ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್‌ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಒಪ್ಪಂದ

ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಒಪ್ಪಂದ 




        ತುಮಕೂರಿನ ವಸಂತ ನರಸಾಪುರದಲ್ಲಿ ರಾಜ್ಯದಲ್ಲೇ ದೊಡ್ಡ ಕೈಗಾರಿಕಾ ಹಬ್  ಒಪ್ಪಂದ ಸಜ್ಜಾಗಿದೆ.  ಹಲವು ದಿನಗಳಿಂದ ಈ ಭಾಗದ ಕೈಗಾರಿಕಾ ಹಬ್ ಇದೀಗ ಟೇಕಾಫ್ ಆಗಿದ್ದು, ಈ ಸಂಬಂಧ ಕೇಂದ್ರ ಸರಕಾರದೊಂದಿಗೆ ರಾಜ್ಯ ಸರಕಾರ ಒಪ್ಪಂದ ಮಾಡಿಕೊಳ್ಳುವ ಮೂಲಕ ಚೆನ್ನೈ-ಬೆಂಗಳೂರು        ಕೈಗಾರಿಕಾ ಕಾರಿಡಾರ್ನ ಭಾಗವಾದ ತುಮಕೂರು ಕೈಗಾರಿಕಾ ನಿರ್ಮಾಣ ಕೆಲಸಕ್ಕೆ ಮುನ್ನುಡಿ ಬರೆದಂತಾಗಿದೆ.

       ರಾಜ್ಯ ಸರಕಾರ ಶೇರ್‌ಹೋಲ್ಡರ್ಸ್, ಅಗ್ರಿಮೆಂಟ್ (ಎಸ್‌ಎಚ್‌ಎ) ಹಾಗೂ ಸ್ಟೇಟ್‌ ಸಪೋರ್ಟ್‌ ಅಗ್ರಿಮೆಂಟ್ (ಎಸ್‌ಎಸ್‌ಎ) ಮಾಡಿಕೊಳ್ಳುವ ಮೂಲಕ ಕೆಲಸಕ್ಕೆ ಚಾಲನೆ ಸಿಕ್ಕಿದ್ದು.

ಕೇಂದ್ರ ಸರಕಾರದ ಐದು ವಿಶೇಷ ವಾಣಿಜ್ಯ ಹಾಗೂ ಕೈಗಾರಿಕಾ ಕಾರಿಡಾರ್‌ನ ಪೈಕಿ ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ (ಸಿಬಿಐಸಿ) ಕೂಡ ಒಂದು. ಉತ್ಪಾದನಾ ಹಾಗೂ ಕೈಗಾರಿಕಾ ಕ್ಷೇತ್ರವನ್ನು ಪ್ರೋತ್ಸಾಹಿಸುವ ಜತೆಗೆ ಉದ್ಯೋಗ ಸೃಷ್ಟಿಸಲು ಈ ಕಾರಿಡಾರ್ ನಿರ್ಮಾಣ ಹೆಚ್ಚು ಪ್ರಾಮುಖ್ಯತೆ ಪಡೆಯಲಿದೆ. 

   ಸಿಬಿಐಸಿ ಕಾರಿಡಾರ್ ಬೆಂಗಳೂರು ಹಾಗೂ ಚೆನ್ನೈ ಸಿಟಿಗಳನ್ನು ಲಿಂಕ್ ಮಾಡಲಿದ್ದು, 560 ಕಿ.ಮೀ. ವ್ಯಾಪ್ತಿಯಲ್ಲಿ ಕೈಗಾರಿಕಾ ಕಾರಿಡಾರ್ ಚೇತರಿಸಿಕೊಳ್ಳಲಿದೆ. ಜತೆಗೆ ಕರ್ನಾಟಕದ 16 ಜಿಲ್ಲೆ, ತಮಿಳುನಾಡು ಹಾಗೂ ಆಂಧ್ರ ಪ್ರದೇಶ ಕೂಡ ಒಳಗೊಳ್ಳಲಿದೆ. ಈ ಕಾರಿಡಾರ್ ಯೋಜನೆಯ ಪ್ರಾಥಮಿಕವಾಗಿ ತುಮಕೂರಿನ ವಸಂತ ನರಸಾಪುರವನ್ನು ಆಯ್ಕೆ ಮಾಡಿಕೊಂಡಿದ್ದು, ಈ ಭಾಗದಲ್ಲಿ ಮೂಲಸೌಕರ್ಯ ನಿರ್ಮಾಣ, ಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳ ಅಭಿವೃದ್ಧಿ ಕಾಣಲು ಸಹ ಸಹಕಾರಿಯಾಗಲಿದೆ.  ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿಯೂ ಉದ್ಯೋಗ ಸೃಷ್ಟಿ ಕೂಡ ಆಗಲಿದೆ.‌‌


      ಕೇಂದ್ರ ಸರಕಾರದ ಈ ನಡೆಯನ್ನು ಸ್ವಾಗತಿಸಿರುವ ರಾಜ್ಯ ಐಟಿ-ಬಿಟಿ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಕೆ.ಜೆ. ಜಾರ್ಜ್ ಅವರು, ಉತ್ಪಾದನೆ ಹಾಗೂ ಕೈಗಾರಿಕೆ ವಿಚಾರದಲ್ಲಿ ಕರ್ನಾಟಕ ಸದಾ ಮುಂದಿದೆ. ಈ ನೂತನ ಕಾರಿಡಾರ್ ಕೂಡ ಭವಿಷ್ಯದಲ್ಲಿ ಶೇ. 100 ರಷ್ಟು ದೊಡ್ಡ ಹಬ್ ಆಗುವುದರಲ್ಲಿ ಸಂಶಯವಿಲ್ಲ. ದಕ್ಷಿಣ ಭಾರತದಲ್ಲಿಯೇ ತುಮಕೂರು ದೊಡ್ಡ ಕಾರಿಡಾರ್‌ ಆಗಿ ಹೊರಹೊಮ್ಮಲಿದೆ. ಜತೆಗೆ ಲಕ್ಷಾಂತರ ಪ್ರಮಾಣದಲ್ಲಿ ಉದ್ಯೋಗ ಕೂಡ ಸೃಷ್ಟಿಯಾಗಲಿದೆ ಎಂದು ಹೇಳಿದರು.


     ಈ ಕಾರಿಡಾರ್‌ನ ಒಪ್ಪಂದದ ಪ್ರಕಾರ ರಾಜ್ಯ ಸರಕಾರ ಭೂಮಿಯ ಶೇ. 50ರಷ್ಟು ನೀಡಲಿದೆ. ಕೇಂದ್ರ ಸರಕಾರ ಮೂಲಸೌಕರ್ಯಕ್ಕೆ 3,000 ಕೋಟಿ ಅನುದಾನವನ್ನು ಹೊಂದಿ¸ ಎಂದು ಹೇಳಿದರು. 


   ದೆಹಲಿ-ಮುಂಬೈ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಪಾಲಿಕೆ (ಡಿಎಂಐಸಿಡಿಸಿ) ಈಗಾಗಲೇ ಕಾರಿಡಾರ್ ನಿರ್ಮಿಸಿ ಅನುಭವ ಇರುವುದರಿಂದ ಈ ಪಾಲಿಕೆಯಿಂದ ತಾಂತ್ರಿಕ ಮಾರ್ಗದರ್ಶನ ಪಡೆದುಕೊಳ್ಳುವುದು ಒಳಿತು ಎಂದು ಸಲಹೆ ನೀಡಿದ್ದಾರೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿಯ ನೋಡಲ್ ಏಜೆನ್ಸಿ ಮೂಲಕ‌ ಕಾರಿಡಾರ್ ಸಂಬಂಧ ನೂತನ ಯೋಜನೆ ಜಾರಿ ಮಾಡಲು ಸಹ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.


   ವಾಣಿಜ್ಯ ಮತ್ತು ಕೈಗಾರಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಮಾತನಾಡಿ, ಈ ನೂತನ ಕಾರಿಡಾರ್ ಕರ್ನಾಟಕದ ಅಭಿವೃದ್ಧಿಗೆ ಇಂಜಿನ್ ಆಗಲಿದೆ. ರಾಜ್ಯ ಸರಕಾರ ಕೆಐಎಡಿಬಿಗೆ ಕೇಂದ್ರ ಸರಕಾರದೊಂದಿಗೆ ಭಾಗವಾಗಿ ಒಪ್ಪಿಗೆ ನೀಡಲಾಗಿದೆ. ಕೆಐಎಡಿಬಿ ಹಾಗೂ ಎನ್‌ಐಸಿಡಿಐಟಿ ಎರಡೂ ಸಂಸ್ಥೆಗಳು ಜುಲೈ 6 ರಂದು ಎಸ್‌ಎಚ್‌ಎ ಹಾಗೂ ಎಸ್‌ಎಸ್‌ಎ‌ನೊಂದಿಗೆ ಒಪ್ಪಂದವಾಗಲಿದ್ದು, ಕೂಡಲೇ ಕಾಮಗಾರಿ ಕೂಡ ಪ್ರಾರಂಭವಾಗಲಿದೆ. 


      ತುಮಕೂರು ಕೈಗಾರಿಕಾ  50 ಸಾವಿರ ಕೋಟಿ  ಹೂಡಿಕೆ 2.20 ಲಕ್ಷ ಉದ್ಯೋಗ ಇಲ್ಲಿಯೇ ಸೃಷ್ಟಿಯಾಗುವ ನಿರೀಕ್ಷೆಯನ್ನು‌ ಅವರು ವ್ಯಕ್ತಪಡಿಸಿದರು. ಈ ಪ್ರಸ್ತಾವದ ಒಪ್ಪಂದ ಕಾರ್ಯಕ್ರಮ  ಶೀಘ್ರ ನಡೆಯಲಿದೆ‌ ಎಂದು  ವಿವರಿಸಿದರು.


          ತುಮಕೂರಿನ ವಸಂತ ನರಸಾಪುರದಲ್ಲಿ 9,629 ಎಕರೆ ಭೂಮಿಯನ್ನು ರಾಜ್ಯ ಸರಕಾರ ಗುರುತಿಸಿದೆ. ಇದರಲ್ಲಿ‌1,722 ಎಕರೆ ಭೂಮಿಗೆ  ಇನ್ನುಳಿದ 7,900 ಭೂಮಿ ಮಾಡಲಾಗಿದೆ ಎಂದು ತಿಳಿಸಿದರು.
      ಕೆಐಎಡಿಬಿ ಸಿಇಒ ಎನ್. ಜಯರಾಮ್ ಕಾರಿಡಾರ್ ಸಹಿ ಬಳಿಕ ಸಂತೋಷ ವ್ಯಕ್ತಪಡಿಸಿದ್ದಾರೆ.‌ ಕರ್ನಾಟಕದೊಂದಿಗೆ ಈ ಯೋಜನೆ ಮಾಡುವ ಅವಕಾಶ ಸಿಕ್ಕಿರುವುದು ಸಂತಸವಾಗಿದೆ ಎಂದಿದ್ದಾರೆ.‌

         ಒಟ್ಟಾರೆ ಈ ಯೋಜನೆಗೆ ಮಂಡಳಿ ರಚನೆ ಮಾಡಲಾಗಿದ್ದು, ಕೈಗಾರಿಕಾ ಇಲಾಖೆ ಪ್ರಧಾಕ ಕಾರ್ಯದರ್ಶಿ ಸೇರಿದಂತೆ ಒಟ್ಟು ಆರು ನಿರ್ದೇಶಕರನ್ನು ರಾಜ್ಯ ಸರಕಾರ  ನೇಮಕ ಮಾಡಲಿದೆ.‌







Comments

Popular posts from this blog

RACE FOR 7: BANGALORE WALKS FOR RARE DISEASES

ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದ ಸಿ ವಿ ರಾಮಾಂಜಿ

"ಕುಚ್ ಈಸ್ ತರ"