ಗಣರಾಜ್ಯೋತ್ಸವ ಪ್ರಯುಕ್ತ ಡಾ||ಬಿ.ಆರ್ .ಅಂಬೇಡ್ಕರ್ ಮೆಡಿಕಲ್ ಡೇ ಕೇರೆ ಸಂಟರ್ ಉದ್ಘಾಟನೆ

ಗಣರಾಜ್ಯೋತ್ಸವ ಪ್ರಯುಕ್ತ ಡಾ||ಬಿ.ಆರ್ .ಅಂಬೇಡ್ಕರ್ ಮೆಡಿಕಲ್ ಡೇ ಕೇರೆ ಸಂಟರ್ ಉದ್ಘಾಟನೆ

  ರಾಜಾಜಿನಗರ:ದಯಾನಂದನಗರ ವಾರ್ಡನಲ್ಲಿ ಇಂದು ಗಣರಾಜ್ಯೋತ್ಸವ ಪ್ರಯುಕ್ತ ಡಾ||ಬಿ.ಆರ್ .ಅಂಬೇಡ್ಕರ್ ಮೆಡಿಕಲ್ ಡೇ ಕೇರೆ ಸಂಟರ್ ಉದ್ಘಾಟನೆಯನ್ನು ಮಾಜಿ ಸಚಿವರು,ಶಾಸಕರಾದ ಸುರೇಶ್ ಕುಮಾರ್ ,ಲೋಕಸಭಾ ಸದಸ್ಯರಾದ ಪಿ.ಸಿ.ಮೋಹನ್ ರವರು ಉದ್ಘಾಟನೆ ಮಾಡಿದರು .ಕಾರ್ಯಕ್ರಮದಲ್ಲಿ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಮುನಿರಾಜು ಮತ್ತು ಶ್ರೀಮತಿ ಶಕೀಲಾ ಮುನಿರಾಜು ಹಾಗೂ ಶ್ರೀಮತಿ ಸಾವಿತ್ರಿ ಸುರೇಶ್ ಕುಮಾರ್ ಓಕುಳಿಪುರಂ ವಾರ್ಡ ಬಿ.ಬಿ.ಎಂ.ಪಿ.ಸದಸ್ಯರಾದ ಶಿವಪ್ರಕಾಶ್ ,ಶ್ರೀರಾಮಮಂದಿರ ವಾರ್ಡ ಬಿ.ಬಿ.ಎಂ.ಪಿ.ಸದಸ್ಯರಾದ ಶ್ರೀಮತಿ ದೀಪಾ ನಾಗೇಶ್ ,ನಾಮ ನಿರ್ದಶನ ಸದಸ್ಯರಾದ ಮೋಹನ್ ಕುಮಾರ್ ,ಬೆಂಗಳೂರು ನಗರ ಯುವ ಕಾಂಗ್ರೆಸ್ ಅಧ್ಯಕ್ಷರಾದ ರಘುವೀರ್ ಗೌಡರು ಭಾಗವಹಿಸಿದ್ದರು .

  ಉದ್ಘಾಟನೆ ನೇರವೆರಿಸಿ ಮಾತನಾಡಿದ ಸ್ಥಳೀಯ ಶಾಸಕರಾದ ಸುರೇಶ್ ಕುಮಾರ್ ರವರು ರಾಜಾಜಿನಗರ ವಿಧಾನಸಭಾ ಕ್ಷೇತ್ರದ ದಯಾನಂದನಗರ ವಾರ್ಡ ಅತ್ಯಂತ ಹಿಂದುಳಿದ ಪ್ರದೇಶ ಹಾಗೂ ಆರ್ಥಿಕವಾಗಿ ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ .ಡಾ.ಬಿ.ಆರ್.ಅಂಬೇಡ್ಕರ್ ಮೆಡಿಕಲ್ ಡೇ ಕೇರೆ ಸೆಂಟರ್ ಆರಂಭಿಸಿರುವುದರಿಂದ ಸ್ಥಳೀಯ ನಾಗರಿಕರಿಗೆ ಕಡಿಮೆ ವೆಚ್ಚದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬಹುದು ಮತ್ತು ಇಲ್ಲಿ ನುರಿತ ವೈದ್ಯರ ತಂಡ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.ತದನಂತರ ಲೋಕಸಭಾ ಸದಸ್ಯರಾದ ಪಿ.ಸಿ.ಮೋಹನ್ ರವರು ಮಾತನಾಡಿ ಆರೋಗ್ಯ ಸಮಸ್ಯೆ ವೆಚ್ಚ ಭರಿಸುವುದು ಮಧ್ಯಮ ವರ್ಗ ಹಾಗೂ ಕಡುಬಡವರಿಗೆ ಕಷ್ಟ ಸಾಧ್ಯ .ಡಯಾಲಿಸಿಸ್ ಚಿಕಿತ್ಯೆಗೆ ಆಸ್ಪತ್ರೆ 4ರಿಂದ5ಸಾವಿರ ರೂಪಾಯಿ ವೆಚ್ಚವಾಗುತ್ತದೆ ,ಡಾ.ಬಿ.ಆರ್.ಅಂಬೇಡ್ಕರ್ ಡೇ ಕೇರೆ ಸೆಂಟರ್ ನಲ್ಲಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಲಭ್ಯವಿದೆ ,ಸಕ್ಕರೆ  ಖಾಯಿಲೆ,ಬಿ.ಪಿ.ಮತ್ತು ರಕ್ತ ಪರೀಕ್ಷೆ ,ಇ.ಸಿ.ಜಿ.ಪರೀಕ್ಷೆಗಳಿಗೆ ಬಿ.ಪಿ.ಎಲ್.ಮತ್ತು ಎ.ಪಿ.ಎಲ್.ಕಾರ್ಡದಾರರಿಗೆ ವಿಶೇಷ ರಿಯಾಯಿತಿ ಸೌಲಭ್ಯವಿದೆ .ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿರವರು ಆರ್ಥಿಕವಾಗಿ ಹಿಂದುಳಿದವರ ಹೃದಯ ಚಿಕಿತ್ಸೆ ಸ್ಟಂಟ್ ಆಳವಡಿಕೆ ದರ ಕಡಿಮೆ ಮಾಡಿರುವುದು ಹಾಗೂ ಔಷಧಿ ಬೆಲೆಗಳನ್ನು ಕಡಿಮೆ ವೆಚ್ಚದಲ್ಲಿ ಜನರ ಕೈಗೆಟುವಂತೆ ಜನರಿಕ್ ಔಷದ ಮಳಿಗೆ ಆರಂಭಿಸಲಾಗಿದೆ ಎಂದು ಹೇಳಿದರು .
ಇದೇ ಸಂದರ್ಭದಲ್ಲಿ ದಯಾನಂದ ವಾರ್ಡನ ಮಹಿಳೆಯರಿಗೆ ಸೀರೆ ಮತ್ತು ಸಿಹಿ ತಿನಿಸುಗಳನ್ನು ವಿತರಿಸಲಾಯಿತು.

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ