Posts

Showing posts from February, 2021

jayakarnataka janapara vedike

Image
  ಜಯ ಕರ್ನಾಟಕ ಜನಪರ  ವೇದಿಕೆಯಿಂದ  ಫಾಸ್ಟಾಗ್ ಕಡ್ಡಾಯ ವಿರೋಧಿಸಿ ಪ್ರತಿಭಟನೆ.           ಬೆಂಗಳೂರು: ಟೋಲ್ ಗಳಲ್ಲಿ ಫಾಸ್ಟಾಗ್ ಕಡ್ಡಾಯ ವಿರೋಧಿಸಿ ಹಾಗೂ ಸರ್ವಿಸ್ ರಸ್ತೆಗಳನ್ನು ಬಿಡದೆ  ಟೋಲ್ ಸುಂಕ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ 8ನೇ ಮೈಲಿಯ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಂದೆ ಜಯ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.              ವಾಹನ  ಸವಾರರಿಂದ ಟೋಲ್ ಸುಂಕವನ್ನು ಪಡೆದು ಸರ್ವಿಸ್ ರಸ್ತೆಗಳಿಲ್ಲ  ಹಾಗೂ ಉತ್ತಮ ಗುಣಮಟ್ಟದ ನಿರ್ವಹಣೆ ಇಲ್ಲ. ಕೂಡಲೇ ರಾಜ್ಯದ ಎಲ್ಲಾ ಟೋಲ್ ಕಂಪನಿಗಳು ಸರ್ವಿಸ್ ರಸ್ತೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ರಾಜ್ಯಾಧ್ಯಕ್ಷ ಆರ್. ಚಂದ್ರಪ್ಪ  ಆಗ್ರಹಿಸಿದರು.          ಭಾರತದ ಸರ್ವೋಚ್ಚ ನ್ಯಾಯಾಲಯ ನಡೆದಾಡುವ ಸ್ವತಂತ್ರ ಹಕ್ಕನ್ನು ಸಂವಿಧಾನ ರೀತಿಯಲ್ಲಿ ನೀಡಿರುತ್ತದೆ. ಅಲ್ಲದೆ ಭಾರತದಲ್ಲಿ ಖರೀದಿಮಾಡುವ ಪ್ರತಿ ವಾಹನಕ್ಕು ಜೀವಮಾನದ ರಸ್ತೆ ತೆರಿಗೆ ( ಲೈಫ್ ಟೈಮ್ ರೋಡ್ ಟ್ಯಾಕ್ಸ್) ಪಡೆದುಕೊಂಡ ನಂತರವಷ್ಟೇ ಪ್ರಾದೇಶಿಕ ಸಾರಿಗೆಯ ಅಧಿಕಾರಿಗಳು ವಾಹನಗಳನ್ನು ನಮೂದಿಸಿಕೊಂಡು ರಸ್ತೆಗಿಳಿಸಲು ಅವಕಾಶ ಮಾಡಿಕೊಟ್ಟಿರುತ್ತಾರೆ. ಜೀವಮಾನದ ರಸ್ತೆ ತೆರಿಗೆಯಿಂದಲೇ ಎಲ್ಲಾ ಮೂಲಭೂತ ಸೌಕರ್ಯಗಳನ್ನ ಕಲ್ಪಿಸಿಕೊಡಲು ನಿಗದಿ ಆಗಿರುತ್ತದೆ. ಆದರೂ ಕೂಡ ದುರಾದೃಷ್ಟಕರ ವಿಚಾರವೇನೆಂದರೆ ಇಡೀ ಭಾರತದ ತುಂಬಾ ಎಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ಹೆದ