ಅಲೈಯನ್ಸ್ ವಿವಿ ಪ್ರಕರಣ ಸೂಕ್ತ ತನಿಖೆಯಾಗಲಿ ಮಧುಕರ್ ಜಿ ಅಂಗೂರ್

 ಅಲೈಯನ್ಸ್ ವಿವಿ ನಕಲಿ ಸಹಿ ಬಳಸಿ ಬಹುಕೋಟಿ ಹಗರಣ ಪ್ರಕರಣ ಸೂಕ್ತ ತನಿಖೆಯಾಗಲಿ: ಸಂಸ್ಥಾಪಕ ಮಧುಕರ್ ಜಿ. ಆಂಗೂರ್

 

        ಪ್ರಪಂಚದಲ್ಲಿ ಕರೋನ ಆರ್ಭಟ ಇಳಿಮುಖಗೊಳ್ಳುತ್ತಿದ್ದಂತೆ, ಜನರನ್ನು ನಾನಾ ಬಗೆಯ ಹಗರಣಗಳ ಸುದ್ಧಿಗಳು ಆಕರ್ಷಿಸುತ್ತಿವೆ. ಅಂತಹ ಸುದ್ಧಿಗಳ ನಡುವೆ ಜನರನ್ನು ಹುಬ್ಬೆರಿಸುವಂತೆ ಮಾಡಿರುವ ಸುದ್ಧಿಗಳಲ್ಲಿ ಬೆಂಗಳೂರಿನಲ್ಲಿನ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಕೋಟ್ಯಾಂತರ ರೂಪಾಯಿ ವಂಚನೆಯ ಹಗರಣವು ಪ್ರಮುಖ ಸುದ್ಧಿ ಆಗಿ ಗಮನ ಸೆಳೆದಿದೆ.

       ಬೆಂಗಳೂರಿನ “ಅಲೈಯನ್ಸ್ ಯೂನಿವರ್ಸಿಟಿ”ಯಲ್ಲಿ ನಡೆದಿದೆ ಎನ್ನಲಾಗಿರುವ ಬಹುಕೋಟಿ ಹಗರಣವು ರಾಜ್ಯ ಮಟ್ಟದಲ್ಲೇ, ಅಲ್ಲದೇ ರಾಷ್ಟ್ರಮಟ್ಟದಲ್ಲೇ ಸದ್ದು ಮಾಡುತ್ತಿದೆ. ಈ ಸಂಬಂಧವಾಗಿ ನಮ್ಮ ವಾಹಿನಿಯ ಸಂದರ್ಶನದ ವೇಳೆ ನಮ್ಮ ಸುದ್ಧಿಗಾರರೊಂದಿಗೆ ವಿಶ್ವವಿದ್ಯಾಲಯದ ಸಂಸ್ಥಾಪಕರು ಹಾಗೂ ಆಜೀವ ಕುಲಪತಿಗಳಾಗಿ ಸೇವೆ ಸಲ್ಲಿಸುತ್ತಿರುವ ಮಧುಕರ್ ಜಿ. ಆಂಗೂರ್ ಮಾತನಾಡಿ ನಾನು ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯನಾಗಿದ್ದು, ಅಲ್ಲಿ ದುಡಿದ ಹಣವನ್ನು ಸದುಪಯೋಗಪಡಿಸುವ ಉದ್ದೇಶದಿಂದ, ಇಲ್ಲಿ ನಮ್ಮ ಭಾರತದಲ್ಲಿ ವಿದ್ಯಾ ರಂಗದ ಮುಖಾಂತರ ಸೇವೆಯನ್ನು ಮಾಡುವ ಕನಸಿನ ಫಲವಾಗಿ, ಇದೇ ನಮ್ಮ ಬೆಂಗಳೂರಿನಲ್ಲಿ “ಅಲೈಯನ್ಸ್ ಯೂನಿವರ್ಸಿಟಿ”ಯ ಜನನವಾಯಿತು.

ವಿಡಿಯೋ ನೋಡಲು ಈ ಕೆಳಗೆ ಕ್ಲಿಕ್ ಮಾಡಿ 

Click here to watch this video 

      ಅನಿವಾಸಿ ಭಾರತೀಯನಾಗಿರುವ ನನಗೆ ಈ ಕೆಲಸದಲ್ಲಿ ಸಹಾಯ ಮಾಡುವ ನೆಪದಲ್ಲಿ ಮುಂದೆ ಬಂದ ಹತ್ತು ಜನರು, ಸುಲಭವಗಿ ಹಣ ಮಾಡುವ  ಉದ್ದೇಶದಿಂದ ನನ್ನ ಗಮನಕ್ಕೆ ಬಾರದಂತೆ ನನ್ನ  ಡಿಜಿಟಲ್ ಸಹಿ ನಕಲನ್ನು ಬಳಸಿಕೊಳ್ಳುವ ಮೂಲಕ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ನಿರತ ವಿದ್ಯಾರ್ಥಿಗಳಿಂದ ಅಕ್ರಮವಾಗಿ ಕಾಲೇಜು ಶುಲ್ಕ, ಟ್ಯೂಷನ್ ಶುಲ್ಕ ಹಾಗೂ ಹಾಸ್ಟೆಲ್ ಶುಲ್ಕಗಳ ಹೆಸರಿನಲ್ಲಿ ಕೋಟ್ಯಾಂತರ ಹಣವನ್ನು ವಸೂಲಿ ಮಾಡಿಕೊಂಡಿರುವುದರ ಸುಳಿವು ಸಿಕ್ಕ ಮೇರೆಗೆ ತತ್ಸಂಬಂಧವಾಗಿ ಆನೇಕಲ್ ಪೋಲಿಸ್ ಠಾಣೆಯಲ್ಲಿ ಕಳೆದ ಅಕ್ಟೋಬರ್ ತಿಂಗಳಿನಲ್ಲೇ ದೂರನ್ನು ನೀಡಿರುತ್ತೇನೆ ದೂರನ್ನು ದಾಖಲಿಸಿಕೊಳ್ಳಲಾಗಿದ್ದರೂ, ಇದುವರೆವಿಗೂ ಈ ಬಹುಕೋಟಿ ರೂಪಾಯಿಗಳ ಹಗರಣವನ್ನು ಗಂಭೀರವಾಗಿ ಪರಿಗಣಿಸದ ಪೋಲಿಸ್ ಇಲಾಖೆಯು ತನ್ನ ತನಿಖೆಯ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಎಂಬುದು ಬೆಸರದ ಸಂಗತಿ. ಕರ್ನಾಟಕ ರಾಜ್ಯ ಸರ್ಕಾರವು ಈ ಕೂಡಲೇ ಗಮನಹರಿಸಿ ತನಿಖಾ ತಂಡ  ನೇಮಿಸಿ  ತನಿಖಾ ತಂಡದಿಂದ ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರಿಗೆ ತಕ್ಕ ಸಿಕ್ಷೆ ನೀಡಿ ನ್ಯಾಯ ಒದಗಿಸಲು ಆಗ್ರಹಿಸಿದರು.

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ