Posts

Showing posts from February, 2019

ಛತ್ರಪತಿ ಶಿವಾಜಿ ಮಹಾರಾಜ ರವರ 392ನೇ ಜಯಂತ್ಯುತ್ಸವ

Image
ಛತ್ರಪತಿ ಶಿವಾಜಿ ಮಹಾರಾಜ ರವರ 392ನೇ ಜಯಂತ್ಯುತ್ಸವ         ಶಿವ ಗರ್ಜನ್ ಯುವಸೇನೆ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜ ರವರ 392ನೇ ಜಯಂತ್ಯುತ್ಸವದ ಅಂಗವಾಗಿ ಮೆರವಣಿಗೆ ಯಾತ್ರೆಗೆ ಶ್ರೀ ಶ್ರೀ ಮಂಜುನಾಥ ಸ್ವಾಮೀಜಿ ಅವರು ಸದಾಶಿವನಗರದಲ್ಲಿರುವ ಕರ್ನಾಟಕ ಮರಾಠ ವೆಲ್ಫೇರ್ ಅಸೋಸಿಯೇಶನ್ ಕಚೇರಿಯಲ್ಲಿ ಚಾಲನೆ ನೀಡಿದರು.      ಸದಾಶಿವ ನಗರದಿಂದ ಹೊರಟ ಮೆರವಣಿಗೆ ವಯ್ಯಾಲಿಕಾವಲ್ ಮಾರ್ಗವಾಗಿ ಮಲ್ಲೇಶ್ವರಂ ರಾಜಬೀದಿಗಳಲ್ಲಿ ಸಾಗಿ ಕಾಡು ಮಲ್ಲೇಶ್ವರ ದೇವಸ್ಥಾನ ತಲುಪಿತು.         ಈ ಮೆರವಣಿಗೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ ರವರ ಆಡಳಿತಾವಧಿಯ ಉಡುಪುಗಳನ್ನು ಮಕ್ಕಳು, ಮಹಿಳೆಯರು  ದರಿಸಿದು ನೋಡುಗರಿಗೆ ವಿಶೇಷವಾಗಿತ್ತು.          ಈ ಸಂದರ್ಭದಲ್ಲಿ  ಪ್ರವೀಣ್ ಮಾಣೆ, ಲಯನ್ ಮನೋಜ್ ಕುಮಾರ್, ಶ್ರೀಧರ್, ಶಿವಕುಮಾರ್ ಪವಾರ್, ವಿಕ್ರಂ ಸಿಂಧ್ಯಾ ಹಾಗೂ ಗಣ್ಯರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಮಾಸ್ಟರ್ಸ್ ಆಫ್ ಮ್ಯೂಸಿಕ್ ಗುರು ಶಿಷ್ಯರ ಸಂಗೀತ ಸಂವಾದ ಕಾರ್ಯಕ್ರಮ

Image
ಮಾಸ್ಟರ್ಸ್ ಆಫ್ ಮ್ಯೂಸಿಕ್   ಗುರು ಶಿಷ್ಯರ ಸಂಗೀತ ಸಂವಾದ ಕಾರ್ಯಾಗಾರ  ಬೆಂಗಳೂರು:     ಮಾಸ್ಟರ್ಸ್ ಆಫ್ ಮ್ಯೂಸಿಕ್ ಸಂಸ್ಥೆಯ ವತಿಯಿಂದ ಬೆಂಗಳೂರಿನ ಗರುಡಾ ಮಾಲ್  ಇನಾಕ್ಸ್ ನಲ್ಲಿ  ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು .                    ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಸಂಗೀತ ಮಾಂತ್ರಿಕ, ಸಂಗೀತದ ಗುರು, ಪ್ರಖ್ಯಾತ ಗಾಯಕ ಸುರೇಶ್ ವಾಡ್ಕರ್ ಮಾತನಾಡಿ ಗುರು ಶಿಷ್ಯರ ಸಂಗೀತ ಸಂವಾದ ಕಾರ್ಯಾಗಾರವನ್ನು  ಮಾಸ್ಟರ್ಸ್ ಆಫ್ ಮ್ಯೂಸಿಕ್ ವತಿಯಿಂದ ದಿನಾಂಕ 10/02/2019ರಂದು ಕೆ.ಜಿ ರಸ್ತೆಯ ಶಿಕ್ಷಕ ಸದನದಲ್ಲಿ     ಆಯೋಜಿಸಲಾಗಿದೆ.          ಪ್ರಾರಂಭಿಕ ಮತ್ತು ಕಲಿಕಾ ವಿದ್ಯಾರ್ಥಿಗಳಿಗೆ ಸಂಗೀತದಲ್ಲಿ ಸಂಸ್ಕೃತಿ, ಕಲಾ ಸೂಕ್ಷ್ಮ, ವೈಜ್ಞಾನಿಕ ಮತ್ತು ತಾಂತ್ರಿಕ ಜ್ಞಾನವನ್ನು ಹೆಚ್ಚಿಸುವ  ಎರಡು ಗಂಟೆಗಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.          ಈ ಕಾರ್ಯಾಗಾರವು ಅಭ್ಯಾಸ ವಿಧಾನಗಳಲ್ಲಿ ಬದಲಾವಣೆ, ಸಮನ್ವಯತೆ, ಟೀಮ್ ವರ್ಕ್ ಸಾಮರ್ಥ್ಯಗಳು, ಭಾವನಾತ್ಮಕ ಸ್ಥಿರತೆ, ವಿಶ್ರಾಂತಿ ಕಲ್ಪನೆ, ಆತ್ಮವಿಶ್ವಾಸ ಹಾಗೂ  ಬುದ್ಧಿಶಕ್ತಿ  ಹೆಚ್ಚಿಸಲು ಉಪಯುಕ್ತವಾಗಿದೆ. ಮಕ್ಕಳು, ವಯಸ್ಕರು, ಯುವಜನರು ಸೇರಿದಂತೆ ಎಲ್ಲರೂ ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದು  ಎಂದು ಹೇಳಿದರು.                 ಈ ಸಂದರ್ಭದಲ್ಲಿ ಶ್ರೀಮತಿ ಪದ್ಮಾ ವಾಡ್ಕರ್ ನಿತಿನ್ (ಅಜಿವಾಸನ್ ಸಿಇಒ) ,  ದರ್ಮಿಲ್ ಶಾ  ಹಾಗ