Posts

Showing posts from July, 2018

ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಆಡಳಿತ ಮಂಡಳಿಯ ವಿರುದ್ದ ನೌಕರರ ಧರಣಿ ಸತ್ಯಾಗ್ರಹ

Image
ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಆಡಳಿತ ಮಂಡಳಿಯ  ವಿರುದ್ದ ನೌಕರರ ಧರಣಿ ಸತ್ಯಾಗ್ರಹ     ಬೆಂಗಳೂರು, ಜುಲೈ 09, 2018: ತಮಿಳುನಾಡು ಮೂಲಕ ಆಡಳಿತ ಮಂಡಳಿಯ ಅಧೀನದಲ್ಲಿರುವ  ಬೆಂಗಳೂರಿನ ಕೆಂಗೇರಿ ರಸ್ತೆಯಲ್ಲಿರುವ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ  ಆಡಳಿತ ಮಂಡಳಿ ನೌಕರರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿ ಇಂದು ನೂರಕ್ಕೂ  ಹೆಚ್ಚು ಸಿಬ್ಬಂದಿಗಳು ಧರಣಿ ಸತ್ಯಾಗ್ರಹವನ್ನು ನಡೆಸಿದರು.        ನಗರದ ಮೌರ್ಯ ವೃತ್ತದ ಬಳಿ ಇರುವ ಗಾಂದಿ  ಪ್ರತಿಮೆಯ ಬಳಿ ನಡೆದ ಪ್ರತಿಭಟನೆಯ ನೇತೃತ್ವವನ್ನು  ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷರಾದ ಡಾ ವೆಂಟಕಸ್ವಾಮಿ, ಆರ್ ಆರ್ ಎಂ ಸಿ ಹೆಚ್  ಯೂನಿಯನ್ ಗೌರವ ಅಧ್ಯಕ್ಷರಾದ ಡಾ. ಸಿ ಎಸ್ ರಘು ವಹಿಸಿದ್ದರು.      ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷರಾದ ಡಾ  ವೆಂಟಕಸ್ವಾಮಿ ಮಾತನಾಡಿ, 350 ಕ್ಕೂ ಹೆಚ್ಚು ಸಂಖ್ಯೆಯಲ್ಲಿರುವ ಮೇಲೆ ಆಡಳಿತ ಮಂಡಳಿ  ಮೊದಲಿನಿಂದಲೂ ಕೂಡಾ ದೌರ್ಜನ್ಯವನ್ನು ನಡೆಸುತ್ತಿದೆ. 8 ರಿಂದ 10 ವರ್ಷಗಳ ಕಾಲ ಸೇವೆ  ಸಲ್ಲಿಸುತ್ತಿರುವ ನೌಕರರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ನೌಕರರ ಸಂಘ ಕಟ್ಟಿದ್ದೇ ತಪ್ಪಾಗಿದೆ,  ಸಂಘದ ಮುಖಂಡರುಗಳಿಗೆ ತೀವ್ರ ಕಿರುಕುಳ ನೀಡಲಾರಂಭಿಸಿದ್ದಾರೆ ಅಲ್ಲದೆ, 6 ಜನ ನೌಕರರನ್ನು  ಸೇವೆಯಿಂದ ಅಮಾನತ್ತುಗೊಳಿಸಿದ್ದಾರೆ.

ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್‌ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಒಪ್ಪಂದ

Image
ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಒಪ್ಪಂದ           ತುಮಕೂರಿನ ವಸಂತ ನರಸಾಪುರದಲ್ಲಿ ರಾಜ್ಯದಲ್ಲೇ ದೊಡ್ಡ ಕೈಗಾರಿಕಾ ಹಬ್  ಒಪ್ಪಂದ   ಸಜ್ಜಾಗಿದೆ.  ಹಲವು ದಿನಗಳಿಂದ ಈ ಭಾಗದ ಕೈಗಾರಿಕಾ ಹಬ್ ಇದೀಗ ಟೇಕಾಫ್ ಆಗಿದ್ದು, ಈ ಸಂಬಂಧ ಕೇಂದ್ರ ಸರಕಾರದೊಂದಿಗೆ ರಾಜ್ಯ ಸರಕಾರ ಒಪ್ಪಂದ ಮಾಡಿಕೊಳ್ಳುವ ಮೂಲಕ ಚೆನ್ನೈ-ಬೆಂಗಳೂರು        ಕೈಗಾರಿಕಾ ಕಾರಿಡಾರ್ನ ಭಾಗವಾದ ತುಮಕೂರು ಕೈಗಾರಿಕಾ   ನಿರ್ಮಾಣ ಕೆಲಸಕ್ಕೆ ಮುನ್ನುಡಿ ಬರೆದಂತಾಗಿದೆ.        ರಾಜ್ಯ ಸರಕಾರ ಶೇರ್‌ಹೋಲ್ಡರ್ಸ್, ಅಗ್ರಿಮೆಂಟ್ (ಎಸ್‌ಎಚ್‌ಎ) ಹಾಗೂ ಸ್ಟೇಟ್‌ ಸಪೋರ್ಟ್‌ ಅಗ್ರಿಮೆಂಟ್ (ಎಸ್‌ಎಸ್‌ಎ) ಮಾಡಿಕೊಳ್ಳುವ ಮೂಲಕ ಕೆಲಸಕ್ಕೆ ಚಾಲನೆ ಸಿಕ್ಕಿದ್ದು. ಕೇಂದ್ರ ಸರಕಾರದ ಐದು ವಿಶೇಷ ವಾಣಿಜ್ಯ ಹಾಗೂ ಕೈಗಾರಿಕಾ ಕಾರಿಡಾರ್‌ನ ಪೈಕಿ ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ (ಸಿಬಿಐಸಿ) ಕೂಡ ಒಂದು. ಉತ್ಪಾದನಾ ಹಾಗೂ ಕೈಗಾರಿಕಾ ಕ್ಷೇತ್ರವನ್ನು ಪ್ರೋತ್ಸಾಹಿಸುವ ಜತೆಗೆ ಉದ್ಯೋಗ ಸೃಷ್ಟಿಸಲು ಈ ಕಾರಿಡಾರ್ ನಿರ್ಮಾಣ ಹೆಚ್ಚು ಪ್ರಾಮುಖ್ಯತೆ ಪಡೆಯಲಿದೆ.     ಸಿಬಿಐಸಿ ಕಾರಿಡಾರ್ ಬೆಂಗಳೂರು ಹಾಗೂ ಚೆನ್ನೈ ಸಿಟಿಗಳನ್ನು ಲಿಂಕ್ ಮಾಡಲಿದ್ದು, 560 ಕಿ.ಮೀ. ವ್ಯಾಪ್ತಿಯಲ್ಲಿ ಕೈಗಾರಿಕಾ ಕಾರಿಡಾರ್ ಚೇತರಿಸಿಕೊಳ್ಳಲಿದೆ. ಜತೆಗೆ ಕರ್ನಾಟಕದ 16 ಜಿಲ್ಲೆ, ತಮಿಳುನಾಡು ಹಾಗೂ ಆಂಧ್ರ ಪ್ರದೇಶ ಕ

ಸಾವಯವ ಮೇಳದಿಂದ ರೈತರಿಗೆ ಲಾಭ: ರಾಮಲಿಂಗಾ ರೆಡ್ಡಿ

Image
ಸಾವಯವ ಮೇಳದಿಂದ ರೈತರಿಗೆ ಲಾಭ: ರಾಮಲಿಂಗಾ ರೆಡ್ಡಿ       ಬೆಂಗಳೂರು: ರಾಜಧಾನಿಯಲ್ಲಿ ಸಾವಯವ ಮೇಳ ಆಯೋಜಿಸಿರುವುದು  ಒಳ್ಳೆಯ ಬೆಳವಣಿಗೆ. ಇದರಿಂದಾಗಿ ಹೆಚ್ಚಿನ ಜನರಲ್ಲಿ ಇದರ ಬಗ್ಗೆ ಅರಿವು ಉಂಟಾಗಲು ಸಹಾಯಕವಾಗಲಿದೆ. ಈ ಮೇಳ ಆಯೋಜಿಸಿರುವ ಐಸಿಸಿಒಎಯ ಒಂದು ಉತ್ತಮ ಉಪಕ್ರಮ ಇದಾಗಿದೆ ಎಂದು ಶಾಸಕ ರಾಮಲಿಂಗಾ ರೆಡ್ಡಿ ಶ್ಲಾಘನೆ    ವ್ಯಕ್ತಪಡಿಸಿದರು.          ಇಂಟರ್‌ನ್ಯಾಾಷನಲ್ ಕಂಪಟೆನ್‌ಸ್‌ ಸೆಂಟರ್ ಫಾರ್ ಆರ್ಗ್ಯಾನಿಕ್  ಅಗ್ರಕಲ್ಚರ್ ಹಾಗೂ ಬಿಬಿಎಂಪಿ ಸಹಯೋಗದಲ್ಲಿ  ಕೋರಮಂಗಲದಲ್ಲಿ ನಿನ್ನೆ  ಮತ್ತು ಇಂದು ನಡೆಯುತ್ತಿರುವ ಸಾವಯವ ಕೃಷಿ ಮೇಳ ಉದ್ಘಾಾಟಿಸಿ ಮಾತನಾಡಿದ ಅವರು, ಇಂತಹ ಸಾವಯವ ಆಹಾರ ಪದಾರ್ಥಗಳ ಮೇಳ ಆಯೋಜಿಸಿರುವುದರಿಂದ ರೈತರಿಗೆ ಲಾಭವಾಗಲಿದೆ. ಜೊತೆಗೆ ದೇಶಾದ್ಯಂತ ಕಂಪನಿಗಳು ಈ ಮೇಳದಲ್ಲಿ ಭಾಗವಹಿಸುವುದರಿಂದ  ಹೆಚ್ಚಿನ ಲಾಭ  ರೈತರಿಗೆ ದೊರೆಯಲಿದೆ ಎಂದು ಹೇಳಿದರು.          ಕರ್ನಾಟಕ ಸಾವಯವ ಆಹಾರ ಬಳಕೆ ಬಗ್ಗೆ ಹೆಚ್ಚು ಜಾಗೃತಿ ಮೂಡಿದೆ. ಹೀಗಾಗಿ ಸಾವಯವ ಆಹಾರಕ್ಕೆ ಹೆಚ್ಚು ಬೇಡಿಕೆ ಬಂದಿದೆ. ಸಾವಯವ ಬೆಳೆ ಬೆಳೆಯುವ ರೈತರ ಸಂಖ್ಯೆ ಕೂಡ ಹೆಚ್ಚಳವಾಗಿದೆ. ಸಾವಯವ ಪದಾರ್ಥಗಳನ್ನು ಜನರಿಗೆ ಪರಿಚಯಿಸಲು ಈ ಮೇಳ ಆಯೋಜಿಸಿದ್ದು, ನಗರಾದ್ಯಂತ ಜನರು ಆಗಮಿಸಿ ಈ ಮೇಳ ಯಶಸ್ವಿಗೊಳಿಸಬೇಕು  ಎಂದರು.        ಈ ಮೇಳದಲ್ಲಿ ಸಾವಯವ ರೀಲೆಟರ್‌ಗಳು ಭಾಗಿಯಾಗಲಿದ್ದು, ಪ್ರತಿ ತಿಂಗಳು ಈ ಕಾರ್ಯಕ್ರಮ ನಡೆಸಲಾಗುತ್ತದೆ.