ಆರೋಗ್ಯಕರ ಆಹಾರದೊಂದಿಗೆ ಸೆಲ್ಫೀ


 ಆರೋಗ್ಯಕರ ಆಹಾರದೊಂದಿಗೆ ಸೆಲ್ಫೀ


      ಈ ದಿನಗಳಲ್ಲಿ ಯುವಜನರು ಎಲ್ಲಿ ನೋಡಿದರೂ ಸೆಲ್ಫೀ ತೆಗೆದುಕೊಳ್ಳುವ ಉತ್ಸಾಹದಲ್ಲಿರುತ್ತಾರೆ. ಕೆಲವೊಮ್ಮೆ ಸೆಲ್ಫೀ ತೆಗೆದುಕೊಳ್ಳಲು ಹೋಗಿ ಸಂಕಷ್ಟಕ್ಕೆ ಸಿಲುಕಿಕೊಳ್ಳುವುದೂ ಇದೆ. ಮೊಟ್ಟ ಮೊದಲ ಬಾರಿಗೆ ವೈದ್ಯರು ಸೆಲ್ಪೀ ಕ್ರೇಜ್ó ಅನ್ನು ಯುವಜನರಲ್ಲಿ ಪೌಷ್ಠಿಕ ಆಹಾರ ಉತ್ತೇಜಿಸಲು ಬಳಸಿಕೊಳ್ಳುತ್ತಿದ್ದಾರೆ. ಯಶವಂತಪುರದ ಪೀಪಲ್ ಟ್ರೀ ಆಸ್ಪತ್ರೆ `ಸೆಲ್ಫೀ ಬೂತ್' ಪ್ರಾರಂಭಿಸಿದ್ದು ಇದರಲ್ಲಿ ಯುವಜನರಿಗೆ ಸುರಕ್ಷಿತ ಮತ್ತು ಪೌಷ್ಠಿಕತೆಯ ಆಹಾರದೊಂದಿಗೆ ಸೆಲ್ಫೀ ತೆಗೆದುಕೊಳ್ಳಲು ಉತ್ತೇಜಿಸಲಾಗುತ್ತದೆ.

            ಈ ಸಂದರ್ಭ ಕುರಿತು ಡಾ.ಅಶ್ವಿನಿ, `ಒಳ್ಳೆಯ ಹಿನ್ನೆಲೆಯೊಂದಿಗೆ ಸೆಲ್ಫೀ ತೆಗೆದುಕೊಳ್ಳುವುದು ಏಕೆ? ಅವರು ಆ ಸ್ಥಳವನ್ನು ಇಷ್ಟಪಡುತ್ತಿರುತ್ತಾರೆ. ಆದ್ದರಿಂದ ನಾವೇಕೆ ಆರೋಗ್ಯಕರ ಆಹಾರವನ್ನು ಹಿನ್ನೆಲೆಯಾಗಿಸಿ ಸೆಲ್ಫೀಗಳನ್ನು ತೆಗೆದುಕೊಳ್ಳಲು ಉತ್ತೇಜಿಸಬಾರದು ಎಂದು ಆಲೋಚಿಸಿದೆವು. ಯುವಜನರು ತಮ್ಮ ಸೆಲ್ಫೀ ಕ್ಲಿಕ್‍ಗಳನ್ನು ತೆಗೆದುಕೊಳ್ಳುವುದನ್ನು ಆನಂದಿಸುವುದಲ್ಲದೆ ಆರೋಗ್ಯಕರ ಆಹಾರದ ಪರಿಕಲ್ಪನೆಯನ್ನು ಮೆಚ್ಚಿಕೊಂಡರು. `ಈ ಉಪಕ್ರಮ ಸಾರ್ವಜನಿಕರು, ರೋಗಿಗಳು ಮತ್ತು ಆಸ್ಪತ್ರೆಯ ಉದ್ಯೋಗಿಗಳನ್ನು ಆಹಾರದ ಸುರಕ್ಷತೆ ಕುರಿತಾದ ಪೋಸ್ಟರ್‍ಗಳ ಮೂಲಕ ಶಿಕ್ಷಣ ನೀಡಲು ಬಳಸಲಾಗುತ್ತದೆ. ಇದು ಆಹಾರ ಬೇಯಿಸುವಾಗ ಮತ್ತು ಸಮತೋಲನದ ಆಹಾರದಲ್ಲಿ ಕಲಬೆರಕೆ, ನೈರ್ಮಲ್ಯ ಮತ್ತು ಸ್ವಚ್ಛತೆ ಕುರಿತಾದ ಕ್ಷಿಪ್ರ ಪರೀಕ್ಷೆಯ ವಿವಿಧ ಪೋಸ್ಟರ್‍ಗಳಲ್ಲಿ ಕಾಣಿಸಿಕೊಳ್ಳುತ್ತದೆ.

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ