ಮಾಸ್ಟರ್ಸ್ ಆಫ್ ಮ್ಯೂಸಿಕ್ ಗುರು ಶಿಷ್ಯರ ಸಂಗೀತ ಸಂವಾದ ಕಾರ್ಯಾಗಾರ ಬೆಂಗಳೂರು: ಮಾಸ್ಟರ್ಸ್ ಆಫ್ ಮ್ಯೂಸಿಕ್ ಸಂಸ್ಥೆಯ ವತಿಯಿಂದ ಬೆಂಗಳೂರಿನ ಗರುಡಾ ಮಾಲ್ ಇನಾಕ್ಸ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು . ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಸಂಗೀತ ಮಾಂತ್ರಿಕ, ಸಂಗೀತದ ಗುರು, ಪ್ರಖ್ಯಾತ ಗಾಯಕ ಸುರೇಶ್ ವಾಡ್ಕರ್ ಮಾತನಾಡಿ ಗುರು ಶಿಷ್ಯರ ಸಂಗೀತ ಸಂವಾದ ಕಾರ್ಯಾಗಾರವನ್ನು ಮಾಸ್ಟರ್ಸ್ ಆಫ್ ಮ್ಯೂಸಿಕ್ ವತಿಯಿಂದ ದಿನಾಂಕ 10/02/2019ರಂದು ಕೆ.ಜಿ ರಸ್ತೆಯ ಶಿಕ್ಷಕ ಸದನದಲ್ಲಿ ಆಯೋಜಿಸಲಾಗಿದೆ. ಪ್ರಾರಂಭಿಕ ಮತ್ತು ಕಲಿಕಾ ವಿದ್ಯಾರ್ಥಿಗಳಿಗೆ ಸಂಗೀತದಲ್ಲಿ ಸಂಸ್ಕೃತಿ, ಕಲಾ ಸೂಕ್ಷ್ಮ, ವೈಜ್ಞಾನಿಕ ಮತ್ತು ತಾಂತ್ರಿಕ ಜ್ಞಾನವನ್ನು ಹೆಚ್ಚಿಸುವ ಎರಡು ಗಂಟೆಗಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರವು ಅಭ್ಯಾಸ ವಿಧಾನಗಳಲ್ಲಿ ಬದಲಾವಣೆ, ಸಮನ್ವಯತೆ, ಟೀಮ್ ವರ್ಕ್ ಸಾಮರ್ಥ್ಯಗಳು, ಭಾವನಾತ್ಮಕ ಸ್ಥಿರತೆ, ವಿಶ್ರಾಂತಿ ಕಲ್ಪನೆ, ಆತ್ಮವಿಶ್ವಾಸ ಹಾಗೂ ಬುದ್ಧಿಶಕ್ತಿ ಹೆಚ್ಚಿಸಲು ಉಪಯುಕ್ತವಾಗಿದೆ. ಮಕ್ಕಳು, ವಯಸ್ಕರು, ಯು...
Comments
Post a Comment