ಸಂಕ್ರಾಂತಿ ಹಬ್ಬ ಒಕ್ಕಲಿಗರ ಹಬ್ಬದ


ಸಂಕ್ರಾಂತಿ ಹಬ್ಬ ಒಕ್ಕಲಿಗರ ಹಬ್ಬದ 9ನೇ  ವಾರ್ಷಿಕೋತ್ಸವ



ಬೆಂಗಳೂರು : ವಿಶ್ವ ಒಕ್ಕಲಿಗರ ಮಹಾ ವೇದಿಕೆ (ರಿ) ವತಿಯಿಂದ ಸಂಕ್ರಾಂತಿ ಹಬ್ಬ ಒಕ್ಕಲಿಗರ ಹಬ್ಬದ 9ನೇ  ವಾರ್ಷಿಕೋತ್ಸವವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಪರಮಪೂಜ್ಯ ಜಗದ್ಗುರು ಡಾ॥ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಜಾನಪದ ನೃತ್ಯ ರಾಸುಗಳನ್ನು ಕಿಚ್ಚು ಹಾರಿಸುವುದು ಹಾಗೂ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ನಂತರ "ವಿಶ್ವಮಾನ್ಯ ಒಕ್ಕಲಿಗ ಪ್ರಶಸ್ತಿ" ಹಾಗೂ "ಸಾಮಾನ್ಯ ರೈತ ಅಸಾಮಾನ್ಯ ಸಾಧನೆ ಪ್ರಶಸ್ತಿ" ನೀಡಿ ಗಣ್ಯರಿಗೆ ಸನ್ಮಾನಿಸಲಾಯಿತು. 
ಈ ಸಂದರ್ಭದಲ್ಲಿ ಮಲ್ಲೇಶ್ವರಂ ಶಾಸಕರಾದ ಅಶ್ವತ್ಥ್ ನಾರಾಯಣ್, ಬಿಬಿಎಂಪಿ ಸದಸ್ಯರಾದ ಚಂದ್ರಕಲಾ ಗಿರೀಶ್ ಲಕ್ಕಣ್ಣ, ಕಲಾವಿದರು, ಗಣ್ಯರು, ಹಾಗೂ ನಾಗರಿಕರು ಉಪಸ್ಥಿತರಿದ್ದರು.

Comments

Popular posts from this blog

PMBJK ಹೊಸ ದೂರ ನೀತಿಗೆ ಮಾಲೀಕರ ತೀವ್ರ ಆಕ್ಷೇಪ – ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

RACE FOR 7: BANGALORE WALKS FOR RARE DISEASES