Posts

Showing posts from June, 2023

ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ

Image
ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ -  ಎನ್‌ಎಟಿಎಸ್       ಜೂನ್ ೨೦೨೩: ಇನ್ಫೋಸಿಸ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಎನ್ ಆರ್ ನಾರಾಯಣ ಮೂರ್ತಿ ಮತ್ತು ಪ್ರಸಿದ್ಧ ಲೇಖಕಿ ಮತ್ತು ಜನಪರವಾದಿ ಸುಧಾ ಮೂರ್ತಿ ಅವರ ಅಸಾಧಾರಣ ಕೊಡುಗೆಗಳಿಗಾಗಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇತ್ತೀಚೆಗೆ ಅಮೇರಿಕಾದ ನ್ಯೂಜೆರ್ಸಿಯಲ್ಲಿ ನಡೆದ ೭ ನೇ ತೆಲುಗು ಸಂಭ್ರಮಾಚರಣೆಯ ಸಂದರ್ಭದಲ್ಲಿ ಎನ್‌ಎಟಿಎಸ್ (ಉತ್ತರ ಅಮೇರಿಕಾ ತೆಲುಗು ಸೊಸೈಟಿ) ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಿದೆ. ಇನ್ಫೋಸಿಸ್ ದಂಪತಿಗಳು ಈ ಗೌರವಕ್ಕಾಗಿ ಸಂತೋಷ ಮತ್ತು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ, ಈ ದಂಪತಿಗಳಿಗೆ ಪ್ರಶಸ್ತಿ ನೀಡುವುದು ನಮ್ಮ ಸೌಭಾಗ್ಯವೆಂದು ಎನ್‌ಎಟಿಎಸ್ ಹೇಳಿದೆ.        ಎನ್‌ಎಟಿಎಸ್ ೭ ನೇ ತೆಲುಗು ಸಂಭ್ರಮದ ಸಂಚಾಲಕ ಶ್ರೀಧರ್ ಅಪ್ಪಾಸಾನಿ, "ಇಂತಹ ಮಹಿಮಾತೀತ ವ್ಯಕ್ತಿಗಳು ಪ್ರಶಸ್ತಿ ಸ್ವೀಕರಿಸುವ ಮೊದಲು ಸಂಸ್ಥೆಯ ಬಗ್ಗೆ ತಮ್ಮದೇ ಆದ ಮೌಲ್ಯಮಾಪನ ಮಾಡುತ್ತಾರೆ. ಭಾರತದ ಈ ಅತ್ಯಂತ ಗೌರವಾನ್ವಿತ ದಂಪತಿಗಳನ್ನು ಗೌರವಿಸುವ ಅವಕಾಶ ನಾವು ಪಡೆದಿರುವುದು ನಿಜಕ್ಕೂ ನಮ್ಮ ಅದೃಷ್ಟ ಮತ್ತು ತೆಲುಗು ಸಮಾವೇಶಗಳ ಇತಿಹಾಸದಲ್ಲಿ ಈ ರೀತಿಯ ಕಾರ್ಯಕ್ರಮಗಳು ಶ್ರೇಷ್ಠತೆಯನ್ನು ಎತ್ತಿ ತೋರುತ್ತದೆ” ಎಂದರು.        ತನ್ನ ೭ ನೇ ತೆಲುಗು ಸಂಭ್ರಮದ ಉಪ ಸಂಚಾಲಕ ಮತ್ತು ಮಂಡಳಿಯ ಸದಸ್ಯರಲ್ಲಿ ಒಬ್ಬರಾದ ರಾಜ್

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

Image
 ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ ಬೆಂಗಳೂರು : ವುಡ್ ಲ್ಯಾಂಡ್ ಹೋಟೆಲು ಸಭಾಂಗಣದಲ್ಲಿ ಮೇ ತಿಂಗಳಲ್ಲಿ ವಯೋ ನಿವೃತ್ತಿಯಾದ ಅಧಿಕಾರಿ ಮತ್ತು ನೌಕರರಿಗೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಸನ್ಮಾನ ಸಮಾರಂಭ.       ಉಪ ಆಯುಕ್ತರಾದ ಮಂಜುನಾಥ್ ರವರು, ಸಹಾಯಕ ಆಯುಕ್ತರಾದ ಶ್ರೀನಿವಾಸ್,ಜಂಟಿಆಯುಕ್ತರಾದ ವೆಂಕಟಚಲಪತಿ, ಉಪ ಆಯುಕ್ತರಾದ ಶ್ರೀನಿವಾಸ್, ಮುಖ್ಯ ಅಭಿಯಂತರಾದ ವಿಶ್ವನಾಥ್, ಪ್ರಾಂಶುಪಾಲರಾದ ರವೀಂದ್ರ,ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ದೀಪ ಬೆಳಗಿಸಿ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.        ಬಿಬಿಎಂಪಿ ಮೇ ತಿಂಗಳಲ್ಲಿ ನಿವೃತ್ತಿಯಾದ 52ಅಧಿಕಾರಿ, ನೌಕರರಿಗೆ ಸನ್ಮಾನಿಸಲಾಯಿತು. ಜನ ಸೇವೆಯೆ ಜನಾರ್ಧನ ಸೇವೆ ಅಂದರೆ ದೇವರ ಸೇವೆ ಮಾಡಿದಂತೆ , ತಮ್ಮ ಜೀವನ ಬಹುಪಾಲು ಸಮಯವನ್ನು ನಗರ ಅಭಿವೃದ್ದಿ ಮತ್ತು ಜನರ ಸಮಸ್ಯೆ ನಿವಾರಣೆಗಾಗಿ ಹಗಲಿರುಳು ಶ್ರಮಿಸಿದ ಅಧಿಕಾರಿ ಮತ್ತು ನೌಕರರಿಗೆ ಗೌರವ ಸನ್ಮಾನ ನೀಡಿ, ಗೌರವಪೂರ್ವಕವಾಗಿ ಬೀಳ್ಕೊಡುಗೆ ಮಾಡಿದಾಗ ಅವರ ಸೇವೆಯನ್ನ ಸ್ಮರಣ ಮಾಡಿದಾಗ ಜೀವನ ಸಾರ್ಥಕವಾಗುತ್ತದೆ.        ಪ್ರತಿಯೊಬ್ಬ ಜೀವನದಲ್ಲಿ ವಯಸ್ಸು ಆಗುತ್ತದೆ, ವಯೋಸಹಜ ನಿವೃತ್ತಿ ಸಹಜ. ವಯಸ್ಸು ಆಯಿತು, ನಿಮ್ಮ ಅವಶ್ಯಕತೆ ಇಲ್ಲ ಎಂಬ ಭಾವನೆ ಬಿಡಿ, ವಿಶ್ರಾಂತ ಜೀವನ ಸಾಗಿಸಲು ಅಧಿಕಾರಿ ಮ