Posts

Showing posts from January, 2026

ಅರುವೇಲು ನಿಯೋಗಿ ಬ್ರಾಹ್ಮಣ ಸಂಘದ 16ನೇ ವರ್ಷದ ಸರ್ವ ಸದಸ್ಯರ ಮಹಾಸಭೆ

Image
ಬೆಂಗಳೂರು: ನಗರದ ಬುಲ್ ಟೆಂಪಲ್ ರಸ್ತೆಯಲ್ಲಿರುವ ಗಾಂಜಾಂ ಮಂಟಪದಲ್ಲಿ ಅರುವೇಲು ನಿಯೋಗಿ ಬ್ರಾಹ್ಮಣ ಸಂಘದ 16ನೇ ವರ್ಷದ ಸರ್ವ ಸದಸ್ಯರ ಮಹಾಸಭೆಯನ್ನು ಆಯೋಜಿಸಲಾಗಿತ್ತು.  ಇದೇ ಸಂದರ್ಭದಲ್ಲಿ ಸಂಘದ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಯಿತು. ಸಭೆಯನ್ನು ಉದ್ದೇಶಿಸಿ ಸಂಘದ ಅಧ್ಯಕ್ಷರಾದ ವೈ.ಆರ್. ಜನಾರ್ಧನ್ ರಾವ್ ಅವರು ಮಾತನಾಡಿ, ಸಂಘವು 16 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಈ ಅವಧಿಯಲ್ಲಿ ಹಲವು ಜನೋಪಯೋಗಿ ಹಾಗೂ ಸಮಾಜಮುಖಿ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ. ಈ ವರ್ಷದ ಪ್ರಮುಖ ಯೋಜನೆಯಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದ್ದು, ಸರ್ವ ಸದಸ್ಯರು ಈ ಯೋಜನೆಗೆ ಸಹಕಾರ ನೀಡಬೇಕೆಂದು ವಿನಂತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್ ನರಸರಾಮರಾವ್ ಅವರು ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯ ತಿಳುವಳಿಕೆ ಪತ್ರವನ್ನು ಮಂಡಿಸಿ, ಸಭೆಯ ನಡವಳಿಕೆಗಳನ್ನು ಓದಿ ದಾಖಲಿಸಿದರು. ಜೊತೆಗೆ ಸಂಘದ 2024–25ನೇ ಸಾಲಿನ ವಾರ್ಷಿಕ ವರದಿ, ಹೊಸ ನಿರ್ಣಯಗಳು ಹಾಗೂ ಯೋಜನೆಗಳು ಮತ್ತು 2025–26ನೇ ಸಾಲಿನ ಅಂದಾಜು ಆಯವ್ಯಯವನ್ನು ಸರ್ವ ಸದಸ್ಯರ ಮುಂದೆ ಮಂಡಿಸಿದರು. ಸಭೆಯಲ್ಲಿ ನಿರ್ಣಯಗಳು ಹಾಗೂ ಲೆಕ್ಕ ತಪಾಸಣಾ ವರದಿಯನ್ನು ಪರಿಶೀಲಿಸಿದ ಬಳಿಕ ಸರ್ವ ಸದಸ್ಯರು ಅವುಗಳನ್ನು ಏಕಮತದಿಂದ ಅಂಗೀಕರಿಸಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಸಂಘದ ಸದಸ್ಯರಿಗೆ...