ಮಾಸ್ಟರ್ಸ್ ಆಫ್ ಮ್ಯೂಸಿಕ್ ಗುರು ಶಿಷ್ಯರ ಸಂಗೀತ ಸಂವಾದ ಕಾರ್ಯಕ್ರಮ

ಮಾಸ್ಟರ್ಸ್ ಆಫ್ ಮ್ಯೂಸಿಕ್

 ಗುರು ಶಿಷ್ಯರ ಸಂಗೀತ ಸಂವಾದ ಕಾರ್ಯಾಗಾರ 



ಬೆಂಗಳೂರು:

    ಮಾಸ್ಟರ್ಸ್ ಆಫ್ ಮ್ಯೂಸಿಕ್ ಸಂಸ್ಥೆಯ ವತಿಯಿಂದ ಬೆಂಗಳೂರಿನ ಗರುಡಾ ಮಾಲ್  ಇನಾಕ್ಸ್ ನಲ್ಲಿ  ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು .
         
         ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಸಂಗೀತ ಮಾಂತ್ರಿಕ, ಸಂಗೀತದ ಗುರು, ಪ್ರಖ್ಯಾತ ಗಾಯಕ ಸುರೇಶ್ ವಾಡ್ಕರ್ ಮಾತನಾಡಿ ಗುರು ಶಿಷ್ಯರ ಸಂಗೀತ ಸಂವಾದ ಕಾರ್ಯಾಗಾರವನ್ನು  ಮಾಸ್ಟರ್ಸ್ ಆಫ್ ಮ್ಯೂಸಿಕ್ ವತಿಯಿಂದ ದಿನಾಂಕ 10/02/2019ರಂದು ಕೆ.ಜಿ ರಸ್ತೆಯ ಶಿಕ್ಷಕ ಸದನದಲ್ಲಿ     ಆಯೋಜಿಸಲಾಗಿದೆ.

         ಪ್ರಾರಂಭಿಕ ಮತ್ತು ಕಲಿಕಾ ವಿದ್ಯಾರ್ಥಿಗಳಿಗೆ ಸಂಗೀತದಲ್ಲಿ ಸಂಸ್ಕೃತಿ, ಕಲಾ ಸೂಕ್ಷ್ಮ, ವೈಜ್ಞಾನಿಕ ಮತ್ತು ತಾಂತ್ರಿಕ ಜ್ಞಾನವನ್ನು ಹೆಚ್ಚಿಸುವ  ಎರಡು ಗಂಟೆಗಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

         ಈ ಕಾರ್ಯಾಗಾರವು ಅಭ್ಯಾಸ ವಿಧಾನಗಳಲ್ಲಿ ಬದಲಾವಣೆ, ಸಮನ್ವಯತೆ, ಟೀಮ್ ವರ್ಕ್ ಸಾಮರ್ಥ್ಯಗಳು, ಭಾವನಾತ್ಮಕ ಸ್ಥಿರತೆ, ವಿಶ್ರಾಂತಿ ಕಲ್ಪನೆ, ಆತ್ಮವಿಶ್ವಾಸ ಹಾಗೂ  ಬುದ್ಧಿಶಕ್ತಿ  ಹೆಚ್ಚಿಸಲು ಉಪಯುಕ್ತವಾಗಿದೆ. ಮಕ್ಕಳು, ವಯಸ್ಕರು, ಯುವಜನರು ಸೇರಿದಂತೆ ಎಲ್ಲರೂ ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದು  ಎಂದು ಹೇಳಿದರು.
      
         ಈ ಸಂದರ್ಭದಲ್ಲಿ ಶ್ರೀಮತಿ ಪದ್ಮಾ ವಾಡ್ಕರ್ ನಿತಿನ್ (ಅಜಿವಾಸನ್ ಸಿಇಒ) ,  ದರ್ಮಿಲ್ ಶಾ  ಹಾಗೂ  ಮಿಸ್  ಅರ್ಚನಾ  ಶಾ (ಜೈ ಇಂಚ್) ಉಪಸ್ಥಿತರಿದ್ದರು.

Comments

Post a Comment

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ