ಹಿಂದೂ ಮಹಾಸಭಾ ಸಮಾವೇಶ

 ಹಿಂದೂ ಮಹಾಸಭಾ ಸಮಾವೇಶ

ಸ್ವಾಮಿ ಚಕ್ರಪಾಣಿ ಮಹಾರಾಜರಿಗೆ

ಅಭಿನಂದನಾ ಸಮಾರಂಭ


            ಅಖಿಲ ಭಾರತ ಹಿಂದೂ ಮಹಾಸಭಾ ವತಿಯಿಂದ ಇದೇ ಮಾರ್ಚ್ 15 ರಂದು ಬೆಂಗಳೂರಿನ ರಾಜಾಜಿನಗರದ ರಾಮಮಂದಿರ ಆಟದ ಮೈದಾನದಲ್ಲಿ ಹಿಂದೂ ಮಹಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಾಧ್ಯಕ್ಷ ಎಲ್.ಕೆ.ಸುವರ್ಣ ತಿಳಿಸಿದ್ದಾರೆ. 
     
     ಬೆಂಗಳೂರಿನಲ್ಲಿಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಸಮಾವೇಶದಲ್ಲಿ ಹಿಂದುತ್ವವಾದಿಯಾಗಿರುವ ಸ್ವಾಮಿ ಚಕ್ರಪಾಣಿ ಮಹಾರಾಜ್ ಮುಂಬೈನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೊಂದಿರುವ ಸ್ಥಳವನ್ನು ನ್ಯಾಯಾಲಯದ ಮೂಲಕ ಪಡೆದು ಆ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿ ದಾವುದ್ ಅವರ ಅಹಂಗೆ ತಕ್ಕ ಉತ್ತರ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದಿಸಲಾಗುವುದು ಎಂದು ಹೇಳಿದರು.

     ಅಖಿಲ ಭಾರತ ಹಿಂದೂ ಮಹಾಸಭಾ ರಾಷ್ಟ್ರಧರ್ಮವನ್ನು ಕಾಪಾಡಲು ಹಾಗೂ ಹಿಂದೂ ಧರ್ಮದ ಒಗ್ಗಟ್ಟಿಗಾಗಿ ಶ್ರಮಿಸುತ್ತಿದೆ. ಯಾವುದೇ ಪ್ರತಿಫಲಾಕ್ಷಿಯಿಲ್ಲದೆ ಸಾವಿರಾರು ಕಾರ್ಯಕರ್ತರು ಪ್ರಾಮಾಣಿಕವಾಗಿ ಶಿಸ್ತಿನಿಂದ ಸಂಘಟನೆ ಮಾಡುತ್ತಿದ್ದರೂ ಕೆಲ ಅಪ್ರಾಮಾಣಿಕರು ಅಪ್ರಬುದ್ಧ ನಡವಳಿಕೆಯಿಂದ ದ್ರೋಹ ಬಗೆಯುತ್ತಿರುವುದು ಕಂಡುಬಂದಿದೆ. ಇದು ಸರಿಯಲ್ಲ, ಬೆಂಗಳೂರು ನಗರ ಅಧ್ಯಕ್ಷರಾಗಿದ್ದ ಅರುಣ್ ಪರಮೇಶ್ ರಾಜ್ ಶಿಸ್ತು ಉಲ್ಲಂಘಿಸಿ ಹಿರಿಯ ಮುಖಂಡರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿ ಕಾರ್ಯಕರ್ತರ ಆತ್ಮಸ್ಥೈರ್ಯವನ್ನು ಕುಗ್ಗಿಸುವಂತೆ ವರ್ತಿಸಿದ್ದಾರೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಧರ್ಮೇಂದ್ರ ಅವರನ್ನು ಪಕ್ಷವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅಮಾನತ್ತು ಮಾಡಲಾಗಿದೆ ಎಂದು  ಹೇಳಿದರು.

ವಿಡಿಯೊ ನೋಡಲು ಈ ಕೆಳಗೆ ಕ್ಲಿಕ್ ಮಾಡಿ 

click to watch this video 




     ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಹಿಂದೂ ಧರ್ಮದ ಬಗ್ಗೆ ಪ್ರಾಮಾಣಿಕವಾಗಿ ಹೋರಾಟ ಮಾಡಿದ ಮಹನೀಯರಿಗೆ ಹಿಂದುರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅದೇ ರೀತಿ ರಾಮಮಂದಿರ ನಿರ್ಮಾಣಕ್ಕೆ ಕರಸೇವೆ ಮಾಡಿದ ಕರಸೇವಕರನ್ನು ಅಭಿನಂದಿಸಲಾಗುವುದು ಎಂದರು.




Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ