ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ

ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ - ಎನ್‌ಎಟಿಎಸ್ ಜೂನ್ ೨೦೨೩: ಇನ್ಫೋಸಿಸ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಎನ್ ಆರ್ ನಾರಾಯಣ ಮೂರ್ತಿ ಮತ್ತು ಪ್ರಸಿದ್ಧ ಲೇಖಕಿ ಮತ್ತು ಜನಪರವಾದಿ ಸುಧಾ ಮೂರ್ತಿ ಅವರ ಅಸಾಧಾರಣ ಕೊಡುಗೆಗಳಿಗಾಗಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇತ್ತೀಚೆಗೆ ಅಮೇರಿಕಾದ ನ್ಯೂಜೆರ್ಸಿಯಲ್ಲಿ ನಡೆದ ೭ ನೇ ತೆಲುಗು ಸಂಭ್ರಮಾಚರಣೆಯ ಸಂದರ್ಭದಲ್ಲಿ ಎನ್‌ಎಟಿಎಸ್ (ಉತ್ತರ ಅಮೇರಿಕಾ ತೆಲುಗು ಸೊಸೈಟಿ) ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಿದೆ. ಇನ್ಫೋಸಿಸ್ ದಂಪತಿಗಳು ಈ ಗೌರವಕ್ಕಾಗಿ ಸಂತೋಷ ಮತ್ತು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ, ಈ ದಂಪತಿಗಳಿಗೆ ಪ್ರಶಸ್ತಿ ನೀಡುವುದು ನಮ್ಮ ಸೌಭಾಗ್ಯವೆಂದು ಎನ್‌ಎಟಿಎಸ್ ಹೇಳಿದೆ. ಎನ್‌ಎಟಿಎಸ್ ೭ ನೇ ತೆಲುಗು ಸಂಭ್ರಮದ ಸಂಚಾಲಕ ಶ್ರೀಧರ್ ಅಪ್ಪಾಸಾನಿ, "ಇಂತಹ ಮಹಿಮಾತೀತ ವ್ಯಕ್ತಿಗಳು ಪ್ರಶಸ್ತಿ ಸ್ವೀಕರಿಸುವ ಮೊದಲು ಸಂಸ್ಥೆಯ ಬಗ್ಗೆ ತಮ್ಮದೇ ಆದ ಮೌಲ್ಯಮಾಪನ ಮಾಡುತ್ತಾರೆ. ಭಾರತದ ಈ ಅತ್ಯಂತ ಗೌರವಾನ್ವಿತ ದಂಪತಿಗಳನ್ನು ಗೌರವಿಸುವ ಅವಕಾಶ ನಾವು ಪಡೆದಿರುವುದು ನಿಜಕ್ಕೂ ನಮ್ಮ ಅದೃಷ್ಟ ಮತ್ತು ತೆಲುಗು ಸಮಾವೇಶಗಳ ಇತಿಹಾಸದಲ್ಲಿ ಈ ರೀತಿಯ ಕಾರ್ಯಕ್ರಮಗಳು ಶ್ರೇಷ್ಠತೆಯನ್ನು ಎತ್ತಿ ತೋರುತ್ತದೆ” ಎಂದರು. ತನ್ನ ೭ ನೇ ತೆಲ...