ಪದ್ಮಾವತ್ ಚಿತ್ರ ಬಿಡುಗಡೆಗೆ ಸುಪ್ರೀಂ ಅಸ್ತು
ರಾಜಸ್ಥಾನ್ -ಮಧ್ಯಪ್ರದೇಶದಲ್ಲೂ ಪದ್ಮಾವತ್ ಚಿತ್ರ ಬಿಡುಗಡೆಗೆ ಸುಪ್ರೀಂ ಅಸ್ತು
ಬಾಲಿವುಡ್ ನಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಪದ್ಮಾವತ್ ಚಿತ್ರ ಬಿಡುಗಡೆಗೆ ನಿಷೇಧಿಸಬೇಕೆಂದು ರಾಜಸ್ಥಾನ ಮತ್ತು ಮಧ್ಯಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ.
ಬಾಲಿವುಡ್ ನಲ್ಲಿ ತೆರೆಗೆ ಸಿದ್ಧವಾಗಿರುವ ಪದ್ಮಾವತ್ ಚಿತ್ರವನ್ನು ರಾಜಸ್ಥಾನ-ಮಧ್ಯಪ್ರದೇಶದಲ್ಲಿ ಬಿಡುಗಡೆಗೆ ಅನುಮತಿ ನೀಡಬಾರದೆಂದು 2 ಸರ್ಕಾರದಿಂದ ಅರ್ಜಿ ಸಲ್ಲಿಸಲಾಗಿತ್ತು. ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಈ ಚಿತ್ರವನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡುವ ಮೂಲಕ ಎರಡು ಸರ್ಕಾರಗಳ ಅರ್ಜಿಯನ್ನು ವಜಾಗೊಳಿಸಿದೆ.
ಜನವರಿ 25ರಂದು ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಪದ್ಮಾವತ್ ಚಿತ್ರವನ್ನು ಬಿಡುಗಡೆ ಮಾಡಬೇಕು ಹಾಗೂ ಕಾನೂನು ಸುವ್ಯವಸ್ಥೆ ಸಹ ಕಾಪಾಡಲು ಆಯಾ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಹ ಸೂಚನೆ ನೀಡಿದೆ .
ಸೆನ್ಸಾರ್ ಮಂಡಳಿ ಈ ಚಿತ್ರದಲ್ಲಿ ಚಿತ್ರ ಅಭಿಮಾನಿಗಳಿಗೆ ಏನು ಬೇಕು ಏನು ಬೇಡ ಎಂಬುವುದು ತೀರ್ಮಾನಿಸಿ ತನ್ನ ಕೆಲಸ ಮಾಡಿದೆ ಎಂದು ಸಹ ಹೇಳಿದೆ
Comments
Post a Comment