ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಆಡಳಿತ ಮಂಡಳಿಯ ವಿರುದ್ದ ನೌಕರರ ಧರಣಿ ಸತ್ಯಾಗ್ರಹ

ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಆಡಳಿತ ಮಂಡಳಿಯ ವಿರುದ್ದ ನೌಕರರ ಧರಣಿ ಸತ್ಯಾಗ್ರಹ


    ಬೆಂಗಳೂರು, ಜುಲೈ 09, 2018: ತಮಿಳುನಾಡು ಮೂಲಕ ಆಡಳಿತ ಮಂಡಳಿಯ ಅಧೀನದಲ್ಲಿರುವ ಬೆಂಗಳೂರಿನ ಕೆಂಗೇರಿ ರಸ್ತೆಯಲ್ಲಿರುವ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತ ಮಂಡಳಿ ನೌಕರರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿ ಇಂದು ನೂರಕ್ಕೂ ಹೆಚ್ಚು ಸಿಬ್ಬಂದಿಗಳು ಧರಣಿ ಸತ್ಯಾಗ್ರಹವನ್ನು ನಡೆಸಿದರು.

       ನಗರದ ಮೌರ್ಯ ವೃತ್ತದ ಬಳಿ ಇರುವ ಗಾಂದಿ  ಪ್ರತಿಮೆಯ ಬಳಿ ನಡೆದ ಪ್ರತಿಭಟನೆಯ ನೇತೃತ್ವವನ್ನು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷರಾದ ಡಾ ವೆಂಟಕಸ್ವಾಮಿ, ಆರ್ ಆರ್ ಎಂ ಸಿ ಹೆಚ್ ಯೂನಿಯನ್ ಗೌರವ ಅಧ್ಯಕ್ಷರಾದ ಡಾ. ಸಿ ಎಸ್ ರಘು ವಹಿಸಿದ್ದರು.

     ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷರಾದ ಡಾ ವೆಂಟಕಸ್ವಾಮಿ ಮಾತನಾಡಿ, 350 ಕ್ಕೂ ಹೆಚ್ಚು ಸಂಖ್ಯೆಯಲ್ಲಿರುವ ಮೇಲೆ ಆಡಳಿತ ಮಂಡಳಿ ಮೊದಲಿನಿಂದಲೂ ಕೂಡಾ ದೌರ್ಜನ್ಯವನ್ನು ನಡೆಸುತ್ತಿದೆ. 8 ರಿಂದ 10 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿರುವ ನೌಕರರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ನೌಕರರ ಸಂಘ ಕಟ್ಟಿದ್ದೇ ತಪ್ಪಾಗಿದೆ, ಸಂಘದ ಮುಖಂಡರುಗಳಿಗೆ ತೀವ್ರ ಕಿರುಕುಳ ನೀಡಲಾರಂಭಿಸಿದ್ದಾರೆ ಅಲ್ಲದೆ, 6 ಜನ ನೌಕರರನ್ನು ಸೇವೆಯಿಂದ ಅಮಾನತ್ತುಗೊಳಿಸಿದ್ದಾರೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.

      ಆರ್ ಆರ್ ಎಂ ಸಿ ಹೆಚ್ ಯೂನಿಯನ್ ಗೌರವ ಅಧ್ಯಕ್ಷರಾದ ಡಾ. ಸಿ ಎಸ್ ರಘು ಮಾತನಾಡಿ, ಮೇಲ್ಕಂಡ ಆಡಳಿತ ಮಂಡಳಿ ಸದಸ್ಯರ ವಿರುದ್ದ ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಾಗಿ ಪ್ರಥಮ ಮಾಹಿತಿ ವರದಿ ಸಿದ್ದವಾಗಿದ್ದರೂ ಅವರ ವಿರುದ್ದ ಯಾವುದೇ ಕ್ರಮ ಜರುಗಿಸದೇ ನೌಕರರ ಮುಖಂಡರನ್ನು ಜಾತಿವಾದಿ ಆಡಳಿತ ವರ್ಗವು ಶಿಕ್ಷಿಸಿದೆ. ಈ ಕಾರ್ಮಿಕ ಹಾಗೂ ದಲಿತ ವಿರೋಧಿ ನೀತಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. 
                                                                                                         ರಾಜ್ಯ ಸರಕಾರ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಈ ಕೂಡಲೇ ಮನಹರಿಸಿ ಕಾರ್ಮಿಕರ ಅಮಾನತ್ತನ್ನು ರದ್ದುಗೊಳಿಸಬೇಕು. ಅಲ್ಲದೆ, ಆಡಳಿತ ಮಂಡಳಿ ಸದಸ್ಯರನ್ನು ಬಂದಿಸಿ ಜೈಲಿಗೆ ಕಳುಹಿಸಬೇಕು ಎಂದು ಅವರು ಆಗ್ರಹಿಸಿದರು. ನಮ್ಮ ಬೇಡಿಕೆಗಳು ಈಡೇರದೇ ಇದ್ದಲ್ಲಿ ನಮ್ಮ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

         ಸಮಾನ ಕೆಲಸಕ್ಕೆ ಸಮಾನ ವೇತನ, ಹೆರಿಗೆ ಭತ್ಯೆ ಸೌಲಭ್ಯ, ಸರಕಾರಿ ರಜೆ ಸೌಲಭ್ಯ, ಅನುಭವನದ ಮೇರೆಗೆ ಮುಂಬಡ್ತಿ, ಕೆಲಸದ ಭದ್ರತೆ, ಮೂಲಭೂತ ಸೌಕರ್ಯದ ಸೌಲಭ್ಯ, ನೌಕರರ ಮುಖಂಡರ ಅಮಾನತ್ತನ್ನು ರದ್ದುಗೊಳಿಸಬೇಕು, ಆಡಳಿತ ಮಂಡಳಿಯ ಡಾ ನವೀನ್ ಪ್ರಸನ್ನ ಕುಮಾರ್ ಹಾಗೂ ಜ್ಯೋತಿಯವರನ್ನು ಬಂಧಿಸಬೇಕು ಎಂದು ಪ್ರತಿಭಟನಾ ಸಿಬ್ಬಂದಿಗಳು ಆಗ್ರಹಿಸಿದರು.
   ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಿದರು. 

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ