ಡಿ.ಕೆ. ಶಿವಕುಮಾರ್ ಬಂಡೆಯೊಳಗಿನ ವಜ್ರ “ಡೈನಾಮಿಕ್ ಹೀರೋ” :: ಸಮೀವುಲ್ಲಾ

ಡಿ.ಕೆ. ಶಿವಕುಮಾರ್ ಬಂಡೆಯೊಳಗಿನ ವಜ್ರ “ಡೈನಾಮಿಕ್ ಹೀರೋ” :: ಸಮೀವುಲ್ಲಾ ಗುರುಪ್ಪನಪಾಳ್ಯ ಬ್ಲಾಕ್ ಕಾಂಗ್ರೆಸ್ಸಿನಿಂದ ಡಿ.ಕೆ. ಶಿವಕುಮಾರ್ ಪ್ರತಿಜ್ಞಾ ವಿಧಿ ಸಮಾರಂಭ ಬೆಂಗಳೂರು; ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಇಂದು ಪ್ರತಿಜ್ಞಾವಿಧಿ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ಬಂಡೆಯೊಳಗಿನ ವಜ್ರರೂಪದ ಡೈನಾಮಿಕ್ ಹೀರೋ ಎಂದು ಬಿಟಿಎಂ ಲೇಔಟ್‍ನ ಗುರುಪ್ಪನಪಾಳ್ಯದ ಕಾಂಗ್ರೆಸ್‍ನ ಹಿರಿಯ ಮುಖಂಡ ಹಾಗೂ ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಮೀವುಲ್ಲಾ ಬಣ್ಣಿಸಿದ್ದಾರೆ. ಗುರುಪ್ಪನ ಪಾಳ್ಯದ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನೂತನ ಅಧ್ಯಕ್ಷರ ವೀಡಿಯೋ ಕಾನ್ಪರೆನ್ಸ್ ಮೂಲಕ ಪ್ರತಿಜ್ಞಾ ವಿಧಿ ಸಮಾರಂಭವನ್ನು ವೀಕ್ಷಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ತಮ್ಮದೇ ಆದ ಸುದೀರ್ಘ ಕೊಡುಗೆ ನೀಡಿದ್ದಾರೆ. ಅವರು ಕೇವಲ ಕನಕಪುರದ ಬಂಡೆಯಲ್ಲ ಬಂಡೆಯೊಳಗಿನ ವಜ್ರ ಅಂದರೆ ಡೈನಾಮಿಕ್ ವ್ಯಕ್ತಿತ್ವ ಹೊಂದಿರುವ ಅಪರೂಪದ ರಾಜಕಾರಣಿ ಮುಂಬರುವ ದಿನಗಳಲ್ಲಿ ಇವರ ನೇತೃತ್ವದಲ್ಲಿ ಕಾಂಗ್ರೇಸ್ ಪಕ್ಷ ಅಭೂತ ಪೂರ್ವ ಗೆಲುವು ಸಾಧಿಸಿ ಮುಖ್ಯಮಂತ್ರಿಯಾಗಬೇಕು ಎಂದು ಶುಭ ಹಾರೈಸಿದರು. ವಿಡಿಯೊ ನೋಡಲು ಈ ಕೆಳಗೆ ಕ್ಲಿಕ್ ಮಾಡಿ ು click here to watch this vide...