Posts

BPN NEWS_24x7

ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್ ಠೇವಣಿದಾರರಿಗೆ ವಿಪ್ರತೃಯಿ ಪರಿಷತ್ ಸಕಲ ನೆರವು

Image
  ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್ ಠೇವಣಿದಾರರಿಗೆ ವಿಪ್ರತೃಯಿ ಪರಿಷತ್ ಸಕಲ ನೆರವು ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ವಿಪ್ರತೃಯಿ ಪರಿಷತ್ ತುರ್ತು ಸಭೆಯಲ್ಲಿ, ಸಂಕಷ್ಟಕ್ಕೆ ಸಿಲುಕಿರುವ ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್ ಠೇವಣಿದಾರರ ಹಿತರಕ್ಷಣೆಗೆ ಧಾವಿಸುವ ನಿರ್ಣಯ ಕೈಗೊಳ್ಳಲಾಯಿತು. ರಾಜ್ಯ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಸಭೆಯಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಮತ್ತು ವಿಪ್ರತೃಯಿ ಪರಿಷತ್ ಅಧ್ಯಕ್ಷ ರಘುನಾಥ್ ಸೇರಿದಂತೆ ಅನೇಕ ಬ್ರಾಹ್ಮಣ ಸಮಾಜದ ಪ್ರಮುಖರು ಭಾಗವಹಿಸಿದ್ದರು. ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚ್ಚಿದಾನಂದ ಮೂರ್ತಿ ಅವರು, ದಿವಾಳಿ ಅಂಚಿನಲ್ಲಿ ಸಿಲುಕಿರುವ ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್ ನ ಪುನರುಜ್ಜೀವನ ಮಾಡುವುದು ಸೇರಿದಂತೆ, ಠೇವಣಿದಾರರ ಸಂಪೂರ್ಣ ಹಿತ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ಠೇವಣಿದಾರರಿಗೆ ಆರ್ಥಿಕ ನೆರವು, ಕಾನೂನು ಸಲಹೆ ಮತ್ತು ನೈತಿಕ ಬೆಂಬಲ ನೀಡಲಾಗುವುದು ಎಂದರು... ವಿಪ್ರತೃಯಿ ಪರಿಷತ್ ಅಧ್ಯಕ್ಷ ರಘುನಾಥ್ ಮಾತನಾಡಿ, ಠೇವಣಿದಾರರಿಗೆ ಐದು ಲಕ್ಷ ರೂಪಾಯಿ ವಿಮೆ ಯೋಜನೆ ಹಣ ದೊರೆಯಲಿದೆ. ಜೊತೆಗೆ ವಿಪ್ರತೃಯಿ ಪರಿಷತ್ ವತಿಯಿಂದ ತೀರಾ ತೊಂದರೆಗೆ ಒಳಗಾಗಿರುವ ಠೇವಣಿದಾರರಿಗೆ ಆರ್ಥಿಕ ನೆರವು, ಕಾನೂನು ಅರಿವು ಮತ್ತು ನೈತಿಕ

ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ

Image
ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ -  ಎನ್‌ಎಟಿಎಸ್       ಜೂನ್ ೨೦೨೩: ಇನ್ಫೋಸಿಸ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಎನ್ ಆರ್ ನಾರಾಯಣ ಮೂರ್ತಿ ಮತ್ತು ಪ್ರಸಿದ್ಧ ಲೇಖಕಿ ಮತ್ತು ಜನಪರವಾದಿ ಸುಧಾ ಮೂರ್ತಿ ಅವರ ಅಸಾಧಾರಣ ಕೊಡುಗೆಗಳಿಗಾಗಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇತ್ತೀಚೆಗೆ ಅಮೇರಿಕಾದ ನ್ಯೂಜೆರ್ಸಿಯಲ್ಲಿ ನಡೆದ ೭ ನೇ ತೆಲುಗು ಸಂಭ್ರಮಾಚರಣೆಯ ಸಂದರ್ಭದಲ್ಲಿ ಎನ್‌ಎಟಿಎಸ್ (ಉತ್ತರ ಅಮೇರಿಕಾ ತೆಲುಗು ಸೊಸೈಟಿ) ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಿದೆ. ಇನ್ಫೋಸಿಸ್ ದಂಪತಿಗಳು ಈ ಗೌರವಕ್ಕಾಗಿ ಸಂತೋಷ ಮತ್ತು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ, ಈ ದಂಪತಿಗಳಿಗೆ ಪ್ರಶಸ್ತಿ ನೀಡುವುದು ನಮ್ಮ ಸೌಭಾಗ್ಯವೆಂದು ಎನ್‌ಎಟಿಎಸ್ ಹೇಳಿದೆ.        ಎನ್‌ಎಟಿಎಸ್ ೭ ನೇ ತೆಲುಗು ಸಂಭ್ರಮದ ಸಂಚಾಲಕ ಶ್ರೀಧರ್ ಅಪ್ಪಾಸಾನಿ, "ಇಂತಹ ಮಹಿಮಾತೀತ ವ್ಯಕ್ತಿಗಳು ಪ್ರಶಸ್ತಿ ಸ್ವೀಕರಿಸುವ ಮೊದಲು ಸಂಸ್ಥೆಯ ಬಗ್ಗೆ ತಮ್ಮದೇ ಆದ ಮೌಲ್ಯಮಾಪನ ಮಾಡುತ್ತಾರೆ. ಭಾರತದ ಈ ಅತ್ಯಂತ ಗೌರವಾನ್ವಿತ ದಂಪತಿಗಳನ್ನು ಗೌರವಿಸುವ ಅವಕಾಶ ನಾವು ಪಡೆದಿರುವುದು ನಿಜಕ್ಕೂ ನಮ್ಮ ಅದೃಷ್ಟ ಮತ್ತು ತೆಲುಗು ಸಮಾವೇಶಗಳ ಇತಿಹಾಸದಲ್ಲಿ ಈ ರೀತಿಯ ಕಾರ್ಯಕ್ರಮಗಳು ಶ್ರೇಷ್ಠತೆಯನ್ನು ಎತ್ತಿ ತೋರುತ್ತದೆ” ಎಂದರು.        ತನ್ನ ೭ ನೇ ತೆಲುಗು ಸಂಭ್ರಮದ ಉಪ ಸಂಚಾಲಕ ಮತ್ತು ಮಂಡಳಿಯ ಸದಸ್ಯರಲ್ಲಿ ಒಬ್ಬರಾದ ರಾಜ್

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

Image
 ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ ಬೆಂಗಳೂರು : ವುಡ್ ಲ್ಯಾಂಡ್ ಹೋಟೆಲು ಸಭಾಂಗಣದಲ್ಲಿ ಮೇ ತಿಂಗಳಲ್ಲಿ ವಯೋ ನಿವೃತ್ತಿಯಾದ ಅಧಿಕಾರಿ ಮತ್ತು ನೌಕರರಿಗೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಸನ್ಮಾನ ಸಮಾರಂಭ.       ಉಪ ಆಯುಕ್ತರಾದ ಮಂಜುನಾಥ್ ರವರು, ಸಹಾಯಕ ಆಯುಕ್ತರಾದ ಶ್ರೀನಿವಾಸ್,ಜಂಟಿಆಯುಕ್ತರಾದ ವೆಂಕಟಚಲಪತಿ, ಉಪ ಆಯುಕ್ತರಾದ ಶ್ರೀನಿವಾಸ್, ಮುಖ್ಯ ಅಭಿಯಂತರಾದ ವಿಶ್ವನಾಥ್, ಪ್ರಾಂಶುಪಾಲರಾದ ರವೀಂದ್ರ,ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ದೀಪ ಬೆಳಗಿಸಿ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.        ಬಿಬಿಎಂಪಿ ಮೇ ತಿಂಗಳಲ್ಲಿ ನಿವೃತ್ತಿಯಾದ 52ಅಧಿಕಾರಿ, ನೌಕರರಿಗೆ ಸನ್ಮಾನಿಸಲಾಯಿತು. ಜನ ಸೇವೆಯೆ ಜನಾರ್ಧನ ಸೇವೆ ಅಂದರೆ ದೇವರ ಸೇವೆ ಮಾಡಿದಂತೆ , ತಮ್ಮ ಜೀವನ ಬಹುಪಾಲು ಸಮಯವನ್ನು ನಗರ ಅಭಿವೃದ್ದಿ ಮತ್ತು ಜನರ ಸಮಸ್ಯೆ ನಿವಾರಣೆಗಾಗಿ ಹಗಲಿರುಳು ಶ್ರಮಿಸಿದ ಅಧಿಕಾರಿ ಮತ್ತು ನೌಕರರಿಗೆ ಗೌರವ ಸನ್ಮಾನ ನೀಡಿ, ಗೌರವಪೂರ್ವಕವಾಗಿ ಬೀಳ್ಕೊಡುಗೆ ಮಾಡಿದಾಗ ಅವರ ಸೇವೆಯನ್ನ ಸ್ಮರಣ ಮಾಡಿದಾಗ ಜೀವನ ಸಾರ್ಥಕವಾಗುತ್ತದೆ.        ಪ್ರತಿಯೊಬ್ಬ ಜೀವನದಲ್ಲಿ ವಯಸ್ಸು ಆಗುತ್ತದೆ, ವಯೋಸಹಜ ನಿವೃತ್ತಿ ಸಹಜ. ವಯಸ್ಸು ಆಯಿತು, ನಿಮ್ಮ ಅವಶ್ಯಕತೆ ಇಲ್ಲ ಎಂಬ ಭಾವನೆ ಬಿಡಿ, ವಿಶ್ರಾಂತ ಜೀವನ ಸಾಗಿಸಲು ಅಧಿಕಾರಿ ಮ

ಜಾಗತಿಕ ಗುಚ್ಚಿ ಬ್ರ್ಯಾಂಡ್ ರಾಯಭಾರಿಯಾಗಿ ಆಲಿಯಾ ಭಟ್ ನೇಮಕ

Image
ಜಾಗತಿಕ ಗುಚ್ಚಿ ಬ್ರಾಂಡ್ ರಾಯಭಾರಿಯಾಗಿ ನಟಿ ಮತ್ತು ನಿರ್ಮಾಪಕಿ ಆಲಿಯಾ ಭಟ್ ನೇಮಕ ಬೆಂಗಳೂರು - ಆಲಿಯಾ ಭಟ್ ತನ್ನ ಸಮಕಾಲೀನರ ಅತ್ಯಂತ ಪ್ರೀತಿಪಾತ್ರ ಮತ್ತು ಪ್ರತಿಭಾವಂತ ನಟಿಯಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದ್ದಾಳೆ, ಭಾರತೀಯ ಚಲನಚಿತ್ರೋದ್ಯಮದಲ್ಲಿ ಸತತವಾಗಿ ಯಶಸ್ಸು ಕಂದುಕೊಳ್ಳಿತ್ತಿದ್ದಾರೆ. ಪ್ರಪಂಚದಾದ್ಯಂತ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ.     ನಿರ್ಮಾಪಕಿಯಾಗಿ ನೆಟ್‌ಫ್ಲಿಕ್ಸ್‌ನ ಚೊಚ್ಚಲ ಚಲನಚಿತ್ರ ಡಾರ್ಲಿಂಗ್ಸ್ ನಿರ್ಮಿಸಿದ್ದಾರೆ. RRR ಚಲನಚಿತ್ರದಲ್ಲಿ ಅತ್ಯುತ್ತಮ ಅಭಿನಯ ಮಾಡಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇದು ಇಂಗ್ಲಿಷ್ಯೇತರ ಭಾಷೆ ವಿಭಾಗದಲ್ಲಿ ಅತ್ಯುತ್ತಮ ಚಿತ್ರಕ್ಕಾಗಿ ನಾಮನಿರ್ದೇಶನಗೊಂಡಿದೆ. ಆಲಿಯಾ ನೆಟ್‌ಫ್ಲಿಕ್ಸ್‌ನ ಹಾರ್ಟ್ ಆಫ್ ಸ್ಟೋನ್‌ನಲ್ಲಿ ನಟಿಸಲಿದ್ದಾರೆ.           ಮಧ್ಯಮದಲ್ಲಿ ಅವರು ಹಲವಾರು ಪ್ರತಿಷ್ಠಿತ ಪ್ರಶಸ್ತಿ ಗರಿಗಳ ಜೊತೆ ಹಲವಾರು ಸಾಧನೆಗಳನ್ನು ಮಾಡಿದ್ದಾರೆ. ಅವರು ಪ್ರತಿಷ್ಠಿತ ಟೈಮ್ 100 ಪ್ರಶಸ್ತಿಯನ್ನು ಮನೋರಂಜನೆ ವಿಭಾಗದಲ್ಲಿ ತಮ್ಮ ಮೂಡಿಗೇರಿಸಿಕೊಂಡಿದ್ದಾರೆ.           ದಕ್ಷಿಣ ಕೊರಿಯಾದ ಸಿಯಾಲ್ ನಲ್ಲಿ ಗ್ಯೆನ್ಗ್  ಬೋಕೆಗುಂಗ್ ಪ್ಯಾಲೇಸ್ ನಲ್ಲಿ ಮೇ 16ರಂದು  ನಡೆಯುವ  ಪ್ರತಿಷ್ಠಿತ ಗುಚ್ಚಿ ಕ್ರಯ್ಸ್ 2024 ಫ್ಯಾಷನ್ ಶೋ ಗೆ ರಾಯಭಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಚುನಾವಣೆಯಲ್ಲಿ ಹೆಚ್ಚಿನ ಬಹುಮತದೊಂದಿಗೆ ಬೆಂಬಲ ನೀಡಿ : ಕೆ.ಗೋಪಾಲಯ್ಯ

Image
ಚುನಾವಣೆಯಲ್ಲಿ ಹೆಚ್ಚಿನ ಬಹುಮತದೊಂದಿಗೆ ಬೆಂಬಲ ನೀಡಿ : ಕೆ.ಗೋಪಾಲಯ್ಯ ಬೆಂಗಳೂರು : 10 ರಂದು ಚುನಾವಣೆ ನಡೆಯಲಿದ್ದು, ಮತ್ತೊಮ್ಮೆ ಭಾರತೀಯ ಜನತಾ ಪಕ್ಷಕ್ಕೆ ಮಹಾಲಕ್ಷ್ಮಿ ಲೇಔಟ್ ನಲ್ಲಿ ಮತ್ತಷ್ಟು ಅಭಿವೃದ್ಧಿಗಾಗಿ ಈ ಬಾರಿ ಚುನಾವಣೆಯಲ್ಲಿ  ಹೆಚ್ಚಿನ ಬಹುಮತ ದೊಂದಿಗೆ ಬೆಂಬಲ ನೀಡಿ ಎಂದು ಸ್ಥಳೀಯ ಶಾಸಕರು ಹಾಗೂ ಅಬಕಾರಿ ಸಚಿವರಾದ ಕೆ.ಗೋಪಾಲಯ್ಯ ಅವರು ತಿಳಿಸಿದರು. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕೃಷ್ಣಾನಂದ ನಗರ  ಏಕ್ಸ್ಪೋರ್ಟಿಂಗ್ ಸಿಂಡಿಕೇಟ್  ಪ್ರೈವೇಟ್ ಗಾರ್ಮೆಂಟ್ಸ್ ನಲ್ಲಿ ಸ್ಥಳೀಯ ಶಾಸಕರು ಹಾಗೂ ಅಬಕಾರಿ ಸಚಿವರಾದ ಕೆ ಗೋಪಾಲಯ್ಯರವರು ಸಭೆ ನಡೆಸಿ ಅವರು ಮಾತನಾಡಿದರು. ಕೋವಿಡ್ ನಂತಹ ಮಹಾಮಾರಿ ಸಂದರ್ಭದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವ ಬಿಜೆಪಿ ಸರ್ಕಾರವು ಜನಸಾಮಾನ್ಯರಿಗೆ ಆಕ್ಸಿಜನ್  ಹಾಗೂ ಉಚಿತ ಲಸಿಕೆಯನ್ನು ಒದಗಿಸಲಾಗಿದೆ ಎಂದರು. ಕೋವಿಡ್ ಅವಧಿಯಲ್ಲಿ  350 ಕ್ಕೂ ಹೆಚ್ಚಿನ ಆಕ್ಸಿಜನ್ ಸಿಲಿಂಡರ್ ಗಳನ್ನು ನೀಡಿ ಕ್ಷೇತ್ರದ ಜನತೆಯ ಉಳಿವಿಗಾಗಿ ಶ್ರಮವಹಿಸಿ ಕಾರ್ಯನಿರ್ವಹಣೆ ಹೀಗೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಕ್ಷೇತ್ರವನ್ನು ಇನ್ನೂ ಅಭಿವೃದ್ಧಿ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಕ್ಷೇತ್ರದಲ್ಲಿ ಕುಡಿಯುವ ನೀರಿನ ಘಟಕ, ನವ ನಂದಿನಿ ಪಾರ್ಕ್, ಆರೋಗ್ಯದ ಕಾಳಜಿಯಿಂದ ಉತ್ತಮ ಆಸ್ಪತ್ರೆಗಳು, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರಿ ಶಾಲೆ, ಮಹಾನಗರ ಪಾಲಿಕೆ ಶಾಲೆಗಳು

ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.‌ ಗೋಪಾಲಯ್ಯ ಪ್ರಚಾರ

Image
ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.‌ ಗೋಪಾಲಯ್ಯ ಪ್ರಚಾರ ಬೆಂಗಳೂರು : ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.‌ಗೋಪಾಲಯ್ಯ ರವರು ಇಂದು 68 ನೇ ವಾರ್ಡ್ ನ ಶ್ರೀರಾಮನಗರದ  ಗೆಳೆಯರ ಬಳಗ ರಸ್ತೆಯಲ್ಲಿ ಮನೆ ಮನೆಗೆ ತೆರಳಿ ಅಭಿವೃದ್ಧಿಗೆ ಮತ ನೀಡಿ ಎಂದು ಮತಯಾಚನೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ರವರು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ ಮಾಡಿದ್ದಾರೆ. ಒಂದು ಲಕ್ಷಕ್ಕಿಂತ ಹೆಚ್ಚಿನ ಜನರು ಅವರನ್ನ ಹತ್ತಿರದಿಂದ ಬಂದು ನೋಡಿ ಕಣ್ತುಂಬಿ ಕೊಂಡಿದ್ದಾರೆ ಎಂದರು. ಕ್ಷೇತ್ರದ ಜನತೆ ಅತ್ಯಂತ ಯಶಸ್ವಿಯಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಸ್ವಾಗತ ಮಾಡಿದರು.ನನ್ನ ಕ್ಷೇತ್ರದ ಜನತೆಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು. 270 ಬೂತ್ ನಲ್ಲೂ ನಮ್ಮ ಮುಖಂಡರು ಹಾಗೂ ಸ್ಥಳೀಯ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಈ ಬಾರಿ  ಕ್ಷೇತ್ರದ ಜನತೆ ಹೆಚ್ಚಿನ ಬಹುಮತದೊಂದಿಗೆ ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು. ಬೆಂಗಳೂರಿನಲ್ಲಿ ಪ್ರಧಾನಿ ಮೋದಿಯವರ ರೋಡ್ ಶೋ ಆಗಿದೆ. ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು,ವಿಶ್ವ ನಾಯಕ ಪ್ರಧಾನಿ ಮೋದಿಯವರ ನಾಯಕತ್ವ ಅವರ ಕೊಡುಗೆ ಅಪಾರ ಎಂದರು. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿ ಅಧಿಕಾರಕ್ಕೆ ಬರಬೇಕಂತ ಜನರ ಬಯಕೆಯಿದೆ. ಬೆಂಗಳೂರಿನಲ್ಲಿ 20ಕ್ಕಿಂತ ಹೆಚ್ಚಿನ ಸ್ಥಾನ  ಗೆಲ್ಲುತ್ತೇವೆ ಎಂಬ ಸಂಪೂರ್

ಹುಲ್ಲಹಳ್ಳಿ ಶ್ರೀನಿವಾಸ್ ರವರ ಪರ ಕೆ. ಗೋಪಾಲಯ್ಯ ಭರ್ಜರಿ ಮತ ಪ್ರಚಾರ

Image
ಹುಲ್ಲಹಳ್ಳಿ ಶ್ರೀನಿವಾಸ್ ರವರ ಪರ   ಕೆ. ಗೋಪಾಲಯ್ಯ ಭರ್ಜರಿ ಮತ ಪ್ರಚಾರ ಬೆಂಗಳೂರು ಗ್ರಾಮಾಂತರ : ಆನೇಕಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹುಲ್ಲಹಳ್ಳಿ ಶ್ರೀನಿವಾಸ್  ರವರು  ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಭ್ಯರ್ಥಿ. ಅವರ ಭಾವಚಿತ್ರ ಇಡಿದು  ಮತವನ್ನು ಕೇಳಿದ್ದೇವೆ. ಕ್ಷೇತ್ರದ ಜನರು ಹೆಚ್ಚಿನ ಬಹುಮತವನ್ನು ನೀಡಿ ಅವರನ್ನು ಗೆಲ್ಲಿಸಬೇಕು ಎಂದು ಸ್ಥಳೀಯ ಶಾಸಕರು ಅಬಕಾರಿ ಸಚಿವರಾದ ಕೆ ಗೋಪಾಲಯ್ಯರವರು ಮನವಿ ಮಾಡಿದರು.        ಬೆಂಗಳೂರು ಗ್ರಾಮಾಂತರ ಆನೇಕಲ್ ತಾಲೂಕಿನಲ್ಲಿ ಹುಲ್ಲಹಳ್ಳಿ ಶ್ರೀನಿವಾಸ್ ರವರ ಪರವಾಗಿ ಮತಯಾಚನೆ ನಡೆಸಿ ಅವರು ಮಾತನಾಡಿದರು. ಇಡೀ ರಾಜ್ಯದಲ್ಲಿ ಒಕ್ಕಲಿಗ ಸಮುದಾಯ  ಪ್ರಬಲವಾದ ಸಮುದಾಯ. ಬೆಂಗಳೂರಿನ ನಾಡಪ್ರಭು ಕೆಂಪೇಗೌಡರು ಕಟ್ಟಿರುವಂತಹ ಇತಿಹಾಸವನ್ನು ಸೂರ್ಯ ಹಾಗೂ ಚಂದ್ರ ಇರುವವರೆಗೂ ಸಾಧ್ಯವಿಲ್ಲ ಎಂದರು.                 ಪ್ರತಿನಿತ್ಯ ನಾಡಪ್ರಭು ಕೆಂಪೇಗೌಡರನ್ನು  ನಾವೆಲ್ಲರೂ ಪ್ರತಿನಿತ್ಯ ಪೂಜೆ ಮಾಡಬೇಕು ಒಕ್ಕಲಿಗ ಸಮುದಾಯ ಒಂದು ಜಾತಿಗೆ ಸೀಮಿತವಾಗದೆ ಸಹಾಯ ಮಾಡುವುದಿಲ್ಲ.  ಕಷ್ಟಪಟ್ಟು ದುಡಿಯುವುದು ನಾವೆಲ್ಲರೂ ರೈತ ಕುಟುಂಬದವರು ಎಂದರು.            ಅನೇಕ ಸಮುದಾಯಗಳಿಗೆ ಆಶ್ರಯವನ್ನು ಕೊಟ್ಟು ಇವತ್ತು ರಾಜ್ಯದಲ್ಲಿ ಕೆಂಗಲ್ ಹನುಮಂತಯ್ಯ ರವರು ವಿಧಾನಸೌಧವನ್ನು ಕಟ್ಟಿದ್ದ ಮಹಾನ್ ವ್ಯಕ್ತಿ ಎಂದರು.         ಪ್ರಬಲವಾದ ಶಕ್ತಿ ಆನೇಕಲ್ ನಲ್ಲಿದೆ. ಜನತಾ ಪಕ್ಷ ಸರ್ಕಾರ ಏರ್ಪೋರ್ಟ್ ಗೆ ಹೆಸರು