ಇನ್ನೋವೇಟಿವ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಟೀಸರ್ ಬಿಡುಗಡೆ
ಇನ್ನೋವೇಟಿವ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಟೀಸರ್ ಬಿಡುಗಡೆ
ಬೆಂಗಳೂರಿನ ಹೊರವಲಯ ಬಿಡದಿಯಲ್ಲಿರುವ ಇನೋವೇಟಿವ್ ಫಿಲಂ ಸಿಟಿಯಲ್ಲಿ ಆರಂಭವಾಗಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ವೈಭವಯುತ ವಿಡಿಯೋ ಟೀಸರ್ ಜನವರಿ 20/2018 ರಂದು ಬಿಡುಗಡೆ ಮಾಡಲಾಯಿತು.
ದಕ್ಷಿಣ ಭಾರತದ ಸಿನಿಮಾ ಕ್ಷೇತ್ರದಲ್ಲಿ ಅತ್ಯಂತ ಬೃಹತ್ ಮಟ್ಟದ ಚಲನಚಿತ್ರೋತ್ಸವ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಹೆಸರಾಂತ ಚಲನಚಿತ್ರ ತಾರೆಯಾದ ಡಾಕ್ಟರ್ ಅಂಬರೀಶ್ ಶ್ರೀ ಕಿಚ್ಚ ಸುದೀಪ್ ಶ್ರೀ ರಾಕ್ ಲೈನ್ ವೆಂಕಟೇಶ್ ಸಾರಿ ವಿಶಾಲ್ ಶ್ರೀ ವಿಜಯ್ ದೇವರಕೊಂಡ ಹಾಗೂ ಶ್ರೀ ರಾಜೇಂದ್ರ ಸಿಂಗ್ ಬಾಬು ಅವರನ್ನು ಒಳಗೊಂಡಂತೆ ಮೊದಲಾದವರು ಹಾಜರಿದ್ದರು .
ಈ ಸಂದರ್ಭದಲ್ಲಿ ಇನೋವೇಟಿವ್ ಗ್ರೂಪ್ ಸಾಫ್ಟ್ ಕಂಪನೀಸ್ ನ ಸಂಸ್ಥಾಪಕ ಅಧ್ಯಕ್ಷ ಹಾಗೂ ಮುಖ್ಯಸ್ಥ ಶ್ರೀ ಶರವಣನ್ ಪ್ರಸಾದ್ ಮಾತನಾಡಿ ದಕ್ಷಿಣ ಭಾರತದ ಚಲನಚಿತ್ರ ಉದ್ಯಮಕ್ಕೆ ಸಂಪರ್ಕ ಬೆಸೆಯಲು ಬಹುದೊಡ್ಡ ವೇದಿಕೆ ಇದಾಗಿದ್ದು ನಮ್ಮೆಲ್ಲರಲ್ಲೂ ಸಾಕಷ್ಟು ಉತ್ಸುಕತೆ ಮನೆ ಮಾಡಿದೆ ಮೂರು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಅತ್ಯಂತ ಜಾಗರೂಕತೆಯಿಂದ ಬೃಹತ್ ಮಟ್ಟದಲ್ಲಿ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತದೆ ಉತ್ಸವವು ಕನ್ನಡ ಸಿನಿಮಾ ರಂಗದ ಉತ್ಕಟ ಕನ್ನಡ ಚಲನಚಿತ್ರ ಉದ್ಯಮವನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಬೇಕಾದ ಬೆಂಬಲ ನೀಡಲಿದೆ ಎಂದು ಹೇಳಿದರು
ಇನೋವೇಟಿವ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2018 ಏಪ್ರಿಲ್ 14,15 ಹಾಗೂ 16 ರಂದು ನಡೆಯಲಿದ್ದು ಮೂರು ದಿನಗಳ ಕಾಲ ನಡೆಯಲಿರುವ ಉತ್ಸವವು ಉದಯೋನ್ಮುಖ ಸಿನಿಮಾ ನಿರ್ಮಾಪಕರು ಹೂಡಿಕೆದಾರರು ಕಲಾವಿದರು ಮಾಧ್ಯಮ ಗೃಹಗಳು ಹಾಗೂ ವಿತರಣಾ ಜಾಲಕ್ಕೆ ಇದರಲ್ಲಿ ಪಾಲ್ಗೊಂಡು ತಮ್ಮಲ್ಲಿನ ಪ್ರತಿಭೆ ಅನಾವರಣ ಪಡಿಸಲು ಬೇಕಾದ ಅತ್ಯಗತ್ಯದ ಹಾಗೂ ಮಹತ್ವಾಕಾಂಕ್ಷಿಯ ವೇದಿಕೆಯನ್ನು ಒದಗಿಸಲಿದೆ ಉತ್ಸವದಲ್ಲಿ ಸ್ಥಳೀಯ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಚಲನಚಿತ್ರಗಳನ್ನು 200ಕ್ಕೂ ಹೆಚ್ಚಿನ ತೆರೆಗಳಲ್ಲಿ ಹಾಗೂ 10 ವಿಭಿನ್ನ ಭಾಷೆಗಳಲ್ಲಿ ಪ್ರದರ್ಶಿಸಲಾಗುತ್ತದೆ ಇದಲ್ಲದೆ ವ್ಯಾಪಾರ ಸಮಾವೇಶ ಲೈವ್ ಪ್ರೋಗ್ರಾಂಗಳು ಹಾಗೂ ಚಲನಚಿತ್ರಗಳು ಕಿರುಚಿತ್ರ ಮತ್ತು ಟೆಲಿವಿಜನ್ ಕಂಟೆಂಟ್ ಗಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುವ ಮೂಲಕ ಉತ್ಸವ ಅಂತ್ಯಗೊಳ್ಳಲಿದೆ
ಕಾರ್ಯಕ್ರಮವು ದೊಡ್ಡ ಮಟ್ಟದಲ್ಲಿ ಜನರನ್ನು ಆಕರ್ಷಿಸುವ ಹತ್ತು ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಂಡು ಚಲನಚಿತ್ರ ಉದ್ಯಮದಲ್ಲಿನ ನೂರಕ್ಕೂ ಹೆಚ್ಚಿನ ಪ್ರಮುಖ ಮಾತಿಗೆ ಕಿವಿ ಕೊಡಲಿದ್ದಾರೆ ಚಲನಚಿತ್ರ ಉತ್ಸಾಹಿಗಳು ಸಿನಿಮಾ ವಿದ್ಯಾರ್ಥಿಗಳು ಹಾಗೂ ಉತ್ಸಾಹಿ ಸಿನಿಮಾ ನಿರ್ಮಾಪಕರು ಉತ್ಸವದಲ್ಲಿನ ಇಪ್ಪತ್ತಕ್ಕೂ ಹೆಚ್ಚು ಕಾರ್ಯಾಗಾರಗಳಲ್ಲಿ ಪಾಲ್ಗೊಂಡು ಚಲನಚಿತ್ರ ನಿರ್ಮಾಣ ಕುರಿತಾದ ಹಲವು ಸಂಗತಿಗಳನ್ನು ಕಲಿತುಕೊಳ್ಳಬಹುದಾಗಿದೆ ಈ ಕುರಿತಾಗಿ ಹಲವು ಬಗೆಯ ಚರ್ಚೆಗಳು ಕೂಡ ಉತ್ಸವದಲ್ಲಿ ನಡೆಯಲಿದ್ದು ದಕ್ಷಿಣ ಭಾರತದ ಚಲನಚಿತ್ರ ಕ್ಷೇತ್ರದಲ್ಲಿನ ಈಗಿನ ಟ್ರೆಂಡ್ ಕುರಿತಾಗಿ ತಿಳಿದುಕೊಂಡು ಕನ್ನಡ ಚಿತ್ರಗಳಲ್ಲಿನ ವಸ್ತು ವಿಷಯವನ್ನು ಅಭಿವೃದ್ಧಿ ಪಡಿಸುವ ಕಡೆಗೆ ಹೆಚ್ಚಿನ ಗಮನ ನೀಡಲಾಗುತ್ತದೆ
ಬೆಂಗಳೂರು ಮೈಸೂರು ರಸ್ತೆ ಹೆದ್ದಾರಿಯಲ್ಲಿರುವ ಬಿಡದಿ ಸಮೀಪ ಇರುವ ಇನ್ನೋವೇಟಿವ್ ಫಿಲಂ ಸಿಟಿಯನ್ನು ಎರಡು ಸಾವಿರದ ಮೂರು ರಲ್ಲಿ ನಿರ್ಮಿಸಲಾಗಿದ್ದು ಅಂದಿನಿಂದ ಮನರಂಜನೆ ಹಾಗೂ ರಜೆ ಸಮಯ ಕಳೆಯಲು ಅತ್ಯಂತ ಜನಪ್ರಿಯ ತಾಣವಾಗಿದೆ ಇನ್ನು ಚಲನಚಿತ್ರ ಉದ್ಯಮಗಳಿಗೆ ಅಗತ್ಯದ ಹಾಗೂ ವಿಶ್ವ ದರ್ಜೆಯ ಸ್ಟುಡಿಯೋ ಮತ್ತು ನಿರ್ಮಾಣ ಉಪಕರಣಗಳನ್ನು ಒದಗಿಸುತ್ತಾ ಬಂದಿದೆ ಬಿಗ್ ಬಾಸ್ ಡ್ಯಾನ್ಸಿಂಗ್ ಸ್ಟಾರ್ ಹಾಗೂ ಸೂಪರ್ ಮಿನಿಟ್ ಸೇರಿದಂತೆ ಹಲವು ಹೆಸರಾಂತ ಕಾರ್ಯಕ್ರಮಗಳಿಗೆ ಇನೋವೇಟಿವ್ ಫಿಲಂ ಸಿಟಿ ವೇದಿಕೆ ಒದಗಿಸಿದೆ
Comments
Post a Comment