"ರಕ್ತ ನೀಡಿ ಮತ್ತು ಜಗತ್ತನ್ನು ಗೆಲ್ಲಿಸಿ" ವಿಶ್ವ ರಕ್ತದಾನ ದಿನಾಚರಣೆ 2021 ಕಾರ್ಯಕ್ರಮ
"ರಕ್ತ ನೀಡಿ ಮತ್ತು ಜಗತ್ತನ್ನು ಗೆಲ್ಲಿಸಿ" ವಿಶ್ವ ರಕ್ತದಾನ ದಿನಾಚರಣೆ 2021 ಕಾರ್ಯಕ್ರಮ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಂಡು ನಿಯಮಿತವಾಗಿ ರಕ್ತದಾನವನ್ನು ಮಾಡೋಣ ಹಾಗೂ ನಮ್ಮ ಬಂಧು ಮಿತ್ರರಿಗೂ ರಕ್ತದಾನ ಮಾಡಲು ಪ್ರೇರೇಪಿಸಿ ರಕ್ತದಾನದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗೋಣ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಬೆಂಗಳೂರಿನ ವಿಜಯನಗರದ ಲಯನ್ಸ್ ರಕ್ತ ನಿಧಿ ಕೇಂದ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಲಯನ್ಸ್ ರಕ್ತ ನಿಧಿ ಹಾಗೂ ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಜಿಲ್ಲೆ 317ಎ ವತಿಯಿಂದ ವಿಶ್ವ ರಕ್ತದಾನಿಗಳ ದಿನಾಚರಣೆ 2021 ಅಂಗವಾಗಿ "ರಕ್ತ ನೀಡಿ ಮತ್ತು ಜಗತ್ತನ್ನು ಗೆಲ್ಲಿಸಿ" ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು ಜೂನ್ 14, ಎಬಿ ರಕ್ತ ವ್ಯವಸ್ಥೆಯನ್ನು ಕಂಡುಹಿಡಿದ ವಿಜ್ಞಾನಿ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಕಾರ್ಲ್ ಲ್ಯಾಂಡ್‌ಸ್ಟೈನರ್‌ರವರ ಜನ್ಮದಿನದ ಅಂಗವಾಗಿ ವಿಶ್ವ ರಕ್ತದಾನ ದಿನಾಚರಣೆಯನ್ನು ವಿಶ್ವಾದ್ಯಂತ ಆಚರಿಸಲಾಗುತ್ತಿದೆ ರಕ್ತದಾನ ಜೀವದಾನ ಕೊರೋನಾ ದಿಂದ ಸಾವು ನೋವುಗಳು ಹೆಚ್ಚುತ್ತಿರುವ ಇತ್ತೀಚಿನ ಸಂಕಷ್ಟದ ದಿನಗಳಲ್ಲಿ ನಮ್...