ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದ ಸಿ ವಿ ರಾಮಾಂಜಿ

ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದ ॥ ಸಿ. ವಿ. ರಾಮಾಂಜಿ 


     ವಿಜಯನಗರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಎಚ್. ರವೀಂದ್ರ ಅವರ ಪರವಾಗಿ ಗಾಳಿ ಆಂಜನೇಯ ವಾರ್ಡ್ ನಲ್ಲಿ  ಗಾರ್ಮೆಂಟ್ಸ್ ಗಳಲ್ಲಿ  ಬಿಜೆಪಿ ಮುಖಂಡರಾದ   ಸಿ. ವಿ.  ರಾಮಾಂಜಿನಿ  ಹಾಗೂ ನೂರಾರು ಕಾರ್ಯಕರ್ತರು ಮತಯಾಚಿಸಿದರು.
       ಈ ಸಂದರ್ಭದಲ್ಲಿ ಮಾತನಾಡಿದ ಸಿ. ವಿ. ರಾಮಾಂಜಿನಿ ರವರು ರಾಜ್ಯದಲ್ಲಿ ವ್ಯವಸ್ಥೆ  ಹದಗೆಟ್ಟಿದೆ ಮಹಿಳೆಯರಿಗೆ ರಕ್ಷಣೆ ಇಲ್ಲ ಮಹಿಳಾ ಅಧಿಕಾರಿಗಳಿಗೆ ಎತ್ತಂಗಡಿ ಭಾಗ್ಯ ಇನ್ನೆಲ್ಲಿ ಮಹಿಳೆಯರು ಧೈರ್ಯದಿಂದ ಏನಾದರೂ ಸಾಧಿಸಲು ಸಾಧ್ಯವಿದೆ. ಆದ್ದರಿಂದ ಬದಲಾವಣೆ ಮಾಡಲೇಬೇಕಾದ ಸಮಯ ಈಗ ಬಂದಿದೆ ಮಹಿಳೆಯರು ಹೆಚ್ಚಿದ್ದು  ಬಿಜೆಪಿಗೆ ಮತ ನೀಡಿ ರವೀಂದ್ರ ಅವರನ್ನು ಗೆಲ್ಲಿಸಬೇಕು ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದರೆ ಮಹಿಳೆಯರಿಗೆ ಸಿಗಬೇಕಾದ ರಕ್ಷಣೆ ಸೌಲಭ್ಯಗಳು ದೊರೆಯಲಿದೆ.
     ಈಗಾಗಲೇ ಪ್ರಧಾನಿ  ನರೇಂದ್ರ ಮೋದಿ ಆಡಳಿತದ ಕೇಂದ್ರ ಸರ್ಕಾರವು ಮಹಿಳೆಯರಿಗೆ ಆದ್ಯತೆ ಭದ್ರತೆ ನೀಡಿದೆ ಹಾಗೂ ಮಹಿಳೆಯರ ಮೆಚ್ಚುಗೆ ಗಳಿಸಿದೆ. ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದರೆ ಮಹಿಳೆಯರಿಗೆ ಸಿಗಬೇಕಾದ ಸ್ಥಾನಮಾನ ಗೌರವ ಸೌಲಭ್ಯಗಳನ್ನು ನೀಡುತ್ತದೆ. ಹಾಗಾಗಿ ಈ ಬಾರಿ ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿಕೊಂಡರು.


Comments

Popular posts from this blog

2026ರ ಬಜೆಟ್‌ನಲ್ಲಿ ಶೋಷಿತ ಸಮುದಾಯಗಳಿಗೆ ಒತ್ತು: ಪೂರ್ವಭಾವಿ ಸಭೆಯಲ್ಲಿ ಸರ್ಕಾರದ ಗಮನ ಸೆಳೆತ

Lions District 317A Golden Jubilee a grand success – a confluence of service activities

ಸಾಮೂಹಿಕ ಶ್ರೀನಿವಾಸ ಕಲ್ಯಾಣದ ಪೂರ್ವಭಾವಿ ಸಭೆ