ಆರೋಗ್ಯ ಕೇಂದ್ರ ಉದ್ಘಾಟನೆ

ಸೂಪರ್ ಸ್ಪೆಷಲಿಟಿ ಹೆರಿಗೆ ಆಸ್ಪತ್ರೆ ಮತ್ತು ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ ಗೋವಿಂದರಾಜನಗರ ವಾರ್ಡ್-104ರಲ್ಲಿ ಸೂಪರ್ ಸ್ಪೆಷಲಿಟಿ ಹೆರಿಗೆ ಆಸ್ಪತ್ರೆ ಮತ್ತು ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆಯನ್ಮು ವಸತಿ,ತೋಟಗಾರಿಕೆ ಮತ್ತು ರೇಷ್ಮೆ ಖಾತೆ ಸಚಿವರಾದ ವಿ.ಸೋಮಣ್ಣರವರು ,ವಿಧಾನಪರಿಷತ್ ಸದಸ್ಯರಾದ ಅ.ದೇವೇಗೌಡ ಮತ್ತು ಗೋವಿಂದರಾಜನಗರ ವಾರ್ಡ್ ಬಿ.ಬಿ.ಎಂ.ಪಿ.ಸದಸ್ಯರಾದ ಕೆ.ಉಮೇಶ್ ಶೆಟ್ಟಿರವರು ಪಾಲಿಕೆ ಸದಸ್ಯರಾದ ಮೋಹನ್ ಕುಮಾರ್ ,ದಾಸೇಗೌಡರು ಉದ್ಘಾಟನೆ ಮಾಡಿದರು. ಸಚಿವರಾದ ವಿ.ಸೋಮಣ್ಣರವರು ಮಾತನಾಡಿ ಆರೋಗ್ಯವೆ ಭಾಗ್ಯ ,ಆರೋಗ್ಯ ಚನ್ನಾಗಿದರೆ ಕುಟುಂಬದಲ್ಲಿ ನೆಮ್ಮದ್ದಿ ಇರುತ್ತದೆ . ಇಂದು ವೈದ್ಯಕೀಯ ಚಿಕಿತ್ಯೆ ಪಡೆಯಬೇಕಾದರೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ .ಜನ ಸಾಮಾನ್ಯರಿಗೆ ಇದು ಸಾಧ್ಯವಿಲ್ಲ ಅದ್ದರಿಂದ ಗೋವಿಂದರಾಜನಗರ ವಾರ್ಡ್ನನಲ್ಲಿ ಹೆರಿಗೆ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸಲಾಗಿದೆ ..ಗರ್ಭಿಣಿ ಸ್ತ್ರೀಯರಿಗೆ 10ತಿಂಗಳ ಕಾಲ ತಪಾಸಣೆಗೆ ಮತ್ತು,ಹೆರಿಗೆ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಬಡವರು,ಮಧ್ಯಮ ವರ್ಗದ ಗರ್ಭಿಣಿ ಸ್ತ್ರೀ ಕುಟುಂಬಕ್ಕೆ ವೆಚ್ಚ ಬರಿಸಲು ಸಾಧ್ಯವಿಲ್ಲ ಅದ ಕಾರಣ ಗೋವಿಂದರಾಜ ನಗರ ವಾರ್ಡ್ ನಲ್ಲಿ ಸೂಪರ...