಮುನಿರತ್ನ ಗೆದ್ದಿದ್ದಾರೆ. ಇವರ ಅರ್ಧದಷ್ಟು ಮತವನ್ನು ಕೂಡ ಬಿಜೆಪಿ, ಜೆಡಿಎಸ್ ಸೇರಿ ಪಡೆದಿಲ್ಲ. ಸಿದ್ದರಾಮಯ್ಯ ನವರಜನಪರ ಕಾರ್ಯಕ್ಕೆ ಮತದಾರರು ಇನ್ನೊಂದ

ಕರ್ನಾಟಕ ಎಫ್ಎಂಸಿಜಿ ಡಿಸ್ಟ್ರಿಬ್ಯೂಟರ್ಸ್ ವೆಲ್ಫೇರ್ ಅಸೋಸಿಯೇಷನ್ ಮೊದಲ ವಾರ್ಷಿಕೋತ್ಸವ

Image
ಕರ್ನಾಟಕ ಎಫ್ಎಂಸಿಜಿ ಡಿಸ್ಟ್ರಿಬ್ಯೂಟರ್ಸ್ ವೆಲ್ಫೇರ್ ಅಸೋಸಿಯೇಷನ್  ಮೊದಲ  ವಾರ್ಷಿಕೋತ್ಸವ           ಕರ್ನಾಟಕ ಎಫ್ಎಂಸಿಜಿ ಡಿಸ್ಟ್ರಿಬ್ಯೂಟರ್ಸ್ ವೆಲ್ಫೇರ್ ಅಸೋಸಿಯೇಷನ್  ಮೊದಲ  ವಾರ್ಷಿಕೋತ್ಸವವನ್ನು ಬೆಂಗಳೂರಿನ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮವು  ದೀಪ ಬೆಳಗುವ ಮೂಲಕ  ಪ್ರಾರಂಭಿಸಲಾಯಿತು.            ನಂತರ  ಮಾತನಾಡಿದ  ಅಸೋಸಿಯೇಷನ್  ಅಧ್ಯಕ್ಷರಾದ   ಶ್ರೀ ಜಯಂತ್ ಗಾಣಿಗ,   ನಮ್ಮ ಅಸೋಸಿಯೇಷನ್ ಒಂದು ವರ್ಷ ಪೂರ್ಣಗೊಂಡಿದೆ ಅದಕ್ಕೆ ನನಗೆ  ತುಂಬಾ ಸಂತೋಷವಾಗಿದೆ ಈ ಒಂದು ವರ್ಷದಲ್ಲಿ ಎಲ್ಲ ಜಿಲ್ಲೆಯ ಅಧ್ಯಕ್ಷರೊಡನೆ  ವಿತರಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಚರ್ಚೆ ನಡೆಸಿದ್ದೇನೆ, ಮುಂಬರುವ ದಿನಗಳಲ್ಲಿ ತೊಂದರೆಗಳು ಸರಿಪಡಿಸಲು  ಹಾಗೂ ವಿತರಕರಿಗೆ ಸಿಗಬೇಕಾದ ಸೌಲತ್ತುಗಳನ್ನು  ಕೊಡಿಸಲು ಎಲ್ಲಾ ಜಿಲ್ಲೆಯ ಅಧ್ಯಕ್ಷರು ಒಟ್ಟುಗೂಡಿ ಓಡಾಡುತ್ತೇವೆ ಎಂದು ಹೇಳಿದರು.            ಈ ಸಂದರ್ಭದಲ್ಲಿ   ಧೈರ್ಯ ಶಾಲಾ ಪಾಟೀಲ್ , ಸುಭಾಷ್ ಮತ್ತು   ರಾಜ್ಯದ ವಿವಿಧ ಜಿಲ್ಲೆಯ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು

ಬಿ.ಎಸ್‌. ಯಡಿಯೂರಪ್ಪ ವಿರುದ್ಧ ದೂರು ದಾಖಲು

Image
 ಬಿ.ಎಸ್‌. ಯಡಿಯೂರಪ್ಪ ವಿರುದ್ಧ  ದೂರು ದಾಖಲು         ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ  ಕಳೆದ ಶನಿವಾರ ವಿಧಾನಸಭೆಯಲ್ಲಿ  ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶದ ನ್ಯಾಯವಾದಿ ಜ್ಞಾನಪ್ರಕಾಶ್‌ ದೂರು ದಾಖಲಿಸಿದ್ದಾರೆ.          ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಬಳಿಕ ವಿಧಾನಸಭೆಯಲ್ಲಿ ರಾಷ್ಟ್ರಗೀತೆ ನುಡಿಸುತ್ತಿದ್ದರೂ ಬಿಜೆಪಿ ಮುಖಂಡರಾದ ಯಡಿಯೂರಪ್ಪ  ವಿಧಾನಸಭೆಯ ಸದನದಿಂದ ಹೊರ ನಡೆದಿದ್ದರು ಎಂದು ನ್ಯಾಯವಾದಿ ಜ್ಞಾನಪ್ರಕಾಶ್‌ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಕುಂಡಾನ್ಯಾಯಾಲಯ ದೂರು ಸ್ವೀಕರಿಸಿದ್ದು, ಮುಂದಿನ ವಿಚಾರಣೆ ಮೇ 29ಕ್ಕೆ ನಿಗದಿಪಡಿಸಲಾಗಿದೆ.

ಹ್ಯಾಟ್ರಿಕ್ ಕ್ಷೇತ್ರ ಬಿಜೆಪಿ ಕ್ಷೇತ್ರ ?

Image
ರಾಜಕೀಯ ಜಿದ್ದಾಜಿದ್ದಿಯಲ್ಲಿ ಈ ಮೂರು ವಿಧಾನಸಭಾ  ಕ್ಷೇತ್ರಗಳು         ಗುರು ಶಿಷ್ಯರ ಸಮ್ಮಿಲನ ಹೌದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳಾದ  ವಿ. ಸೋಮಣ್ಣ, ವಿಜಯನಗರ ವಿಧಾನಸಭಾ ಕ್ಷೇತ್ರದ  ಅಭ್ಯರ್ಥಿಯಾದ ಎಚ್. ರವೀಂದ್ರ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಎಂ. ಲಕ್ಷ್ಮಿನಾರಾಯಣ ಒಂದುಗೂಡಿ ಈ ಮೂರು ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಗೆದ್ದೇ ಗೆಲ್ಲುತ್ತೇವೆ ಎಂಬ ಭರವಸೆಯಲ್ಲಿದ್ದಾರೆ.   ಹ್ಯಾಟ್ರಿಕ್ ಹೊಸ್ತಿಲಲ್ಲಿರುವ ಶಾಸಕರು ಹಾಗೂ ಹಾಲಿ ಶಾಸಕರನ್ನು ಸೋಲಿಸಿ, ಮೂರು ಕ್ಷೇತ್ರಗಳಲ್ಲೂ ಬಿಜೆಪಿ ಹ್ಯಾಟ್ರಿಕ್  ಕ್ಷೇತ್ರವಾಗಲಿದೆ, ಎಂಬ ಅಭಿಪ್ರಾಯ ಅಭಿಮಾನಿಗಳಲ್ಲಿ ಹಾಗೂ ಕಾರ್ಯಕರ್ತರಿಂದ ಕೇಳಿ ಬರುತ್ತಿದೆ. ಆದರೆ ಈ ಬಾರಿ ಮತದಾರ ಯಾರಿಗೆ ಮಣೆ ಹಾಕುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ ?....... 
Image
ಮಹಿಳಾ ಮತದಾರರಿಗಾಗಿ ಸಖಿ ಪಿಂಕ್ ಬೂತ್  2018ರ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಮಹಿಳಾ ಮತದಾರರಿಗೆ ಎಂದೇ ಸಖಿ ಪಿಂಕ್ ಬೂತ್ ಅನ್ನು  ತೆರೆದಿದೆ 

ಎಚ್. ರವೀಂದ್ರ ಅವರನ್ನು ಆರತಿ ಬೆಳಗುವ ಮುಖೇನ ಸ್ವಾಗತಿಸಿದ ಹೊಸಹಳ್ಳಿ ಸ್ಥಳೀಯ ಮಹಿಳೆಯರು

Image
ಎಚ್. ರವೀಂದ್ರ ಅವರನ್ನು ಆರತಿ ಬೆಳಗುವ ಮುಖೇನ ಸ್ವಾಗತಿಸಿದ ಹೊಸಹಳ್ಳಿ  ಸ್ಥಳೀಯ ಮಹಿಳೆಯರು              ವಿಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್. ರವೀಂದ್ರ ಅವರು ಹೊಸಳ್ಳಿ ವಾರ್ಡ್ ನಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಈ  ಸಂದರ್ಭದಲ್ಲಿ ಮಹಿಳೆಯರು  ಆರತಿ ಬೆಳಗುವ  ಮುಖೇನ  ಸ್ವಾಗತ ಮಾಡಿಕೊಂಡರು. ಜೊತೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು  

ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ

Image
ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ           ವಿಜಯನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಎಚ್. ರವೀಂದ್ರ ಅವರು ದೀಪಾಂಜಲಿ ನಗರ ವಾರ್ಡ್ ನಲ್ಲಿ ಬೃಹತ್ ರ್ಯಾಲಿಯೊಂದಿಗೆ ಮತಯಾಚಿಸಿದರು ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಗೋವಿಂದರಾಜನಗರ ಅಭ್ಯರ್ಥಿಯಾದ ವಿ. ಸೋಮಣ್ಣ ಅವರು, ಮಾಜಿ ಕಾರ್ಪೊರೇಟರ್ ಆನಂದ್, ಬ್ಯಾಂಕ್ ಚಂದ್ರಪ್ಪ, ರಾಮಾಂಜಿನಿ ಅವರು ಹಾಗೂ ನೂರಾರು ಕಾರ್ಯಕರ್ತರು  ಸಾಥ್ ನೀಡಿದರು.       ಭಾರತ್ ಮಾತಾಕಿ ಜೈ ಎಂಬ ಕಂಠ ಘೋಷದೊಂದಿಗೆ ರ್ಯಾಲಿ ಪ್ರಾರಂಭವಾಯಿತು. ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಹಾಗೂ ಗೋವಿಂದರಾಜನಗರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣನವರು  ರಾಜ್ಯ ಸರಕಾರ ಇಲ್ಲಿಯವರೆಗೂ ಏನು ಮಾಡಿದ್ದಾರೆ ಎಂಬುದನ್ನು   ಬುದ್ಧಿವಂತ ಮತದಾರರು  ನೋಡಿದ್ದಾರೆ, ಆದ್ದರಿಂದ ಈ ಬಾರಿ ಜನತೆ ರಾಜ್ಯ ಸರ್ಕಾರಕ್ಕೆ ತಕ್ಕ ಪಾಠ ಕಲಿಸಿ  ಮೇ 12ಕೆ  ಬಿಜೆಪಿಗೆ ಮತ ಹಾಕಿ ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಿ ಅಧಿಕಾರಕ್ಕೆತರಲಿದ್ದಾರೆ ಎಂದು ಹೇಳಿದರು.           ನಂತರ ಮಾತನಾಡಿದ ಎಚ್. ರವೀಂದ್ರ ಅವರು ವಿಜಯ ನಗರದ ಜನತೆ ಬದಲಾವಣೆ ಬಯಸಿದ್ದಾರೆ. ಆದ್ದರಿಂದ ಈ ಬಾರಿ ನನ್ನನ್ನು ಬಹುಮತದಿಂದ ಗೆಲ್ಲಿಸುತ್ತಾರೆ ಎಂಬ ಪೂರ್ಣ ವಿಶ್ವಾಸ ನನಗಿದೆ. ನಾನು ಗೆದ್ದರೆ ವಿಜಯನಗರದ ಜನತೆ ಗೆದ್ದ ಹಾಗೆ ಈ ಬಾರಿ ರಾಜ್ಯದಲ್ಲಿ ನಮ್ಮ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ

ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದ ಸಿ ವಿ ರಾಮಾಂಜಿ

Image
ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದ ॥ ಸಿ. ವಿ. ರಾಮಾಂಜಿ       ವಿಜಯನಗರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಎಚ್. ರವೀಂದ್ರ ಅವರ ಪರವಾಗಿ ಗಾಳಿ ಆಂಜನೇಯ ವಾರ್ಡ್ ನಲ್ಲಿ  ಗಾರ್ಮೆಂಟ್ಸ್ ಗಳಲ್ಲಿ  ಬಿಜೆಪಿ ಮುಖಂಡರಾದ   ಸಿ. ವಿ.  ರಾಮಾಂಜಿನಿ  ಹಾಗೂ ನೂರಾರು ಕಾರ್ಯಕರ್ತರು ಮತಯಾಚಿಸಿದರು.        ಈ ಸಂದರ್ಭದಲ್ಲಿ ಮಾತನಾಡಿದ ಸಿ. ವಿ. ರಾಮಾಂಜಿನಿ ರವರು ರಾಜ್ಯದಲ್ಲಿ ವ್ಯವಸ್ಥೆ  ಹದಗೆಟ್ಟಿದೆ ಮಹಿಳೆಯರಿಗೆ ರಕ್ಷಣೆ ಇಲ್ಲ ಮಹಿಳಾ ಅಧಿಕಾರಿಗಳಿಗೆ ಎತ್ತಂಗಡಿ ಭಾಗ್ಯ ಇನ್ನೆಲ್ಲಿ ಮಹಿಳೆಯರು ಧೈರ್ಯದಿಂದ ಏನಾದರೂ ಸಾಧಿಸಲು ಸಾಧ್ಯವಿದೆ. ಆದ್ದರಿಂದ ಬದಲಾವಣೆ ಮಾಡಲೇಬೇಕಾದ ಸಮಯ ಈಗ ಬಂದಿದೆ ಮಹಿಳೆಯರು ಹೆಚ್ಚಿದ್ದು  ಬಿಜೆಪಿಗೆ ಮತ ನೀಡಿ ರವೀಂದ್ರ ಅವರನ್ನು ಗೆಲ್ಲಿಸಬೇಕು ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದರೆ ಮಹಿಳೆಯರಿಗೆ ಸಿಗಬೇಕಾದ ರಕ್ಷಣೆ ಸೌಲಭ್ಯಗಳು ದೊರೆಯಲಿದೆ.      ಈಗಾಗಲೇ ಪ್ರಧಾನಿ  ನರೇಂದ್ರ ಮೋದಿ ಆಡಳಿತದ ಕೇಂದ್ರ ಸರ್ಕಾರವು ಮಹಿಳೆಯರಿಗೆ ಆದ್ಯತೆ ಭದ್ರತೆ ನೀಡಿದೆ ಹಾಗೂ ಮಹಿಳೆಯರ ಮೆಚ್ಚುಗೆ ಗಳಿಸಿದೆ.  ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದರೆ ಮಹಿಳೆಯರಿಗೆ ಸಿಗಬೇಕಾದ ಸ್ಥಾನಮಾನ ಗೌರವ ಸೌಲಭ್ಯಗಳನ್ನು ನೀಡುತ್ತದೆ. ಹಾಗಾಗಿ ಈ ಬಾರಿ ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿಕೊಂಡರು.

ವಿಜಯ ನಗರ ಅಭಿವೃದ್ಧಿಗೆ ಬಿಜೆಪಿಗೆ ಮತ ನೀಡಿ : ಎಚ್ ರವೀಂದ್ರ

Image
ವಿಜಯ ನಗರ ಅಭಿವೃದ್ಧಿಗೆ ಬಿಜೆಪಿಗೆ ಮತ ನೀಡಿ : ಎಚ್ ರವೀಂದ್ರ            ವಿಜಯನಗರ ವಿಧಾನಸಭಾ ಕ್ಷೇತ್ರದ ಅತ್ತಿಗುಪ್ಪೆ ವಾರ್ಡ್ನನ ಸೈಲೈನ್ ಅಪಾರ್ಟಮೆಂಟ್ ನಿವಾಸಿಗಳು ಮತ್ತು ಸುತ್ತಮುತ್ತಲ ಪ್ರದೇಶಕ್ಕೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಹೆಚ್. ರವೀಂದ್ರರವರು ಹಾಗೂ ಅತ್ತಿಗುಪ್ಪೆ ವಾರ್ಡ್ ಬಿ.ಬಿ.ಎಂ.ಪಿ. ಸದಸ್ಯರಾದ ಡಾ: ಎಸ್.ರಾಜು ಮತ್ತು ಬಿ.ಜೆ.ಪಿ. ಮುಖಂಡರಾದ ವೆಂಕಟೇಶ್ ಬಾಬಿ  ಮಹಿಳಾ ಬಿ.ಜೆ.ಪಿ. ಕಾರ್ಯಕರ್ತರು ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸೈಲೈನ್ ಅಪಾರ್ಟ್ ಮೆಂಟ್ ನಿವಾಸಿಗಳ ಸಂಘದಲ್ಲಿ ಹೆಚ್. ರವೀಂದ್ರರವರು ಮಾತನಾಡಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ನರೇಂದ್ರ ಮೋದಿರವರು ವಿಶ್ವ ನಾಯಕರಾಗಿ ಜನ ಮೆಚ್ಚುಗೆ ಗಳಿಸಿದ್ದಾರೆ. ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬದಲಾವಣೆ ಸಮಯ ಬಂದಿದೆ. ಈ ಶುಭಾ ಸಮಯದಲ್ಲಿ ಮತದಾರರು ಬಿ.ಜೆ.ಪಿ.ಪಕ್ಷಕ್ಕೆ ಹೆಚ್ಚಿನ ಬಹುಮತ ನೀಡಿ ನನ್ನುನು ಆಯ್ಕೆ ಮಾಡಿ. ವಿಜಯನಗರ ಮಾದರಿ ವಿಧಾನಸಭಾ ಕ್ಷೇತ್ರ ನಿರ್ಮಾಣಕ್ಕೆ ಮುಂದಿನ ಕಾರ್ಯಯೋಜನೆ ರೂಪಿಸಲಾಗಿದೆ, ನೀರಿನ ಸಮಸ್ಯೆಗೆ ಪರಿಹಾರ ಮತ್ತು ಪರಿಸರ, ವಿದ್ಯುತ್ ಸಮಸ್ಯೆ ಪರಿಹಾರ, ಕಸ ಮುಕ್ತ ವಿಜಯನಗರ ನಿರ್ಮಾಣ, ಪಾರ್ಕಗಳ ಅಭಿವೃದ್ದಿ  ಯೋಜನೆಗಳಿಗೆ ಚಾಲನೆ ನೀಡಲಾಗುವುದು ವಿಜಯನಗರ ಬುದ್ದಿವಂತ ಮತದಾರರು ಈ ಬಾರಿಗೆ ಬಿ.ಜೆ.ಪಿ.ಗೆ. ಮತದಾನ ಮಾಡಿ ಅಭಿವೃದ್ದಿ ಪರ ಹೋರಟಕ್ಕೆ ಬೆಂಬಲಿಸಬೇಕು ಎಂದು ಹೇಳಿದರು.    ತದನಂತರ ಅತ್