ಅದ್ದೂರಿ ಸ್ವಾತಂತ್ರ್ಯೋತ್ಸವ

ಬೆಂಗಳೂರಿನ ಸೇಂಟ್ ಮಾರ್ಕ್ಸ್ ಇಂಗ್ಲೀಷ್ ಶಾಲೆಯಲ್ಲಿ  ಅದ್ದೂರಿ ಸ್ವಾತಂತ್ರ್ಯೋತ್ಸವ..


     ಸೇಂಟ್ ಮಾರ್ಕ್ಸ್ ಇಂಗ್ಲಿಷ್ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣವನ್ನು ಬೆಂಗಳೂರು ಜಿಲ್ಲಾ ಕಾಂಗ್ರೆಸ್‌ನ  ಉಪಾಧ್ಯಕ್ಷರಾದ  ತಿಮ್ಮರಾಜು ಅವರು ನೆರವೇರಿಸಿದರು. ಸಮಾರಂಭದಲ್ಲಿ  ಶಾಲೆಯು ಅಧ್ಯಕ್ಷರಾದ ಶ್ರೀರಂಗಮ್ಮ, ನಿವೃತ್ತ ಪ್ರಾಂಶುಪಾಲರಾದ ಶಾರದಮ್ಮ, ಶಾಲಾ ಆಡಳಿತದ ಪ್ರದೀಪ್ ಕುಮಾರ್ ಡಿ.ಸಿ ಹಾಗೂ ಚೈತ್ರ ಕೆ.ಪಿ ಹಾಗೂ ಓಂ ಪ್ರಕಾಶ್ ಅವರು ಉಪಸ್ಥಿತಾಗಿದ್ದರು.

   
        ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ತಿಮ್ಮರಾಜು ಅವರು ಮಾತನಾಡಿ, ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಪೋಷಕರು ಮಾಡಬೇಕು, ಮಕ್ಕಳ ಆಸಕ್ತಿ ಅನುಗುಣವಾಗಿ ಬೆಳೆಯಲು ಪ್ರೇರೆಪಣೆ ನೀಡಬೇಕು. ಇಂದಿನ ಮಕ್ಕಳು ಉತ್ತಮ ಕೌಶಲ್ಯವನ್ನು ವೃದ್ಧಿಸಿಕೊಂಡು ಉತ್ತಮ ವ್ಯಕ್ತಿಗಳಾಗಿ ಜೀವಿಸಬೇಕು. ಏನಾದರೂ ಗುರಿಮಟ್ಟಲು, ಅವರ ಆಶಾಭಾವನೆ ಕೆದಿಕಿ  ನಾವು ಮಾರ್ಗದರ್ಶ ನೀಡಬೇಕು. ಪೋಷಕರು ಅವರಲ್ಲಿನ ಆಸಕ್ತಿ ತುಂಬಿ ಅವರ ಏಳಿಗೆಗೆ ಶ್ರಮಿಸಬೇಕು ಎಂದು ಮಕ್ಕಳಿಗೆ ಉಪಯುಕ್ತ  ಮಾಹಿತಿ ನೀಡಿದರು.
   ಮಕ್ಕಳನ್ನು ಹೆಚ್ಚು ಅಂಕಗಳನ್ನು ಗಳಿಸಲು ಮಾತ್ರ ಸೀಮಿತಗೊಳಿಸಬಾರದು. ಅವರಲ್ಲಿನ ಪ್ರತಿಭೆಯ ಆಧಾರದ ಮೇಲೆ ಅವರಿಗೆ ಸ್ಪೂರ್ತಿ ತುಂಬಬೇಕು. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಎಲ್ಲರಿಗೂ ಶುಭಾಷಯ ಕೋರುತ್ತ ತಮ್ಮ ಬಾಷಣವನ್ನು ಮುಕ್ತಾಯಗೊಳಿಸಿದರು. 
      ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ದೇವೇಂದ್ರಪ್ಪ  ಅವರಿಗೆ ನೀಡಿ ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. 

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ