ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ

ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ 


         ವಿಜಯನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಎಚ್. ರವೀಂದ್ರ ಅವರು ದೀಪಾಂಜಲಿ ನಗರ ವಾರ್ಡ್ ನಲ್ಲಿ ಬೃಹತ್ ರ್ಯಾಲಿಯೊಂದಿಗೆ ಮತಯಾಚಿಸಿದರು ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಗೋವಿಂದರಾಜನಗರ ಅಭ್ಯರ್ಥಿಯಾದ ವಿ. ಸೋಮಣ್ಣ ಅವರು, ಮಾಜಿ ಕಾರ್ಪೊರೇಟರ್ ಆನಂದ್, ಬ್ಯಾಂಕ್ ಚಂದ್ರಪ್ಪ, ರಾಮಾಂಜಿನಿ ಅವರು ಹಾಗೂ ನೂರಾರು ಕಾರ್ಯಕರ್ತರು  ಸಾಥ್ ನೀಡಿದರು.
      ಭಾರತ್ ಮಾತಾಕಿ ಜೈ ಎಂಬ ಕಂಠ ಘೋಷದೊಂದಿಗೆ ರ್ಯಾಲಿ ಪ್ರಾರಂಭವಾಯಿತು. ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಹಾಗೂ ಗೋವಿಂದರಾಜನಗರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣನವರು  ರಾಜ್ಯ ಸರಕಾರ ಇಲ್ಲಿಯವರೆಗೂ ಏನು ಮಾಡಿದ್ದಾರೆ ಎಂಬುದನ್ನು   ಬುದ್ಧಿವಂತ ಮತದಾರರು  ನೋಡಿದ್ದಾರೆ, ಆದ್ದರಿಂದ ಈ ಬಾರಿ ಜನತೆ ರಾಜ್ಯ ಸರ್ಕಾರಕ್ಕೆ ತಕ್ಕ ಪಾಠ ಕಲಿಸಿ  ಮೇ 12ಕೆ  ಬಿಜೆಪಿಗೆ ಮತ ಹಾಕಿ ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಿ ಅಧಿಕಾರಕ್ಕೆತರಲಿದ್ದಾರೆ ಎಂದು ಹೇಳಿದರು.
          ನಂತರ ಮಾತನಾಡಿದ ಎಚ್. ರವೀಂದ್ರ ಅವರು ವಿಜಯ ನಗರದ ಜನತೆ ಬದಲಾವಣೆ ಬಯಸಿದ್ದಾರೆ. ಆದ್ದರಿಂದ ಈ ಬಾರಿ ನನ್ನನ್ನು ಬಹುಮತದಿಂದ ಗೆಲ್ಲಿಸುತ್ತಾರೆ ಎಂಬ ಪೂರ್ಣ ವಿಶ್ವಾಸ ನನಗಿದೆ. ನಾನು ಗೆದ್ದರೆ ವಿಜಯನಗರದ ಜನತೆ ಗೆದ್ದ ಹಾಗೆ ಈ ಬಾರಿ ರಾಜ್ಯದಲ್ಲಿ ನಮ್ಮ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಹೇಳಿದರು.

Comments

Popular posts from this blog

PMBJK ಹೊಸ ದೂರ ನೀತಿಗೆ ಮಾಲೀಕರ ತೀವ್ರ ಆಕ್ಷೇಪ – ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

RACE FOR 7: BANGALORE WALKS FOR RARE DISEASES