Posts

Showing posts from August, 2018

ಹೇರ್ ಲೈನ್ ಇಂಟರ್ ನ್ಯಾಷನಲ್

Image
ಹೇರ್ ಲೈನ್ ಇಂಟರ್ ನ್ಯಾಷನಲ್       ಬೆಂಗಳೂರು: 28 ಆಗಸ್ಟ್, 2018: ಹೇರ್ ಲೈನ್ ಇಂಟರ್ ನ್ಯಾಷನಲ್ ಹೇರ್ ಮತ್ತು ಸ್ಕಿನ್ ಕ್ಲಿನಿಕ್ ಇಂದು ಕರ್ನಾಟಕ ಸಲೂನ್ ಹಾಗು ವೆಲ್ನೆಸ್ ಸೆಂಟರ್ ಓನರ್ಸ್ ಎಸೋಸಿಯೇಶನ್ (ಕೆಎಸ್ಡಬ್ಲ್ಯುಒಎ) ಜೊತೆ ಮಾಡಿಕೊಂಡಿರುವ ಒಪ್ಪಂದವನ್ನು ಘೋಷಿಸಿಕೊಂಡಿದೆ. ಈ ಸಂಬಂಧದಿಂದ ಹೇರ್ಲೈನ್ ಇಂಟರ್ನ್ಯಾಷನಲ್ ರಾಜ್ಯಾದ್ಯಂತ 300ಕ್ಕೂ ಹೆಚ್ಚಿನ ಸಲೂನ್ಗಳಲ್ಲಿ ಟ್ರೈಕಾಲಜಿ ಮತ್ತು ಡರ್ಮಟಾಲಜಿಯ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಿದೆ. ಈ ಸಹಾಯಕೇಂದ್ರಗಳು ಗ್ರಾಹಕರ ಟ್ರೈಕಾಲಜಿ ಹಾಗು ಡರ್ಮಟಾಲಜಿ ಸಮಸ್ಯೆಗಳಿಗೆ ಸಂಬಂಧಿಸಿ ಜವಾಬ್ದಾರಿಯುತ ಸೇವೆ ಸಲ್ಲಿಸುತ್ತವೆ. ಕೂದಲು ಉದುರುವಿಕೆ ಮತ್ತು ಡರ್ಮಟಾಲಜಿಯ ಈ ಸಹಾಯಕೇಂದ್ರವನ್ನು ಮುಖ್ಯ ಅತಿಥಿಗಳಾದ ಶಾಸ್ತ್ರೀಯ ನೃತ್ಯ ಪಟು ವಾಣಿ ಗಣಪತಿ ಹಾಗೂ ಪಂಚಾಯತ್ ರಾಜ್ ನ ಕಾರ್ಯದರ್ಶಿ, ಮಾಜಿ ಆರೋಗ್ಯ ಕಮಿಷನರ್ ಎಂ.ವಿ.ಸಾವಿತ್ರಿ ಅನಾವರಣಗೊಳಿಸಿದರು.        ಆ ಬಳಿಕ ಮಾತನಾಡಿದ ವಾಣಿ ಗಣಪತಿ, "ದಿನನಿತ್ಯದ ಬದುಕಿನ ಜಂಜಡಗಳ ಮಧ್ಯೆಯೇ ವಿಶೇಷ ಆರೈಕೆಯ ಬಗ್ಗೆ ಸಾಮಾನ್ಯರಿಗೂ ತಿಳುವಳಿಕೆ ಲಭ್ಯವಾಗುವಂತೆ ಮಾಡಲು ಇದು ಅತ್ಯುತ್ಯಮ ಮಾರ್ಗವಾಗಿದೆ. ಇದು ಗ್ರಾಹಕರ ಮತ್ತು ಸಂಸ್ಥೆಯ ಮಧ್ಯೆ ಉತ್ತಮ ಬಾಂಧವ್ಯವನ್ನು ಏರ್ಪಡಿಸುತ್ತದೆ. ಟ್ರೈಕಾಲಜಿ ಮತ್ತು ತ್ವಚೆ ಆರೈಕೆಯಲ್ಲಿ ಉತ್ತಮ ಹೆಸರು ಮಾಡಿರುವ ಈ ಸಂಸ್ಥೆ ಸಲೂನ್ಗಳಿಗೂ ವಿಶ್ವಾಸಾರ್ಹ ಹೆಸರಿನ ಬೆಂಬಲವನ್ನು ನೀಡಲಿದೆ
Image
ಪ್ಲಾಸ್ಟಿಕ್ ಮತ್ತು ಕಸಮುಕ್ತ ಜಯನಗರ ಪ್ಲಾಸ್ಟಿಕ್ ಬಳಕೆಯನ್ನು ರಾಜ್ಯ ಸರ್ಕಾರವು 2016ರ ಮಾರ್ಚ್ 11ರಿಂದ ನಿಷೇಧಿಸಿದ್ದರು ಸಹ  ನಗರದಲ್ಲಿ ಕಂಡುಕಾಣದಂತೆ ಪ್ಲಾಸ್ಟಿಕ್ ಉಪಯೋಗವಾಗುತ್ತಿದೆ. ಇದರಿಂದಾಗಿ ನಗರದಲ್ಲಿ 300-400 ಟನ್ ಪ್ಲಾಸ್ಟಿಕ್ ತ್ಯಾಜ್ಯ ದೊರೆಯುತ್ತಿದ್ದು, ಇದು ಪರಿಸರದ ಮೇಲೆ ಮಾರಕ ಪರಿಣಾಮ ಬೀರುತ್ತಿದೆ. ಜಯನಗರವನ್ನು ದೇಶದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡಬೇಕೆಂದು ಪಣತೊಟ್ಟಿರುವ ಶಾಸಕಿ ಸೌಮ್ಯಾರೆಡ್ಡಿರವರು  ಪ್ಲಾಸ್ಟಿಕ್ ಮತ್ತು ಕಸಮುಕ್ತ ಜಯನಗರ ಜಾಗೃತಿ ಆಭಿಯಾನವನ್ನು ಆಯೋಜಿಸಿದರು. ಅಭಿಯಾನಕ್ಕೆ ನೂರಾರು ವಿದ್ಯಾರ್ಥಿಗಳು ಹಾಗೂ ನಿವಾಸಿಗಳು ಆಗಮಿಸಿದ್ದರು.

ಅದ್ದೂರಿ ಸ್ವಾತಂತ್ರ್ಯೋತ್ಸವ

Image
ಬೆಂಗಳೂರಿನ ಸೇಂಟ್ ಮಾರ್ಕ್ಸ್ ಇಂಗ್ಲೀಷ್ ಶಾಲೆಯಲ್ಲಿ  ಅದ್ದೂರಿ ಸ್ವಾತಂತ್ರ್ಯೋತ್ಸವ..      ಸೇಂಟ್ ಮಾರ್ಕ್ಸ್ ಇಂಗ್ಲಿಷ್ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣವನ್ನು ಬೆಂಗಳೂರು ಜಿಲ್ಲಾ ಕಾಂಗ್ರೆಸ್‌ನ  ಉಪಾಧ್ಯಕ್ಷರಾದ  ತಿಮ್ಮರಾಜು ಅವರು ನೆರವೇರಿಸಿದರು. ಸಮಾರಂಭದಲ್ಲಿ  ಶಾಲೆಯು ಅಧ್ಯಕ್ಷರಾದ ಶ್ರೀರಂಗಮ್ಮ, ನಿವೃತ್ತ ಪ್ರಾಂಶುಪಾಲರಾದ ಶಾರದಮ್ಮ, ಶಾಲಾ ಆಡಳಿತದ ಪ್ರದೀಪ್ ಕುಮಾರ್ ಡಿ.ಸಿ ಹಾಗೂ ಚೈತ್ರ ಕೆ.ಪಿ ಹಾಗೂ ಓಂ ಪ್ರಕಾಶ್ ಅವರು ಉಪಸ್ಥಿತಾಗಿದ್ದರು.             ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ತಿಮ್ಮರಾಜು ಅವರು ಮಾತನಾಡಿ, ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಪೋಷಕರು ಮಾಡಬೇಕು, ಮಕ್ಕಳ ಆಸಕ್ತಿ ಅನುಗುಣವಾಗಿ ಬೆಳೆಯಲು ಪ್ರೇರೆಪಣೆ ನೀಡಬೇಕು. ಇಂದಿನ ಮಕ್ಕಳು ಉತ್ತಮ ಕೌಶಲ್ಯವನ್ನು ವೃದ್ಧಿಸಿಕೊಂಡು ಉತ್ತಮ ವ್ಯಕ್ತಿಗಳಾಗಿ ಜೀವಿಸಬೇಕು. ಏನಾದರೂ ಗುರಿಮಟ್ಟಲು, ಅವರ ಆಶಾಭಾವನೆ ಕೆದಿಕಿ  ನಾವು ಮಾರ್ಗದರ್ಶ ನೀಡಬೇಕು. ಪೋಷಕರು ಅವರಲ್ಲಿನ ಆಸಕ್ತಿ ತುಂಬಿ ಅವರ ಏಳಿಗೆಗೆ ಶ್ರಮಿಸಬೇಕು ಎಂದು ಮಕ್ಕಳಿಗೆ ಉಪಯುಕ್ತ  ಮಾಹಿತಿ ನೀಡಿದರು.    ಮಕ್ಕಳನ್ನು ಹೆಚ್ಚು ಅಂಕಗಳನ್ನು ಗಳಿಸಲು ಮಾತ್ರ ಸೀಮಿತಗೊಳಿಸಬಾರದು. ಅವರಲ್ಲಿನ ಪ್ರತಿಭೆಯ ಆಧಾರದ ಮೇಲೆ ಅವರಿಗೆ ಸ್ಪೂರ್ತಿ ತುಂಬಬೇಕು. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಎಲ್ಲರಿಗೂ ಶುಭಾಷಯ ಕೋರುತ್ತ ತಮ್ಮ ಬಾಷಣವನ್ನು