ಕರ್ನಾಟಕ ಬಹುಜನ ಫೆಡರೇಷನ್ ನ ಪದಾಧಿಕಾರಿಗಳ ಪ್ರಾಥಮಿಕ ಸಭೆ

ಕರ್ನಾಟಕ ಬಹುಜನ ಫೆಡರೇಷನ್ ನ ಪದಾಧಿಕಾರಿಗಳ ಪ್ರಾಥಮಿಕ ಸಭೆ



       ಕರ್ನಾಟಕ ಬಹುಜನ ಫೆಡರೇಷನ್ ನ ಪದಾಧಿಕಾರಿಗಳ ಪ್ರಾಥಮಿಕ ಸಭೆ ಬೆಂಗಳೂರಿನಲ್ಲಿಂದು ನಡೆಯಿತು. ಸಭೆಯಲ್ಲಿ ಅಧ್ಯಕ್ಷರಾದ ಜಿ.ಹೆಚ್.ಶಂಕರ್, ಉಪಾಧ್ಯಕ್ಷರಾದ ಆದರ್ಶ ಸಂಪತ್, ಸದಸ್ಯರಾದ ಎಸ್.ಆರ್.ವೇಣು, ಎಸ್.ಕೆ. ಶ್ರೀನಿವಾಸ್, ಹೇಮಂತ್ ಕುಮಾರ್, ಡಿ.ಸಿ ಹರೀಶ್ ಮತ್ತಿತರರು ಹಾಜರಿದ್ದರು. ಸಭೆಯಲ್ಲಿ ಪ್ರಮುಖವಾಗಿ ಪುಲಕೇಶಿ ನಗರ ವ್ಯಾಪ್ತಿಯಲ್ಲಿ ಇರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಪೌರಕಾರ್ಮಿಕರು ಹಾಗೂ ಅಲ್ಪಸಂಖ್ಯಾತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದರ ನಿವಾರಣೆಗಾಗಿ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಹಾಗೂ ಸರ್ಕಾರದ ಮೇಲೆ ಒತ್ತಡ ತರುವ ಕುರಿತು ಚರ್ಚೆ ನಡೆಸಲಾಯಿತು. 

ವಿಡಿಯೊ ನೋಡಲು ಕೆಳಗೆ ಕ್ಲಿಕ್ ಮಾಡಿ 

click to watch this video 

    ವಿಶೇಷವಾಗಿ ಪುಲಕೇಶಿ ನಗರಕ್ಕೆ ಅಗತ್ಯವಾಗಿ ಬೇಕಾಗಿರುವ ಮೂಲಸೌಕರ್ಯ ಒದಗಿಸುವ ಕುರಿತು ಚರ್ಚೆ ನಡೆಸಲಾಯಿತು. ಈ ಒಕ್ಕೂಟಕ್ಕೆ ಇನ್ನಷ್ಟು ಶಕ್ತಿ ತುಂಬುವ ಕುರಿತು ಪ್ರಮುಖವಾಗಿ ಚರ್ಚೆ ನಡೆಸಲಾಯಿತು.

Comments

Popular posts from this blog

PMBJK ಹೊಸ ದೂರ ನೀತಿಗೆ ಮಾಲೀಕರ ತೀವ್ರ ಆಕ್ಷೇಪ – ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

RACE FOR 7: BANGALORE WALKS FOR RARE DISEASES