ಸಾವಯವ ಮೇಳದಿಂದ ರೈತರಿಗೆ ಲಾಭ: ರಾಮಲಿಂಗಾ ರೆಡ್ಡಿ

ಸಾವಯವ ಮೇಳದಿಂದ ರೈತರಿಗೆ ಲಾಭ: ರಾಮಲಿಂಗಾ ರೆಡ್ಡಿ 


    ಬೆಂಗಳೂರು: ರಾಜಧಾನಿಯಲ್ಲಿ ಸಾವಯವ ಮೇಳ ಆಯೋಜಿಸಿರುವುದು  ಒಳ್ಳೆಯ ಬೆಳವಣಿಗೆ. ಇದರಿಂದಾಗಿ ಹೆಚ್ಚಿನ ಜನರಲ್ಲಿ ಇದರ ಬಗ್ಗೆ ಅರಿವು ಉಂಟಾಗಲು ಸಹಾಯಕವಾಗಲಿದೆ. ಈ ಮೇಳ ಆಯೋಜಿಸಿರುವ ಐಸಿಸಿಒಎಯ ಒಂದು ಉತ್ತಮ ಉಪಕ್ರಮ ಇದಾಗಿದೆ ಎಂದು ಶಾಸಕ ರಾಮಲಿಂಗಾ ರೆಡ್ಡಿ ಶ್ಲಾಘನೆ    ವ್ಯಕ್ತಪಡಿಸಿದರು. 
        ಇಂಟರ್‌ನ್ಯಾಾಷನಲ್ ಕಂಪಟೆನ್‌ಸ್‌ ಸೆಂಟರ್ ಫಾರ್ ಆರ್ಗ್ಯಾನಿಕ್  ಅಗ್ರಕಲ್ಚರ್ ಹಾಗೂ ಬಿಬಿಎಂಪಿ ಸಹಯೋಗದಲ್ಲಿ  ಕೋರಮಂಗಲದಲ್ಲಿ ನಿನ್ನೆ  ಮತ್ತು ಇಂದು ನಡೆಯುತ್ತಿರುವ ಸಾವಯವ ಕೃಷಿ ಮೇಳ ಉದ್ಘಾಾಟಿಸಿ ಮಾತನಾಡಿದ ಅವರು, ಇಂತಹ ಸಾವಯವ ಆಹಾರ ಪದಾರ್ಥಗಳ ಮೇಳ ಆಯೋಜಿಸಿರುವುದರಿಂದ ರೈತರಿಗೆ ಲಾಭವಾಗಲಿದೆ. ಜೊತೆಗೆ ದೇಶಾದ್ಯಂತ ಕಂಪನಿಗಳು ಈ ಮೇಳದಲ್ಲಿ ಭಾಗವಹಿಸುವುದರಿಂದ  ಹೆಚ್ಚಿನ ಲಾಭ  ರೈತರಿಗೆ ದೊರೆಯಲಿದೆ ಎಂದು ಹೇಳಿದರು. 
        ಕರ್ನಾಟಕ ಸಾವಯವ ಆಹಾರ ಬಳಕೆ ಬಗ್ಗೆ ಹೆಚ್ಚು ಜಾಗೃತಿ ಮೂಡಿದೆ. ಹೀಗಾಗಿ ಸಾವಯವ ಆಹಾರಕ್ಕೆ ಹೆಚ್ಚು ಬೇಡಿಕೆ ಬಂದಿದೆ. ಸಾವಯವ ಬೆಳೆ ಬೆಳೆಯುವ ರೈತರ ಸಂಖ್ಯೆ ಕೂಡ ಹೆಚ್ಚಳವಾಗಿದೆ. ಸಾವಯವ ಪದಾರ್ಥಗಳನ್ನು ಜನರಿಗೆ ಪರಿಚಯಿಸಲು ಈ ಮೇಳ ಆಯೋಜಿಸಿದ್ದು, ನಗರಾದ್ಯಂತ ಜನರು ಆಗಮಿಸಿ ಈ ಮೇಳ ಯಶಸ್ವಿಗೊಳಿಸಬೇಕು  ಎಂದರು.
       ಈ ಮೇಳದಲ್ಲಿ ಸಾವಯವ ರೀಲೆಟರ್‌ಗಳು ಭಾಗಿಯಾಗಲಿದ್ದು, ಪ್ರತಿ ತಿಂಗಳು ಈ ಕಾರ್ಯಕ್ರಮ ನಡೆಸಲಾಗುತ್ತದೆ. 
      ಎರಡು ದಿನಗಳ ಈ ಮೇಳದಲ್ಲಿ 40 ರಿಂದ 50 ಸಾವಯವ ಕಂಪನಿಗಳು, ರೈತರು ಭಾಗವಹಿಸಿ ಎಲ್ಲ ಬಗೆಯ ಸಾವಯವ ತರಕಾರಿ, ಹಣ್ಣು, ಪದಾರ್ಥಗಳು ಪ್ರದರ್ಶನಕ್ಕೆ  ಇಡಲಿದ್ದಾರೆ. ಉತ್ತರಖಾಂಡ, ವೆಸ್ಟ್ ಬೆಂಗಾಲ್, ಉತ್ತರ ಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದಿಂದ ಸಾವಯವ ಬೆಳೆ ಬೆಳೆದ ರೈತರು ಕೂಡ ಇಲ್ಲಿ ಪಾಲ್ಗೊಳ್ಳಲಿದ್ದಾರೆ 

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ