ಮಾ ಕಾವೇರಿ ಆಸ್ಪತ್ರೆಯಲ್ಲಿ ಪೆರಿನಾಟಾಲಜಿ ವಿಭಾಗ ಪ್ರಾರಂಭ ಬೆಂಗಳೂರು : ಮಹಿಳೆಯರ ಪ್ರಸವಪೂರ್ವದಿಂದ ಪ್ರಸವದ ನಂತರದ ಅವಧಿಯವರೆಗೆ ನಿರಂತರವಾದ ಆರೈಕೆಯು ಮಗುವಿನ ಆರೋಗ್ಯ ಹಾಗೂ ಬೆಳವಣಿಗೆಗೆ ತುಂಬಾ ಮುಖ್ಯವಾಗಿದೆ ಎಂದು ಬೆಂಗಳೂರಿನ ಕಾವೇರಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಸ್. ವಿಜಯ್ ಭಾಸ್ಕರನ್ ಹೇಳಿದರು. ಕಾವೇರಿ ಆಸ್ಪತ್ರೆ ಹಾಗೂ ಮೆಡಿಸ್ಕ್ಯಾ ನ್ ಸಂಯುಕ್ತಾಶ್ರಯದಲ್ಲಿ ಆ ಕಾವೇರಿ ಆಸ್ಪತ್ರೆಯಲ್ಲಿ ಪ್ರಾರಂಭವಾಗಿರುವ ಪೆರಿನಾಟಾಲಜಿ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಕಲುಷಿತ ನೀರು, ಗಾಳಿ ಹಾಗೂ ಆಹಾರಗಳಿಂದ ಆರೋಗ್ಯ ಕ್ಷೀಣಿಸುತ್ತಿದೆ ಅದರಲ್ಲೂ ಗರ್ಭಿಣಿಯರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಭ್ರೂಣದಲ್ಲಿರುವ ಮಗುವಿನ ಮೇಲೆ ಹೆಚ್ಚು ಪರಿಣಾಮಕಾರಿಯಾಗಲಿದೆ. ಇದನ್ನು ಮನಗೊಂಡು ಮಹಿಳೆಯರ ಆರೋಗ್ಯಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ನಮ್ಮ ಕಾವೇರಿ ಆಸ್ಪತ್ರೆ ಹಾಗೂ ಮೆಡಿಸ್ಕ್ಯಾನ್ ಸಂಯುಕ್ತಾಶ್ರಯದಲ್ಲಿ ಪೆರಿನಾಟಾಲಜಿ ವಿಭಾಗವನ್ನು ಪ್ರಾರಂಭಿಸಿದ್ದೇವೆ. ಈ ಪೆರಿನಾಟಾಲಜಿ ವಿಭಾಗವು ಭ್ರೂಣದ ಚಿತ್ರಣ, ರೋಗನಿರ್ಣಯ, ಸಮಾಲೋಚನೆ ಮತ್ತು ಭ್ರೂಣದ ಚಿಕಿತ್ಸೆಗೆ ಸಂಬಂಧಿಸಿದಂತೆ ಶ್ರೇಷ್ಠತೆಯ ಕೇಂದ್ರವಾಗಿದ್ದು ಒಂದೇ ಸೂರಿನಡಿ ಎಲ್ಲ ಚಿಕಿತ್ಸಾ ಸೌಲಭ್ಯಗಳು ಮುಂದುವರಿಯಲಿದೆ. ಪೆರಿನಾಟಾಲಜಿ ಎನ್...