ವಿಜೇತರಾದ ರೂಪದರ್ಶಿಗಳಿಗೆ ರಾಗಿಣಿ ದ್ವಿವೇದಿ

ಫ್ರಾಂಕ್ಲಿನ್, ಮಧುಲಿಕ ಶ್ರೀರಾಮ್‍ಗೆ ``ಫೇಸ್ ಆಫ್ ಪೀಪಲ್’’ ಕಿರೀಟ ವಿಜೇತರಾದ ರೂಪದರ್ಶಿಗಳಿಗೆ ರಾಗಿಣಿ ದ್ವಿವೇದಿ ಬೆಂಗಳೂರು, ಸೆಪ್ಟಂಬರ್ 11, 2018: ಆದಿತ್ಯ ಬಿರ್ಲಾ ಫ್ಯಾಷನ್ ಅಂಡ್ ರೀಟೇಲ್ ಲಿಮಿಟೆಡ್‍ನ ಯುವಪೀಳಿಗೆಯ ನೆಚ್ಚಿನ ಬ್ರ್ಯಾಂಡ್ ಆಗಿರುವ ಪೀಪಲ್ ಬೆಂಗಳೂರಿನ ನಾಗರಭಾವಿಯಲ್ಲಿರುವ ತನ್ನ ಸ್ಟೋರ್‍ನಲ್ಲಿ ನಗರದ ಅತಿದೊಡ್ಡ ಮಾಡೆಲ್ ಶೋಧ ಕಾರ್ಯಕ್ರಮವಾದ ``ಫೇಸ್ ಆಫ್ ಪೀಪಲ್’’ ಅನ್ನು ಆರಂಭ ಮಾಡಿದೆ. ಈ ರೂಪದರ್ಶಿಗಳ ಶೋಧ ಅಭಿಯಾನದಲ್ಲಿ 300 ಕ್ಕೂ ಹೆಚ್ಚು ಜನರು ಮತ್ತು ರೂಪದರ್ಶಿಗಳು ಪಾಲ್ಗೊಂಡು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಇದರಲ್ಲಿ ವಿಜೇತರಾದ ಸೇಂಟ್ ಜೋಸೆಫ್ ಸ್ವಾಯತ್ತ ಕಾಲೇಜಿನ ಫ್ರಾಂಕ್ಲಿನ್ ವೈ ಮತ್ತು ಜೈನ್ ಕಾಲೇಜಿನ ಮಧುಲಿಕ ಶ್ರೀರಾಮ್ ಅವರಿಗೆ ಸ್ಯಾಂಡಲ್‍ವುಡ್‍ನ ಖ್ಯಾತ ತಾರೆ ರಾಗಿಣಿ ದ್ವಿವೇದಿ ಅವರು ಕಿರೀಟ ತೊಡಿಸಿದರು. ಇದಲ್ಲದೇ, ಇಬ್ಬರಿಗೂ ತಲಾ 20,000 ರೂಪಾಯಿಗಳ ನಗದು ಬಹುಮಾನವನ್ನೂ ನೀಡಲಾಯಿತು. ಈ ಇಬ್ಬರೂ ರೂಪದರ್ಶಿಗಳಿಗೆ ಪೀಪಲ್‍ನ ಡಿಜಿಟಲ್ ಜಾಹೀರಾತು ಮತ್ತು ಹೊರಾಂಗಣ ಹೋರ್ಡಿಂಗ್‍ಗಳಲ್ಲಿ ಜಾಹೀರಾತಿನಲ್ಲಿ ರೂಪದರ್ಶಿಗಳಾಗುವ ಅವಕಾಶವೂ ಸಿಕ್ಕಿದೆ. ಈ ಸಂದರ್ಭದಲ್ಲಿ ಮಾತನಾಡಿದ ಆದಿತ್ಯ ಬಿರ್ಲಾ ಫ್ಯಾಷನ್ ಅಂಡ್ ರೀಟೇಲ್ ಲಿಮಿಟೆಡ್‍ನ ಪೀಪಲ್‍ನ ಬ್ರ್ಯಾಂಡ್ ಮುಖ್ಯಸ್ಥರಾದ ರಶ್ಮಿ...