ಬೆಂಗಳೂರು: ನಾರಾಯಣ e-ಟೆಕ್ನೋ & ಒಲಿಂಪಿಯಾಡ್ ಶಾಲೆಯ 13ನೇ ವಾರ್ಷಿಕೋತ್ಸವ ‘ಉತ್ಸವಂ’ ಭವ್ಯವಾಗಿ ಜರುಗಿ
ಬೆಂಗಳೂರು : ವಿದ್ಯಾರಣ್ಯಪುರದ ನಾರಾಯಣ e-ಟೆಕ್ನೋ ಮತ್ತು ಒಲಿಂಪಿಯಾಡ್ ಶಾಲೆಯ 13ನೇ ವಾರ್ಷಿಕೋತ್ಸವದ ಅಂಗವಾಗಿ ‘ಉತ್ಸವಂ’ ಶೀರ್ಷಿಕೆಯಲ್ಲಿ ಆಯೋಜಿಸಲ್ಪಟ್ಟ ವಾರ್ಷಿಕ ದಿನಾಚರಣೆ ನಗರದ ಅಂಬೇಡ್ಕರ್ ಭವನದಲ್ಲಿ ಭವ್ಯವಾಗಿ ನೆರವೇರಿತು. ನರ್ಸರಿ ಇಂದಾಗಿ ಹೈಸ್ಕೂಲ್‌ವರೆಗೆ ವಿವಿಧ ತರಗತಿಯ ವಿದ್ಯಾರ್ಥಿಗಳ ಬಹುಮುಖ ಪ್ರತಿಭೆ, ಸಾಂಸ್ಕೃತಿಕ ಕೌಶಲ್ಯ ಹಾಗೂ ಕ್ರೀಡಾ ವೈಭವಕ್ಕೆ ಈ ವೇದಿಕೆ ಸಾಕ್ಷಿಯಾಯಿತು. ವಿದ್ಯಾರ್ಥಿಗಳ ಪ್ರದರ್ಶನಗಳನ್ನು ಕಣ್ತುಂಬಿಕೊಂಡು ಪಾಲಕರು ಮತ್ತು ವಿಶೇಷ ಆಹ್ವಾನಿತರು ದೊಡ್ಡ ಸಂಖ್ಯೆಯಲ್ಲಿ ಹಾಜರಿದ್ದು, ಕಾರ್ಯಕ್ರಮಕ್ಕೆ ಮಂದಹಾಸದ ಚೈತನ್ಯ ತುಂಬಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಇಸ್ರೋ ವಿಜ್ಞಾನಿಗಳಾದ ಸುರೇಶ್ ಆರ್ ನಾಯಕ್ ರವರು ಮಕ್ಕಳ ವೈಜ್ಞಾನಿಕ ಕುತೂಹಲ, ಸಂಶೋಧನಾ ಮನೋಭಾವ ಹಾಗೂ ಭವಿಷ್ಯದ ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳ ಕೊಡುಗೆ ಕುರಿತಾಗಿ ಪ್ರೇರಣಾದಾಯಕವಾಗಿ ಮಾತನಾಡಿದರು. “ಶಿಕ್ಷಣದ ಜೊತೆಗೆ ವಿಜ್ಞಾನ ಮನೋಭಾವ ಬೆಳೆಸಿದಾಗ ಮಾತ್ರ ಮುಂದಿನ ಪೀಳಿಗೆ ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಲಿದೆ,” ಎಂದು ಅವರು ಮಕ್ಕಳನ್ನು ಉದ್ದೇಶಿಸಿ ಹೇಳಿದರು. ಯಲಹಂಕ ಉಪವಿಭಾಗದ ಸಹ ಪೊಲೀಸ್ ಆಯುಕ್ತ ನರಸಿಂಹಮೂರ್ತಿ ಪಿ ರವರು ವಿದ್ಯಾರ್ಥಿಗಳಲ್ಲಿ ಶಿಸ್ತು, ನೈತಿಕ ಮೌಲ್ಯಗಳು, ಸಾಮಾಜಿಕ ಜವಾಬ್ದಾರಿ ಹಾಗೂ ರಾಷ್ಟ್ರಪ್ರೇಮದ ಅಗತ್ಯತೆಯನ್ನು ಸವಿಸ್ತಾರವಾಗಿ ವಿವರ...