jayakarnataka janapara vedike

 ಜಯ ಕರ್ನಾಟಕ ಜನಪರ  ವೇದಿಕೆಯಿಂದ  ಫಾಸ್ಟಾಗ್ ಕಡ್ಡಾಯ ವಿರೋಧಿಸಿ ಪ್ರತಿಭಟನೆ.


          ಬೆಂಗಳೂರು: ಟೋಲ್ ಗಳಲ್ಲಿ ಫಾಸ್ಟಾಗ್ ಕಡ್ಡಾಯ ವಿರೋಧಿಸಿ ಹಾಗೂ ಸರ್ವಿಸ್ ರಸ್ತೆಗಳನ್ನು ಬಿಡದೆ  ಟೋಲ್ ಸುಂಕ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ 8ನೇ ಮೈಲಿಯ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಂದೆ ಜಯ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

             ವಾಹನ  ಸವಾರರಿಂದ ಟೋಲ್ ಸುಂಕವನ್ನು ಪಡೆದು ಸರ್ವಿಸ್ ರಸ್ತೆಗಳಿಲ್ಲ  ಹಾಗೂ ಉತ್ತಮ ಗುಣಮಟ್ಟದ ನಿರ್ವಹಣೆ ಇಲ್ಲ. ಕೂಡಲೇ ರಾಜ್ಯದ ಎಲ್ಲಾ ಟೋಲ್ ಕಂಪನಿಗಳು ಸರ್ವಿಸ್ ರಸ್ತೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ರಾಜ್ಯಾಧ್ಯಕ್ಷ ಆರ್. ಚಂದ್ರಪ್ಪ  ಆಗ್ರಹಿಸಿದರು.

         ಭಾರತದ ಸರ್ವೋಚ್ಚ ನ್ಯಾಯಾಲಯ ನಡೆದಾಡುವ ಸ್ವತಂತ್ರ ಹಕ್ಕನ್ನು ಸಂವಿಧಾನ ರೀತಿಯಲ್ಲಿ ನೀಡಿರುತ್ತದೆ. ಅಲ್ಲದೆ ಭಾರತದಲ್ಲಿ ಖರೀದಿಮಾಡುವ ಪ್ರತಿ ವಾಹನಕ್ಕು ಜೀವಮಾನದ ರಸ್ತೆ ತೆರಿಗೆ ( ಲೈಫ್ ಟೈಮ್ ರೋಡ್ ಟ್ಯಾಕ್ಸ್) ಪಡೆದುಕೊಂಡ ನಂತರವಷ್ಟೇ ಪ್ರಾದೇಶಿಕ ಸಾರಿಗೆಯ ಅಧಿಕಾರಿಗಳು ವಾಹನಗಳನ್ನು ನಮೂದಿಸಿಕೊಂಡು ರಸ್ತೆಗಿಳಿಸಲು ಅವಕಾಶ ಮಾಡಿಕೊಟ್ಟಿರುತ್ತಾರೆ. ಜೀವಮಾನದ ರಸ್ತೆ ತೆರಿಗೆಯಿಂದಲೇ ಎಲ್ಲಾ ಮೂಲಭೂತ ಸೌಕರ್ಯಗಳನ್ನ ಕಲ್ಪಿಸಿಕೊಡಲು ನಿಗದಿ ಆಗಿರುತ್ತದೆ. ಆದರೂ ಕೂಡ ದುರಾದೃಷ್ಟಕರ ವಿಚಾರವೇನೆಂದರೆ ಇಡೀ ಭಾರತದ ತುಂಬಾ ಎಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಿಗೆ ಟೋಲ್ ಪ್ಲಾಜಾಗಳನ್ನು ನಿರ್ಮಾಣಮಾಡಿ ಸುಂಕವಸೂಲಿ ಮಾಡುತ್ತಿದ್ದಾರೆ. ಆದುದ್ದರಿಂದ ಈ ಕೂಡಲೇ ಎಲ್ಲಾ ಟೋಲ್‌ಗಳ ವ್ಯಾಪ್ತಿಯಲ್ಲಿ ಆರು ಪಥಗಳ ರಸ್ತೆಯನ್ನು ಕಡ್ಡಾಯವಾಗಿ ನಿರ್ಮಿಸಿದನಂತರ ಸುಂಕ ವಸೂಲಾತಿಯನ್ನು ಮಾಡಬೇಕೆಂದು ಒತ್ತಾಯಿಸಿದರು.
 ಸ್ಥಳೀಯ ವಾಹನ ಸವಾರರಿಗೆ ಫಾಸ್ಟಾಗ್ ನಿಂದ ವಿನಾಯತಿ ಕೊಡಬೇಕು  ಸರ್ವಿಸ್ ರಸ್ತೆ ಮಾಡಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ. ಮನವಿಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನದಲ್ಲಿ ರಾಜ್ಯದ ಎಲ್ಲಾ ಟೋಲ್ ಪ್ಲಾಜಾ ಮುಂದೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ತಿಳಿಸಿದರು.



     ಸಂಘಟನೆಯ ನಗರ ಜಿಲ್ಲಾಧ್ಯಕ್ಷ ಜೆ. ಶ್ರೀನಿವಾಸ್ ಮಾತನಾಡಿ ಸಾರ್ವಜನಿಕರಿಂದ ದುಪ್ಪಟ್ಟು ಸುಂಕ ವಸೂಲಿ ಮಾಡುತ್ತಿದ್ದಾರೆ, ಸುಪ್ರೀಂಕೋರ್ಟ್ ಆದೇಶದಂತೆ ಮೂರು ನಿಮಿಷಗಳ ಕಾಲ ವಾಹನ ನಿಂತರೆ ವಾಹನ ಸವಾರರು  ಸುಂಕ ಕಟ್ಟುವ ಹಾಗಿಲ್ಲ, ನಾಮಫಲಕಗಳಲ್ಲಿ ಸರಿಯಾದ ಮಾಹಿತಿ ಇರುವುದಿಲ್ಲ, ಕಚೇರಿಗಳಲ್ಲಿ ಸರಿಯಾಗಿ ಕನ್ನಡ ಭಾಷೆಯನ್ನು ಮಾತನಾಡುವರು ಕೂಡ ಇರುವುದಿಲ್ಲ ಎಂದು ದೂರಿದರು.

         ಈ ಸಂದರ್ಭದಲ್ಲಿ  ರಾಜ್ಯ  ಉಪಾಧ್ಯಕ್ಷರು ಉದಯ ಶೆಟ್ಟಿ, ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರಾದ ಜೆ ಶ್ರೀನಿವಾಸ್  ರಾಜ್ಯ ಮಹಾ ಪ್ರಧಾನ ಸಂಚಾಲಕ ಅಂತ ಸೇ ಬು  ರಾಧಾಕೃಷ್ಣ, ಟಿ ಪ್ರಕಾಶ್ ಗೌಡ ಜಿಲ್ಲಾ ಪದಾಧಿಕಾರಿಗಳ ದ ರಾಧಾಕೃಷ್ಣ (ವೆಂಕಿ), ಮಾದೇಶ್ ಗೌಡ, ನೀಲಕಂಠಗೌಡ (ನಾರಾಯಣ),  ರಾಜೇಶ್, ಅನಿಲ್ ಶೆಟ್ಟಿ, ಕ್ಷೇತ್ರ ಅಧ್ಯಕ್ಷರುಗಳಾದ ಚೇತನ್ ಗೌಡ,  ಗಂಗಾಧರ್, ಎಂ. ಜಗದೀಶ್, ವಿಜಯಕುಮಾರ್, ಪೂರ್ಣೇಶ್ ಗೌಡ, ಮಹಿಳಾ ಘಟಕದ ರೇಖಾ ನವೀನ್, ಶಾರದಾ ಸಿಂಗ್  ಹಾಗೂ ರಾಜ್ಯ ಪದಾಧಿಕಾರಿಗಳು ಘಟಕದ ಪದಾಧಿಕಾರಿಗಳು ಜಿಲ್ಲಾ ಪದಾಧಿಕಾರಿಗಳು ಸರ್ವ ಸದಸ್ಯರು  ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ