ಆರೋಗ್ಯ ಕೇಂದ್ರ ಉದ್ಘಾಟನೆ


ಸೂಪರ್  ಸ್ಪೆಷಲಿಟಿ ಹೆರಿಗೆ ಆಸ್ಪತ್ರೆ ಮತ್ತು ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ 




      ಗೋವಿಂದರಾಜನಗರ ವಾರ್ಡ್-104ರಲ್ಲಿ ಸೂಪರ್  ಸ್ಪೆಷಲಿಟಿ ಹೆರಿಗೆ ಆಸ್ಪತ್ರೆ ಮತ್ತು ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆಯನ್ಮು ವಸತಿ,ತೋಟಗಾರಿಕೆ ಮತ್ತು ರೇಷ್ಮೆ ಖಾತೆ ಸಚಿವರಾದ ವಿ.ಸೋಮಣ್ಣರವರು ,ವಿಧಾನಪರಿಷತ್ ಸದಸ್ಯರಾದ ಅ.ದೇವೇಗೌಡ ಮತ್ತು ಗೋವಿಂದರಾಜನಗರ ವಾರ್ಡ್ ಬಿ.ಬಿ.ಎಂ.ಪಿ.ಸದಸ್ಯರಾದ ಕೆ.ಉಮೇಶ್ ಶೆಟ್ಟಿರವರು ಪಾಲಿಕೆ ಸದಸ್ಯರಾದ ಮೋಹನ್ ಕುಮಾರ್ ,ದಾಸೇಗೌಡರು ಉದ್ಘಾಟನೆ ಮಾಡಿದರು.
         ಸಚಿವರಾದ ವಿ.ಸೋಮಣ್ಣರವರು ಮಾತನಾಡಿ ಆರೋಗ್ಯವೆ ಭಾಗ್ಯ ,ಆರೋಗ್ಯ ಚನ್ನಾಗಿದರೆ ಕುಟುಂಬದಲ್ಲಿ ನೆಮ್ಮದ್ದಿ ಇರುತ್ತದೆ . ಇಂದು ವೈದ್ಯಕೀಯ ಚಿಕಿತ್ಯೆ ಪಡೆಯಬೇಕಾದರೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ .ಜನ ಸಾಮಾನ್ಯರಿಗೆ ಇದು ಸಾಧ್ಯವಿಲ್ಲ ಅದ್ದರಿಂದ ಗೋವಿಂದರಾಜನಗರ ವಾರ್ಡ್ನನಲ್ಲಿ  ಹೆರಿಗೆ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸಲಾಗಿದೆ ..ಗರ್ಭಿಣಿ ಸ್ತ್ರೀಯರಿಗೆ  10ತಿಂಗಳ ಕಾಲ ತಪಾಸಣೆಗೆ ಮತ್ತು,ಹೆರಿಗೆ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಬಡವರು,ಮಧ್ಯಮ ವರ್ಗದ ಗರ್ಭಿಣಿ ಸ್ತ್ರೀ ಕುಟುಂಬಕ್ಕೆ ವೆಚ್ಚ ಬರಿಸಲು ಸಾಧ್ಯವಿಲ್ಲ ಅದ ಕಾರಣ  ಗೋವಿಂದರಾಜ ನಗರ ವಾರ್ಡ್ ನಲ್ಲಿ ಸೂಪರ್ ಸ್ಪೆಷಾಲಿಟಿ ಹೆರಿಗೆ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ ಅತ್ಯಂತ ಕಡಿಮೆ ವೆಚ್ಚದಲ್ಲಿ  ಗರ್ಭಿಣಿ ಸ್ತ್ರೀಯರಿಗೆ ಅಲ್ಟ್ರಾಸೌಂಡ್ ,ಮಗುವಿನ ಬೆಳವಣಿಗೆ , ರಕ್ತ ಪರೀಕ್ಷೆ ನಡೆಸಲು ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರಿಗೆ ತಜ್ಞ ವೈದ್ಯರುಗಳಿಂದ ಜನರಲ್ ಚಕ್ ಅಪ್ ವ್ಯವಸ್ತೆ ಮಾಡಲಾಗಿದೆ ಎಂದು ಹೇಳಿದರು.
                 ಕೆ.ಉಮೇಶ್ ಶೆಟ್ಟಿರವರು ಮಾತನಾಡಿ ಸಚಿವರಾದ ವಿ.ಸೋಮಣ್ಣರವರ ಮಾರ್ಗದರ್ಶನದಲ್ಲಿ ಗೋವಿಂದರಾಜನಗರ ವಾರ್ಡ್ನನಲ್ಲಿ ಮಹಿಳೆಯರು ,ಮಕ್ಕಳ ಆರೈಕೆ ವಿಶೇಷ ಆಸ್ಪತ್ರೆ ಸ್ಥಾಪಿಸಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಸಂದರ್ಭದಲ್ಲಿ 5 ಲಕ್ಷದಿಂದ 8 ಲಕ್ಷದವರೆಗೆ ವೆಚ್ಚವಾಗುತ್ತದೆ.
           ನಮ್ಮ ವಾರ್ಡ್ನನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 2500 ರೂಪಾಯಿ ವೆಚ್ಚದಲ್ಲಿ ವೈದ್ಯಕೀಯ ತಪಾಸಣೆ ,ಐ.ಸಿ.ಯು.ಮತ್ತು ಮಗುವಿನ ಪ್ರಸವ ಸಂದರ್ಭದಲ್ಲಿ ವೆಚ್ಚವಾಗುತ್ತದೆ ,ಬಡವರು ,ಮಧ್ಯಮ ವರ್ಗದ ಕುಟುಂಬಗಳಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ