ಮಹಿಳೆಯರ ಆರೋಗ್ಯದ ಮೇಲೆ ಗಮನ ಹರಿಸುವ ನಿಟ್ಟಿನಲ್ಲಿ ಮಾ ಕಾವೇರಿ ಆಸ್ಪತ್ರೆಯಲ್ಲಿ ಪೆರಿನಾಟಾಲಜಿ ವಿಭಾಗ ಪ್ರಾರಂಭ

ಮಾ ಕಾವೇರಿ ಆಸ್ಪತ್ರೆಯಲ್ಲಿ ಪೆರಿನಾಟಾಲಜಿ ವಿಭಾಗ ಪ್ರಾರಂಭ 



ಬೆಂಗಳೂರುಮಹಿಳೆಯರ ಪ್ರಸವಪೂರ್ವದಿಂದ ಪ್ರಸವದ ನಂತರದ ಅವಧಿಯವರೆಗೆ ನಿರಂತರವಾದ ಆರೈಕೆಯು ಮಗುವಿನ ಆರೋಗ್ಯ ಹಾಗೂ ಬೆಳವಣಿಗೆಗೆ ತುಂಬಾ ಮುಖ್ಯವಾಗಿದೆ ಎಂದು ಬೆಂಗಳೂರಿನ ಕಾವೇರಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಸ್. ವಿಜಯ್ ಭಾಸ್ಕರನ್ ಹೇಳಿದರು.

      ಕಾವೇರಿ ಆಸ್ಪತ್ರೆ ಹಾಗೂ ಮೆಡಿಸ್ಕ್ಯಾ ನ್ ಸಂಯುಕ್ತಾಶ್ರಯದಲ್ಲಿ ಆ ಕಾವೇರಿ ಆಸ್ಪತ್ರೆಯಲ್ಲಿ ಪ್ರಾರಂಭವಾಗಿರುವ ಪೆರಿನಾಟಾಲಜಿ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಕಲುಷಿತ ನೀರು, ಗಾಳಿ ಹಾಗೂ ಆಹಾರಗಳಿಂದ ಆರೋಗ್ಯ ಕ್ಷೀಣಿಸುತ್ತಿದೆ ಅದರಲ್ಲೂ ಗರ್ಭಿಣಿಯರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಭ್ರೂಣದಲ್ಲಿರುವ ಮಗುವಿನ ಮೇಲೆ ಹೆಚ್ಚು ಪರಿಣಾಮಕಾರಿಯಾಗಲಿದೆ. 



          ಇದನ್ನು ಮನಗೊಂಡು ಮಹಿಳೆಯರ ಆರೋಗ್ಯಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ನಮ್ಮ ಕಾವೇರಿ ಆಸ್ಪತ್ರೆ ಹಾಗೂ ಮೆಡಿಸ್ಕ್ಯಾನ್ ಸಂಯುಕ್ತಾಶ್ರಯದಲ್ಲಿ ಪೆರಿನಾಟಾಲಜಿ ವಿಭಾಗವನ್ನು ಪ್ರಾರಂಭಿಸಿದ್ದೇವೆ. ಈ ಪೆರಿನಾಟಾಲಜಿ ವಿಭಾಗವು ಭ್ರೂಣದ ಚಿತ್ರಣ, ರೋಗನಿರ್ಣಯ, ಸಮಾಲೋಚನೆ ಮತ್ತು ಭ್ರೂಣದ ಚಿಕಿತ್ಸೆಗೆ ಸಂಬಂಧಿಸಿದಂತೆ ಶ್ರೇಷ್ಠತೆಯ ಕೇಂದ್ರವಾಗಿದ್ದು ಒಂದೇ ಸೂರಿನಡಿ ಎಲ್ಲ ಚಿಕಿತ್ಸಾ ಸೌಲಭ್ಯಗಳು ಮುಂದುವರಿಯಲಿದೆ. ಪೆರಿನಾಟಾಲಜಿ ಎನ್ನುವುದು ಪ್ರಸೂತಿಶಾಸ್ತ್ರದ ಶಾಖೆಯಾಗಿದ್ದು ಅದು ಹೆರಿಗೆಯ ಸುತ್ತಲಿನ ಅವಧಿಗೆ ಸಂಬಂಧಿಸಿದೆ. ಇದು ಭ್ರೂಣದ ಆರೈಕೆ ಮತ್ತು ಸಂಕೀರ್ಣವಾದ ಹೆಚ್ಚಿನ-ಅಪಾಯದ ಗರ್ಭಧಾರಣೆಗೆ ಸಂಬಂಧಿಸಿದ ಪ್ರಸೂತಿಶಾಸ್ತ್ರದ ವಿಷಯವಾಗಿದೆ ಹಾಗೂ ಇದು ಪ್ರಸವಪೂರ್ವದಿಂದ ಪ್ರಸವದ ನಂತರದ ಅವಧಿಯವರೆಗೆ ನಿರಂತರವಾದ ಆರೈಕೆ ಮಾಡುವುದರಿಂದ ಮಗುವಿನ ಆರೋಗ್ಯ ಹಾಗೂ ಬೆಳವಣಿಗೆಗೆ ತುಂಬಾ ಸಹಕಾರಿಯಾಗಲಿದೆ ಹಾಗೂ ಉನ್ನತ ಮಟ್ಟದ ಜೆನೆಟಿಕ್ಸ್ ಮತ್ತು ಪೆರಿನಾಟಲ್ ಪೆಥಾಲಜಿ ( ಭ್ರೂಣದ ಶವಪರೀಕ್ಷೆ ) ಸೇವೆಗಳನ್ನು ಸಹ ಹೊಂದಿದೆ. ಹೆರಿಗೆಯ ನಂತರ ಮಗುವಿನ ಆರೈಕೆ ಮಾಡುವುದು ಹೇಗೆ ಎಂದು ನಮ್ಮ ಎಲ್ಲಾ ವಿಶೇಷ ಸಲಹೆಗಾರರು ಮತ್ತು ಚೆನ್ನೈನ ಮೆಡಿಸ್ಕ್ಯಾನ್‌ ನ ಭ್ರೂಣದ ಚಿಕಿತ್ಸಾ ಪರಿಣಿತರು ಸಲಹೆ ನೀಡಲಿದ್ದಾರೆ ಎಂದರು.



    ಮೆಡಿಸ್ಕಾನ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರೊ.ಎಸ್.ಸುರೇಶ್ ಮಾತನಾಡಿ, ಅಲ್ಟ್ರಾಸೌಂಡ್ ತಂತ್ರಜ್ಞಾನವು ಆರಂಭಿಕ ಹಂತದಲ್ಲಿದ್ದಾಗ ನಾನು ಮತ್ತು ಡಾ.ಇಂದ್ರಾಣಿ ಸುರೇಶ್ 1982 ರಲ್ಲಿ ಮೆಡಿಸ್ಕಾನ್ ಅನ್ನು ಸ್ಥಾಪಿಸಿದ್ದೇವೆ ಮತ್ತು ಅಂದಿನಿಂದ ಭ್ರೂಣದ ವೈದ್ಯಕೀಯ ಕ್ಷೇತ್ರದಲ್ಲಿ ರೋಗನಿರ್ಣಯ ಮತ್ತು ಸಮಾಲೋಚಕ ಸೇವೆಗಳನ್ನು ನೀಡುತ್ತಿದ್ದೇವೆ. ಜೆನೆಟಿಕ್ ಮತ್ತು ಪೆರಿನಾಟಲ್ ಪ್ಯಾಥೋಲಜಿ ಘಟಕಗಳ ಸಹಯೋಗದೊಂದಿಗೆ, ಭ್ರೂಣಗಳಲ್ಲಿ ಅಸಹಜತೆಗಳು ಪತ್ತೆಯಾದಾಗ ಎಲ್ಲಾ ಆತಂಕದ ತಾಯಂದಿರಿಗೆ ಅರ್ಥಪೂರ್ಣವಾದ ತೀರ್ಮಾನವನ್ನು ನೀಡುವ ಮೂಲಕ ನಾವು ಭ್ರೂಣಗಳು ಮತ್ತು ತಾಯಂದಿರಿಗೆ ಹೆಚ್ಚು ವಿಶೇಷವಾದ ಆರೈಕೆಯನ್ನು ಒದಗಿಸುತ್ತೇವೆ. ನಿಖರವಾದ ರೋಗನಿರ್ಣಯ, ಗುಣಮಟ್ಟಕ್ಕೆ ಬದ್ಧತೆ ಮತ್ತು ವಿಶೇಷತೆಯಲ್ಲಿನ ಹೆಚ್ಚಿನ ಅನುಭವದ ದಾಖಲೆಯ ಕಾರಣದಿಂದಾಗಿ ಸಂಕೀರ್ಣವಾದ ಗರ್ಭಧಾರಣೆಯ ಸಂಪೂರ್ಣ ದಕ್ಷಿಣ ಏಷ್ಯಾದ ಪ್ರದೇಶಕ್ಕೆ ಮೆಡಿಸ್ಕ್ಯಾನ್ ತೃತೀಯ ಉಲ್ಲೇಖಿತ ಕೇಂದ್ರವಾಗಿದೆ ಎಂದರು.



         ಈ ವೇಳೆ ಕಾವೇರಿ ಆಸ್ಪತ್ರೆಯ ಎಚ್ಒಡಿ ಮತ್ತು ಹಿರಿಯ ಸಲಹೆಗಾರರಾದ ಡಾ.ಚಿತ್ರಾ ಗಣೇಶ್ ಮತ್ತು ಫಿಟಲ್ ಮೆಡಿಸಿನ್ ವ್ಯವಸ್ಥಾಪಕ ನಿರ್ದೇಶಕ ಪ್ರೊ.ಎಸ್.ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.


Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ