Posts

Showing posts from April, 2026

Lions District 317A Golden Jubilee a grand success – a confluence of service activities

Image
  ಲಯನ್ಸ್ ಜಿಲ್ಲಾ 317ಎ ಸುವರ್ಣ ಮಹೋತ್ಸವ ಅದ್ದೂರಿ ಯಶಸ್ಸು – ಸೇವಾ ಚಟುವಟಿಕೆಗಳ ಮಹಾಸಂಗಮ ಬೆಂಗಳೂರು : ಲಯನ್ಸ್ ಇಂಟರ್‌ನ್ಯಾಷನಲ್ ಜಿಲ್ಲಾ 317ಎ ವತಿಯಿಂದ 50ನೇ ಸುವರ್ಣ ಮಹೋತ್ಸವ ಹಾಗೂ ಜಿಲ್ಲಾ ಸಮಾವೇಶವು ವಿಜಯನಗರದ ಬಂಟ್ಸ್ ಸಂಘ ಸಭಾಂಗಣದಲ್ಲಿ ಅದ್ದೂರಿಯಾಗಿ ನೆರವೇರಿತು. ಐದು ದಶಕಗಳ ಸೇವಾ ಪಯಣವನ್ನು ಸ್ಮರಿಸುವ ಈ ಮಹೋತ್ಸವವು ಸಮಾಜ ಸೇವೆ, ಮಾನವೀಯ ಮೌಲ್ಯಗಳು ಹಾಗೂ ಬದ್ಧತೆಯ ಪ್ರತೀಕವಾಗಿ ಗಮನ ಸೆಳೆಯಿತು. ಜಿಲ್ಲಾ ರಾಜ್ಯಪಾಲರಾದ ಡಾ. ಜಿ. ಮೋಹನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಲಯನ್ಸ್ ಅಂತರರಾಷ್ಟ್ರೀಯ ದ್ವಿತೀಯ ಉಪಾಧ್ಯಕ್ಷರಾದ ಡಾ. ಮನೋಜ್ ಷಾ ಉದ್ಘಾಟಿಸಿದರು. ಲಯನ್ಸ್ ಇಂಟರ್‌ನ್ಯಾಷನಲ್ ಮಾಜಿ ನಿರ್ದೇಶಕರಾದ ವಿಜಯ್ ಕುಮಾರ್ ರಾಜು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.ಮಲ್ಟಿಪಲ್ ಕೌನ್ಸಿಲ್ ಚೇರ್‌ಪರ್ಸನ್ ಮೋಹನ್ ಕುಮಾರ್ ಎನ್, ಪ್ರಥಮ ಉಪ ರಾಜ್ಯಪಾಲರಾದ ಕೆ. ಈಶ್ವರನ್, ದ್ವಿತೀಯ ಉಪ ರಾಜ್ಯಪಾಲರಾದ ಶಶಿಧರ್ ಗಂಜಿಗಟ್ಟಿ, ಆತಿಥೇಯ ಸಮಿತಿಯ ಅಧ್ಯಕ್ಷ ವೆಂಕಟೇಶ್ ಯಾದಾಳಂ, ಲಯನ್ ಅಶೋಕ್ ಕುಲಕರ್ಣಿ, ಲಯನ್ ಎಸ್. ಮನೋಜ್ ಕುಮಾರ್, ಹರಿಪ್ರಸಾದ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುವರ್ಣ ಮಹೋತ್ಸವದ ಅಂಗವಾಗಿ 25 ಶಹೀದ್ ಕುಟುಂಬಗಳಿಗೆ ಸನ್ಮಾನ, 25 ವೀರ ಯೋಧರಿಗೆ ಗೌರವ, ವಿಕಲಚೇತನರಿಗೆ 6 ಕಸ್ಟಮೈಸ್ ವೀಲ್‌ಚೇರ್‌ಗಳ ವಿತರಣೆ ಹಾಗೂ ಕಿದ್ವಾಯಿ ಸ್ಮಾರಕ ಆಂಕೊಲಾಜಿ ಸಂಸ್ಥೆಯ ಮಕ್ಕಳ ...

ಬಸವಣ್ಣನವರ ತತ್ವಗಳನ್ನು ದೇಶ-ವಿದೇಶಗಳಿಗೆ ಪಸರಿಸಲಾಗುತ್ತಿದೆ : ಸಚಿವ ವಿ ಸೋಮಣ್ಣ

Image
  ಬಸವಣ್ಣನವರ ತತ್ವಗಳನ್ನು ದೇಶ-ವಿದೇಶಗಳಿಗೆ ಪಸರಿಸಲಾಗುತ್ತಿದೆ : ಸಚಿವ ವಿ ಸೋಮಣ್ಣ   ಬೆಂಗಳೂರು : ಬಸವ ವೇದಿಕೆ ವತಿಯಿಂದ ಬಸವ ಜಯಂತಿ, ಬಸವಶ್ರೀ ಮತ್ತು ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಅದ್ದೂರಿಯಾಗಿ ನೆರವೇರಿತು. ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ಲೋಕಸಭಾ ಸದಸ್ಯ ಹಾಗೂ ನಿಕಟಪೂರ್ವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕೇಂದ್ರ ಸಚಿವ ವಿ. ಸೋಮಣ್ಣ ಉದ್ಘಾಟಿಸಿದರು. ಕೇಂದ್ರ ರಾಜ್ಯ ಸಚಿವ ವಿ. ಸೋಮಣ್ಣ ಮಾತನಾಡಿ, “2027ರಲ್ಲಿ ದೆಹಲಿಯಲ್ಲಿ ರಾಷ್ಟ್ರಮಟ್ಟದಲ್ಲಿ ಬಸವ ಜಯಂತಿ ಆಚರಿಸುವ ಯೋಜನೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಬಸವಣ್ಣನವರ ತತ್ವಗಳನ್ನು ದೇಶ-ವಿದೇಶಗಳಿಗೆ ಪಸರಿಸಲಾಗುತ್ತಿದೆ” ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ, “ಸಮಾಜದಲ್ಲಿ ವಚನಗಳ ಅಳವಡಿಕೆಯನ್ನು ಕಡ್ಡಾಯಗೊಳಿಸಲು ಕಾನೂನು ಬಲ ಅಗತ್ಯ. ವಚನ, ಭಗವದ್ಗೀತೆ ಮತ್ತು ಉಪನಿಷತ್‌ಗಳಿಗೆ ಕಾನೂನು ಮಾನ್ಯತೆ ಸಿಕ್ಕರೆ ಸಮಾಜದಲ್ಲಿ ಬದಲಾವಣೆ ಸಾಧ್ಯ” ಎಂದು ಅಭಿಪ್ರಾಯಪಟ್ಟರು. ಬಸವ ವೇದಿಕೆಯ ಅಧ್ಯಕ್ಷ ಎಸ್. ಸೋಮಶೇಖರ್ ಮಾತನಾಡಿ, ಬಸವ ತತ್ವಗಳ ಪ್ರಚಾರ ಮತ್ತು ಅನುಷ್ಠಾನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರ...