Skip to main content
ನಮ್ಮ ಕನ್ನಡ ಸಂಘ
ನಮ್ಮ ಕನ್ನಡ ಸಂಘ, ಕನ್ನಡ ಕಲಿಕಾ ಕೇಂದ್ರ ಉದ್ಯೋಗ ಮಾಹಿತಿ ಮತ್ತು ಕೌಶಲ್ಯ ತರಬೇತಿ ಕೇಂದ್ರ
ನಮ್ಮ ಕನ್ನಡ ಸಂಘ, ಕನ್ನಡ ಕಲಿಕಾ ಕೇಂದ್ರ ಉದ್ಯೋಗ ಮಾಹಿತಿ ಮತ್ತು ಕೌಶಲ್ಯ ತರಬೇತಿ ಕೇಂದ್ರ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿ ಗೋಷ್ಠಿಕಾರಿಯಾಲಾಗಿತು, ಸುದ್ದಿ ಗೋಷ್ಠಿಯನ್ನು ಉದ್ಹೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಪ್ರೊ.ಡಾ||ಜಿ ಬಿ. ರಾಜ್ ಅವರು ರಾಜ್ಯದಲ್ಲಿ ಕನ್ನಡಿಗರಿಗೆ ಹಾಗುತ್ತಿರುವ ಅನ್ಯಾಯ ದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕನ್ನಡ ಕಾವಲು ಸಮಿತಿ ಗಡಿನಾಡು ಪ್ರಾಧಿಕಾರ ಹಾಗು ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳು ಕನ್ನಡದ ಜನತೆಯ ಪರವಾಗಿ ಯಾವುದೇ ಕೆಲಸವನ್ನು ಮಾಡದೆ ನಿಷ್ಕ್ರಿಯವಾಗಿದೆ. ಇಂತ ಸಂಸ್ಥೆಗಳ ವಿರುದ್ದ ಜಿ. ಬಿ. ರಾಜ್ ಅವರು ಅಸಮಾಧಾನ ವ್ಯಕ್ತಪಡಿಸಿದರು. ನಮ್ಮ ಕನ್ನಡ ಸಂಘ ಹಲವಾರು ಕನ್ನಡ ಪರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ..1)ಕನ್ನಡಿಗರಿಗೆ ಉದ್ಯೋಗ ಮಾಹಿತಿ ಮತ್ತು ಕೌಶಲ್ಯ ತರಬೇತಿ ಕೇಂದ್ರದ ಮೂಲಕ ಸೂಕ್ತ ತರಬೇತಿಯನ್ನು ನೀಡಿ ಆ ಹುದ್ದೆ ಗಳಿಗೆ ತರಬೇತಿ ನೀಡಲಾಗುವುದು. 2)ಕನ್ನಡ ಕಲಿಕಾ ಕೇಂದ್ರ ದ ಮೂಲಕ ಅನ್ಯ ಭಾಷೆ ಗರಿಗೆ ಕನ್ನಡ ಕಲಿಸುವ ಶಾಲೆಯನ್ನು ಈಗಾಗಲೇ ಪ್ರಾರಂಬಿಸಲಾಗಿದೆ. 3) ಕನ್ನಡ ನೆಲ,ಜಲ,ಸಂಸ್ಕೃತಿಯ ಪರಿಚಯ ಮತ್ತು ಕರ್ನಾಟಕದ ಮಹಾನು ಬಾವರ ಪರಿಚಯ ಮಾಡಿಸುವ ಕಾರ್ಯಕ್ರಮ ಅಮ್ಮಿ ಕೊಳಲಾಗುತ್ತದೆ ಎಂದು ತಿಳಿಸಿದರು.. ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದಲ್ಲಿ ಸುಪ್ರೀಂಕೋರ್ಟ್ ಸ್ಥಾಪನೆಗೆ ಒತ್ತಾಹಿಸಿ ಗಾಂದಿ ಪ್ರತಿಮೆ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದರು. ನಮ್ಮ ಕನ್ನಡ ಸಂಘದ ಉಪಾಧ್ಯಕ್ಷರಾದ ಎಲ್.ಮುರಳಿ ಮೋಹನ್ ರವರು ಕರ್ನಾಟಕದ ರಾಜ್ಯ ಸರ್ಕಾರದ ಕನ್ನಡ ಬಾವುಟದ ಬಣ್ಣ ಬದಲಾಹಿಸುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು. ಮಾ.ರಾಮಮೂರ್ತಿ ಯವರು ಕೆಂಪು ಮತ್ತು ಹಳದಿ ಬಣ್ಣದ ಧ್ವಜವನ್ನು ರಾಜ್ಯದ ಜನತೆ ಒಪ್ಪಿ ಕೊಂಡಿರುತ್ತಾರೆ, ಕನ್ನಡ ಪರ ಹೋರಾಟಗಾರರು, ಸಾಹಿತಿ ಗಳು ಒಪ್ಪಿಕೊಂಡಿರುವವಂತ ಕೆಂಪು ಮತ್ತು ಹಳದಿ ಬಣ್ಣದ ಬಾವುಟವನ್ನು ಯಾವುದೇ ಕಾರಣಕ್ಕೂ ಬದಲಯಿಸಕೂಡದು ಎಂದು ಆಗ್ರಹಿಸಿದರು. ಪತ್ರಿಕ ಗೋಷ್ಠಿಯಲ್ಲಿ ರಾಜ್ಯದ ಕಂದಾಯ D ಗ್ರೂಪ್ ನೌಕರರ ಸಂಘದ ಪ್ರದಾನ ಕಾರ್ಯದರ್ಶಿ ವರದರಜು ಹಾಗು ಶ್ರೀ.ಸಂಪತ್ ಕುಮಾರ್ ಭಾಗವಹಿಸಿದರು.
Comments
Post a Comment