ಹೇರ್ ಲೈನ್ ಇಂಟರ್ ನ್ಯಾಷನಲ್


ಹೇರ್ ಲೈನ್ ಇಂಟರ್ ನ್ಯಾಷನಲ್ 



     ಬೆಂಗಳೂರು: 28 ಆಗಸ್ಟ್, 2018: ಹೇರ್ ಲೈನ್ ಇಂಟರ್ ನ್ಯಾಷನಲ್ ಹೇರ್ ಮತ್ತು ಸ್ಕಿನ್ ಕ್ಲಿನಿಕ್ ಇಂದು ಕರ್ನಾಟಕ ಸಲೂನ್ ಹಾಗು ವೆಲ್ನೆಸ್ ಸೆಂಟರ್ ಓನರ್ಸ್ ಎಸೋಸಿಯೇಶನ್ (ಕೆಎಸ್ಡಬ್ಲ್ಯುಒಎ) ಜೊತೆ ಮಾಡಿಕೊಂಡಿರುವ ಒಪ್ಪಂದವನ್ನು ಘೋಷಿಸಿಕೊಂಡಿದೆ. ಈ ಸಂಬಂಧದಿಂದ ಹೇರ್ಲೈನ್ ಇಂಟರ್ನ್ಯಾಷನಲ್ ರಾಜ್ಯಾದ್ಯಂತ 300ಕ್ಕೂ ಹೆಚ್ಚಿನ ಸಲೂನ್ಗಳಲ್ಲಿ ಟ್ರೈಕಾಲಜಿ ಮತ್ತು ಡರ್ಮಟಾಲಜಿಯ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಿದೆ. ಈ ಸಹಾಯಕೇಂದ್ರಗಳು ಗ್ರಾಹಕರ ಟ್ರೈಕಾಲಜಿ ಹಾಗು ಡರ್ಮಟಾಲಜಿ ಸಮಸ್ಯೆಗಳಿಗೆ ಸಂಬಂಧಿಸಿ ಜವಾಬ್ದಾರಿಯುತ ಸೇವೆ ಸಲ್ಲಿಸುತ್ತವೆ. ಕೂದಲು ಉದುರುವಿಕೆ ಮತ್ತು ಡರ್ಮಟಾಲಜಿಯ ಈ ಸಹಾಯಕೇಂದ್ರವನ್ನು ಮುಖ್ಯ ಅತಿಥಿಗಳಾದ ಶಾಸ್ತ್ರೀಯ ನೃತ್ಯ ಪಟು ವಾಣಿ ಗಣಪತಿ ಹಾಗೂ ಪಂಚಾಯತ್ ರಾಜ್ ನ ಕಾರ್ಯದರ್ಶಿ, ಮಾಜಿ ಆರೋಗ್ಯ ಕಮಿಷನರ್ ಎಂ.ವಿ.ಸಾವಿತ್ರಿ ಅನಾವರಣಗೊಳಿಸಿದರು.

       ಆ ಬಳಿಕ ಮಾತನಾಡಿದ ವಾಣಿ ಗಣಪತಿ, "ದಿನನಿತ್ಯದ ಬದುಕಿನ ಜಂಜಡಗಳ ಮಧ್ಯೆಯೇ ವಿಶೇಷ ಆರೈಕೆಯ ಬಗ್ಗೆ ಸಾಮಾನ್ಯರಿಗೂ ತಿಳುವಳಿಕೆ ಲಭ್ಯವಾಗುವಂತೆ ಮಾಡಲು ಇದು ಅತ್ಯುತ್ಯಮ ಮಾರ್ಗವಾಗಿದೆ. ಇದು ಗ್ರಾಹಕರ ಮತ್ತು ಸಂಸ್ಥೆಯ ಮಧ್ಯೆ ಉತ್ತಮ ಬಾಂಧವ್ಯವನ್ನು ಏರ್ಪಡಿಸುತ್ತದೆ. ಟ್ರೈಕಾಲಜಿ ಮತ್ತು ತ್ವಚೆ ಆರೈಕೆಯಲ್ಲಿ ಉತ್ತಮ ಹೆಸರು ಮಾಡಿರುವ ಈ ಸಂಸ್ಥೆ ಸಲೂನ್ಗಳಿಗೂ ವಿಶ್ವಾಸಾರ್ಹ ಹೆಸರಿನ ಬೆಂಬಲವನ್ನು ನೀಡಲಿದೆ" ಎಂದರು.

    ಮಾಧ್ಯಮಗಳಿಗೆ ಮಾತನಾಡಿದ ಪಂಚಾಯತ್ ರಾಜ್ ಕಾರ್ಯದರ್ಶಿ, ಮಾಜಿ ಆರೋಗ್ಯ ಕಮಿಷನರ್, ಎಂ.ವಿ.ಸಾವಿತ್ರಿ, "ಸೌಂದರ್ಯ ಸೇವೆ ಮತ್ತು ಕೂದಲು-ಚರ್ಮಗಳ ಆರೈಕೆಯ ವೈದ್ಯಕೀಯ ನಿರ್ವಹಣೆ ನಡುವಿನ ಸಂಪರ್ಕವನ್ನು ಒದಗಿಸುವ ಈ ಸಲೂನ್ಗಳು ಗ್ರಾಹಕರಿಗೆ ಸೌಂದರ್ಯಕ್ಕೂ ಮೀರಿದ ರಕ್ಷಿತ ವಲಯಕ್ಕೆ ಪ್ರವೇಶ ನೀಡಲಿದೆ" ಎಂದರು.

      ಹೇರ್ ಲೈನ್ ಇಂಟರ್ ನ್ಯಾಷನಲ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ.ಬನಿ ಆನಂದ್, "ಕೂದಲು ಉದುರುವಿಕೆ ಸಮಸ್ಯೆ ಕಂಡುಬಂದಾಗ ಗ್ರಾಹಕರು ಮೊದಲಿಗೆ ಸಲೂನ್ನಲ್ಲೇ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ. ನಮ್ಮ ಈ ಹೊಸ ಒಪ್ಪಂದದಿಂದ ಸಲೂನ್ ಮಾಲಿಕರು ಗ್ರಾಹಕರಿಗೆ ವೈದ್ಯಕೀಯ ಆಧಾರಿತ ಉಲ್ಲೇಖ ಮತ್ತು ಟ್ರೈಕಾಲಜಿ-ಡರ್ಮಟಾಲಜಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನೆರವಾಗುತ್ತಾರೆ. ಈ ಸಮಸ್ಯೆ ಕೇವಲ ಸೌಂದರ್ಯಕ್ಕೆ ಮಾತ್ರ ಸಂಬಂಧಿಸಿಲ್ಲ ಎಂಬುದನ್ನು ಗ್ರಾಹಕರಿಗೆ ಅರ್ಥ ಮಾಡಿಸುತ್ತಾರೆ. ಈ ಹೊಂದಾಣಿಕೆಯಿಂದ ಹಂತ ಹಂತವಾಗಿ ನಮಗೆ 300ಕ್ಕೂ ಅಧಿಕ ಸಲೂನ್ಗಳನ್ನು ತಲುಪಲು ಸಾಧ್ಯವಾಗುತ್ತದೆ" ಎಂದು ಹೇಳಿದರು.

         ಈ ಸಂಘವು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ವಿವರಿಸಿದ ಡಾ.ಬನಿ, " ಈ ಯೋಜನೆಯನ್ನು ನಾವು ಹಂತ ಹಂತವಾಗಿ ಜಾರಿಗೊಳಿಸುತ್ತೇವೆ. ಸಲೂನ್ಗಳು ನಮ್ಮೊಂದಿಗೆ ಹೆಸರು ನೋಂದಾಯಿಸಿಕೊಳ್ಳುತ್ತವೆ ಬಳಿಕ ಹೇರ್ ಲೈನ್ ಇಂಟರ್ ನ್ಯಾಷನಲ್ನ ಪ್ರತಿನಿಧಿ ಹೆಲ್ಪ್ ಡೆಸ್ಕ್ ನಲ್ಲಿಕೂದಲಿನ ಮತ್ತು ಚರ್ಮದ ಕುರಿತು ಮಾಹಿತಿ ನೀಡುವ ಮಾರ್ಗದರ್ಶಕ ಸಂಯೋಜಕನಾಗಿ ಕೆಲಸ ಮಾಡುತ್ತಾನೆ. ಆತ ಸಲೂನ್ ಮತ್ತು ಹೇರ್ಲೈನ್ ಇಂಟರ್ ನ್ಯಾಷನಲ್ ಮಧ್ಯದ ಕೊಂಡಿಯಾಗಿ ಕೆಲಸ ನಿರ್ವಹಿಸುತ್ತಾನೆ. ಕೂದಲಿನ ನಿರ್ವಹಣೆ ಮತ್ತು ಚಿಕಿತ್ಸೆಯ ಆಯ್ಕೆಗಳ ಬಗ್ಗೆ ಗ್ರಾಹಕರಿಗೆ ಸರಿಯಾದ ಮಾರ್ಗದರ್ಶನ ನೀಡುತ್ತಾನೆ" ಎಂದರು. 
  
           ಗ್ರಾಹಕರು ಸಲೂನ್ನ ಹೆಲ್ಪ್ ಡೆಸ್ಕ್ಗಳಲ್ಲಿ ಪಡೆಯಬಹುದಾದ ಸೇವೆಗಳಾದ ಕೂದಲ ಕಸಿ ವಿಧಾನ, ರೊಬೊಟಿಕ್ ಹೇರ್ ಪ್ಲಾಂಟೇಶನ್, ನೆತ್ತಿಯ ಸೂಕ್ಷ್ಮ ಕಸಿ ಬಗ್ಗೆ ಹೇರ್ಲೈನ್ ಇಂಟರ್ ನ್ಯಾಷನಲ್ ನ ಡರ್ಮಟೊಸರ್ಜನ್ ಡಾ.ದಿನೇಶ್ ಗೌಡ ವಿವರಿಸಿದರು. ಕನ್ಸಲ್ಟೆಂಟ್ ಡರ್ಮಟಾಲಜಿಸ್ಟ್ ಮತ್ತು ಕಾಸ್ಮೆಟಾಲಜಿಸ್ಟ್ ಡಾ.ಕಲಾ ವಿಮಲ್ ಲೇಸರ್ ಕೂದಲಿನ ಕಡಿತ ಮತ್ತು ಹಚ್ಚೆ ತೆಗೆಯುವಿಕೆಯ ಲೇಸರ್ ಚಿಕಿತ್ಸೆಗಳ ಬಗ್ಗೆ ವಿವರ ನೀಡಿದರು. ಅವರ ವಿವರಣೆಯಲ್ಲಿ ಮುಖದ ಹೊಳಪು, ಫೇಶಿಯಲ್, ಕೆಮಿಕಲ್ ಪೀಲ್ಸ್ ಮತ್ತು ಸೂಕ್ಷ್ಮ ಡರ್ಮಬೇಶನ್ಗಳೂ ಸೇರಿದ್ದವು. ಹೇರ್ ಲೈನ್ ಇಂಟರ್ ನ್ಯಾಷನಲ್ ನ ಡರ್ಮಟೊ ಸರ್ಜನ್ ಡಾ. ಪ್ರೇಮಲತಾ ಶಾಶ್ವತ ಕಾಸ್ಮೆಟಿಕ್ ಮೇಕಪ್, ಚರ್ಮ ಮತ್ತು ಕೂದಲು ಡಿಎನ್ಎ ಪರೀಕ್ಷೆಗೆ ಸಂಬಂಧಿಸಿದ ಚಿಕಿತ್ಸೆಗಳನ್ನು ವಿವರಿಸಿದರು. ಮತ್ತು ಕೂದಲಿನ ಡಿಎನ್ಎ ಪರೀಕ್ಷೆ ಮತ್ತು ಚಿಕಿತ್ಸೆ ಹಾಗು ಕೂದಲು ಚಿಕಿತ್ಸೆಗೆ ಪಿಆರ್ಪಿ ಬಳಕೆಯ ಬಗ್ಗೆ ವಿವರ ನೀಡಿದರು. ಇವೆಲ್ಲಗಳಲ್ಲಿ ಉದಾಹರಣೆ ಸಹಿತ ಉತ್ತಮ ತಿಳುವಳಿಕೆಯ ವಿಶ್ಲೇಷಣೆ ಸೇರಿತ್ತು.


        ಈ ಸಂಸ್ಥೆಯ ಮೂಲಕ ಹೇರ್ ಲೈನ್ ಇಂಟರ್ ನ್ಯಾಶನಲ್ ತನ್ನ ಸಂಪೂರ್ಣ ಶ್ರೇಣಿಯ ಸೇವೆಗಳನ್ನು, ತನಿಖಾ ತಂತ್ರಗಳನ್ನು ಹಾಗೂ ಚಿಕಿತ್ಸಾಕ್ರಮಗಳನ್ನು ಲಭ್ಯಗೊಳಿಸಲಿದೆ. ಮುಂದಿನ ಕೆಲ ದಿನಗಳಲ್ಲಿ ಡಿಎನ್ಎ ಪರೀಕ್ಷೆಯ ಕಿಟ್ ಗಳನ್ನು   ಅಳವಡಿಸಲಾಗುತ್ತದೆ. ಇದು ಗ್ರಾಹಕರಿಗೆ ಡಿಎನ್ಎ ಆಧಾರಿತ ಕಸ್ಟಮೈಸ್ ಚಿಕಿತ್ಸೆಯನ್ನು ನೀಡಲಿದೆ. ಭವಿಷ್ಯದಲ್ಲಿ ಗ್ರಾಹಕರಿಗೆ ಆರ್ಥಿಕವಾಗಿ ಸಹಾಯಧನ ಒದಗಿಸುವ ಪ್ಯಾಕೇಜ್ ಗಳನ್ನು ಪರಿಚಯಿಸುವ  ಯೋಜನೆಗಳಿವೆ. ಇದು ಟ್ರೈಕಾಲಜಿ ಮತ್ತು ಡರ್ಮಟಾಲಾಜಿಕಲ್ ಚಿಕಿತ್ಸೆ ಗಳಿಗೆ ಅನ್ವಯವಾಗಲಿದೆ.

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ