ನವೆಂಬರ್ 22ರಂದು ಜಮ್ಮು, ಕಾಶ್ಮೀರದ ಪೆಹಲ್ಗಾಮ್ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ
ಬೆಂಗಳೂರು : ಜಿಬಿಎ ನೌಕರರ ಭವನದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜಮ್ಮು, ಕಾಶ್ಮೀರದ ಪೆಹಲ್ಲಾಮ್ ನಲ್ಲಿ ನವೆಂಬರ್ 22ರಂದು ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಮತ್ತು ಪಹಲ್ಗಾಮ್ ಹತ್ಯೆಯಾದ ಭಾರತಾಂಬೆ ಮಕ್ಕಳಿಗೆ ನುಡಿ ನಮನ ಕಾರ್ಯಕ್ರಮ ಹಾಗೂ ಕರುನಾಡು ಸಾಧಕರು ಪ್ರಶಸ್ತಿ ಪ್ರಧಾನ ಸಮಾರಂಭದ ಕುರಿತು ಮಾಧ್ಯಮಗೋಷ್ಟಿ ಮತ್ತು ಪೋಸ್ಟರ್ ಬಿಡುಗಡೆ ಸಮಾರಂಭದ ಕುರಿತು ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ಮಾಧ್ಯಮಗೋಷ್ಟಿ ಏರ್ಪಡಿಸಿದ್ದರು. ಇದೇ ಸಂದರ್ಭದಲ್ಲಿ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ಮಾತನಾಡಿ ಕನ್ನಡ ಭಾಷೆಗೆ 2500ಸಾವಿರ ವರ್ಷಗಳ ಇತಿಹಾಸವಿದೆ. ನಮ್ಮ ಭಾಷೆ ಲಿಪಿಗಳ ರಾಣಿ ಎಂಬ ಬಿರುದಾಂಕಿತವಾಗಿದೆ. ಕನ್ನಡ ಭಾಷೆ ಉಳಿಸಿ, ಬೆಳಸಬೇಕು ವಿಶ್ವಭಾಷೆಯಾಗಿ ಮಾಡಬೇಕು ಉದ್ದೇಶದಿಂದ ಪ್ರಥಮ ಬಾರಿಗೆ 2022ರಲ್ಲಿ ಕಾಶಿಯಲ್ಲಿ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ನಂತರ 2023ರಲ್ಲಿ ನೇಪಾಳ ಪಶುಪತಿ ದೇವಾಲಯ ಸನ್ನಿಧಾನದಲ್ಲಿ ಅಂತರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಮತ್ತು 2024ರಲ್ಲಿ ಹರಿದ್ವಾರದಲ್ಲಿ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಇದೀಗ 2025ರ ನವೆಂಬರ್ 22ಸಂಜೆ 4ಗಂಟೆಗೆ ಜಮ್ಮು, ಕಾಶ್ಮೀರದ ಪೆಹಲ್ಲಾಮ್ ನಲ್ಲಿ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಮತ್ತು ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗ...