ಹೇರ್ ಲೈನ್ ಇಂಟರ್ ನ್ಯಾಷನಲ್

ಹೇರ್ ಲೈನ್ ಇಂಟರ್ ನ್ಯಾಷನಲ್ ಬೆಂಗಳೂರು: 28 ಆಗಸ್ಟ್, 2018: ಹೇರ್ ಲೈನ್ ಇಂಟರ್ ನ್ಯಾಷನಲ್ ಹೇರ್ ಮತ್ತು ಸ್ಕಿನ್ ಕ್ಲಿನಿಕ್ ಇಂದು ಕರ್ನಾಟಕ ಸಲೂನ್ ಹಾಗು ವೆಲ್ನೆಸ್ ಸೆಂಟರ್ ಓನರ್ಸ್ ಎಸೋಸಿಯೇಶನ್ (ಕೆಎಸ್ಡಬ್ಲ್ಯುಒಎ) ಜೊತೆ ಮಾಡಿಕೊಂಡಿರುವ ಒಪ್ಪಂದವನ್ನು ಘೋಷಿಸಿಕೊಂಡಿದೆ. ಈ ಸಂಬಂಧದಿಂದ ಹೇರ್ಲೈನ್ ಇಂಟರ್ನ್ಯಾಷನಲ್ ರಾಜ್ಯಾದ್ಯಂತ 300ಕ್ಕೂ ಹೆಚ್ಚಿನ ಸಲೂನ್ಗಳಲ್ಲಿ ಟ್ರೈಕಾಲಜಿ ಮತ್ತು ಡರ್ಮಟಾಲಜಿಯ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಿದೆ. ಈ ಸಹಾಯಕೇಂದ್ರಗಳು ಗ್ರಾಹಕರ ಟ್ರೈಕಾಲಜಿ ಹಾಗು ಡರ್ಮಟಾಲಜಿ ಸಮಸ್ಯೆಗಳಿಗೆ ಸಂಬಂಧಿಸಿ ಜವಾಬ್ದಾರಿಯುತ ಸೇವೆ ಸಲ್ಲಿಸುತ್ತವೆ. ಕೂದಲು ಉದುರುವಿಕೆ ಮತ್ತು ಡರ್ಮಟಾಲಜಿಯ ಈ ಸಹಾಯಕೇಂದ್ರವನ್ನು ಮುಖ್ಯ ಅತಿಥಿಗಳಾದ ಶಾಸ್ತ್ರೀಯ ನೃತ್ಯ ಪಟು ವಾಣಿ ಗಣಪತಿ ಹಾಗೂ ಪಂಚಾಯತ್ ರಾಜ್ ನ ಕಾರ್ಯದರ್ಶಿ, ಮಾಜಿ ಆರೋಗ್ಯ ಕಮಿಷನರ್ ಎಂ.ವಿ.ಸಾವಿತ್ರಿ ಅನಾವರಣಗೊಳಿಸಿದರು. ಆ ಬಳಿಕ ಮಾತನಾಡಿದ ವಾಣಿ ಗಣಪತಿ, "ದಿನನಿತ್ಯದ ಬದುಕಿನ ಜಂಜಡಗಳ ಮಧ್ಯೆಯೇ ವಿಶೇಷ ಆರೈಕೆಯ ಬಗ್ಗೆ ಸಾಮಾನ್ಯರಿಗೂ ತಿಳುವಳಿಕೆ ಲಭ್ಯವಾಗುವಂತೆ ಮಾಡಲು ಇದು ಅತ್ಯುತ್ಯಮ ಮಾರ್ಗವಾಗಿದೆ. ಇದು ಗ್ರಾಹಕರ ಮತ್ತು ಸಂಸ್ಥೆಯ ಮಧ್ಯೆ ಉತ್ತಮ ಬಾಂಧವ್ಯವನ್ನು ಏರ್ಪಡಿಸುತ್ತದೆ. ಟ್ರೈಕಾಲಜಿ ಮತ್ತು ತ್ವಚೆ ಆರೈಕೆಯಲ್ಲಿ ಉತ್ತಮ ಹೆಸರು ಮಾಡಿರುವ ಈ ಸಂಸ್ಥೆ ಸಲೂನ್ಗಳಿಗೂ ವಿಶ...