ಅಲೈಯನ್ಸ್ ವಿವಿ ಪ್ರಕರಣ ಸೂಕ್ತ ತನಿಖೆಯಾಗಲಿ ಮಧುಕರ್ ಜಿ ಅಂಗೂರ್

ಅಲೈಯನ್ಸ್ ವಿವಿ ನಕಲಿ ಸಹಿ ಬಳಸಿ ಬಹುಕೋಟಿ ಹಗರಣ ಪ್ರಕರಣ ಸೂಕ್ತ ತನಿಖೆಯಾಗಲಿ: ಸಂಸ್ಥಾಪಕ ಮಧುಕರ್ ಜಿ. ಆಂಗೂರ್ ಪ್ರಪಂಚದಲ್ಲಿ ಕರೋನ ಆರ್ಭಟ ಇಳಿಮುಖಗೊಳ್ಳುತ್ತಿದ್ದಂತೆ, ಜನರನ್ನು ನಾನಾ ಬಗೆಯ ಹಗರಣಗಳ ಸುದ್ಧಿಗಳು ಆಕರ್ಷಿಸುತ್ತಿವೆ. ಅಂತಹ ಸುದ್ಧಿಗಳ ನಡುವೆ ಜನರನ್ನು ಹುಬ್ಬೆರಿಸುವಂತೆ ಮಾಡಿರುವ ಸುದ್ಧಿಗಳಲ್ಲಿ ಬೆಂಗಳೂರಿನಲ್ಲಿನ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಕೋಟ್ಯಾಂತರ ರೂಪಾಯಿ ವಂಚನೆಯ ಹಗರಣವು ಪ್ರಮುಖ ಸುದ್ಧಿ ಆಗಿ ಗಮನ ಸೆಳೆದಿದೆ. ಬೆಂಗಳೂರಿನ “ಅಲೈಯನ್ಸ್ ಯೂನಿವರ್ಸಿಟಿ”ಯಲ್ಲಿ ನಡೆದಿದೆ ಎನ್ನಲಾಗಿರುವ ಬಹುಕೋಟಿ ಹಗರಣವು ರಾಜ್ಯ ಮಟ್ಟದಲ್ಲೇ, ಅಲ್ಲದೇ ರಾಷ್ಟ್ರಮಟ್ಟದಲ್ಲೇ ಸದ್ದು ಮಾಡುತ್ತಿದೆ. ಈ ಸಂಬಂಧವಾಗಿ ನಮ್ಮ ವಾಹಿನಿಯ ಸಂದರ್ಶನದ ವೇಳೆ ನಮ್ಮ ಸುದ್ಧಿಗಾರರೊಂದಿಗೆ ವಿಶ್ವವಿದ್ಯಾಲಯದ ಸಂಸ್ಥಾಪಕರು ಹಾಗೂ ಆಜೀವ ಕುಲಪತಿಗಳಾಗಿ ಸೇವೆ ಸಲ್ಲಿಸುತ್ತಿರುವ ಮಧುಕರ್ ಜಿ. ಆಂಗೂರ್ ಮಾತನಾಡಿ ನಾನು ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯನಾಗಿದ್ದು, ಅಲ್ಲಿ ದುಡಿದ ಹಣವನ್ನು ಸದುಪಯೋಗಪಡಿಸುವ ಉದ್ದೇಶದಿಂದ, ಇಲ್ಲಿ ನಮ್ಮ ಭಾರತದಲ್ಲಿ ವಿದ್ಯಾ ರಂಗದ ಮುಖಾಂತರ ಸೇವೆಯನ್ನು ಮಾಡುವ ಕನಸಿನ ಫಲವಾಗಿ, ಇದೇ ನಮ್ಮ ಬೆಂಗಳೂರಿನಲ್ಲಿ “ಅಲೈಯನ್ಸ್ ಯೂನಿವರ್ಸಿಟಿ”ಯ ಜನನವಾಯಿತು. ವಿಡಿಯೋ ನೋಡಲು ಈ ಕೆಳಗೆ ಕ್ಲಿಕ್ ಮಾಡಿ Click here t...