ಕೊನೆಯ ಬಜೆಟ್ ಮಂಡನೆಗೆ ಸಿಎಂ ಸಿದ್ಧತೆ

ಕೊನೆಯ ಬಜೆಟ್ ಮಂಡನೆಗೆ ಸಿಎಂ ಸಿದ್ಧತೆ



      ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ರಾಜ್ಯದ ವಿಧಾನಸಭಾ ಚುನಾವಣೆಗೆ ಒಂದು ವಾರ ಬಾಕಿಇರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಲಿ ಸರ್ಕಾರದ ಕೊನೆಯ (2018-19ನೇ ಸಾಲಿನ) ರಾಜ್ಯ ಬಜೆಟ್ ಮಂಡನೆ ಮಾಡಲು ನಿರ್ಧರಿಸಿದ್ದಾರೆ.

      ಚುನಾವಣೆಗೆ ಒಂದು ವಾರ ಇರುವಾಗಲೇ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡುವ ಹಿನ್ನೆಲೆಯಲ್ಲಿ ವಿರುದ್ಧ ಪಕ್ಷಗಳು ತೀವ್ರವಾಗಿ ಕಿಡಿಕಾರುತ್ತಿದೆ ಚುನಾವಣಾ ವರ್ಷದಲ್ಲಿ ಬಜೆಟ್ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಜನಪ್ರಿಯತೆ ಹಾಗೇ ಉಳಿಸಿಕೊಳ್ಳಲು ಅಹಿಂದ ವರ್ಗ ಸೇರಿದಂತೆ ಸಾಮಾನ್ಯ ವರ್ಗದವರನ್ನು ಪುಷ್ಟಿಕರಿಸಲು ಅನೇಕ ಜನಪ್ರಿಯ ಯೋಜನೆ ಘೋಷಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಚುನಾವಣೆಗೆ ಕೆಲವೇ ದಿನಗಳು ಇರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡಲು ನಿರ್ಧರಿಸಿದ್ದಾರೆ ಇದು ಪ್ರಜಾಪ್ರಭುತ್ವದ ಪವಿತ್ರತೆ ಹಾಳು ಮಾಡುತ್ತದೆ ಎಂದು ವಿರುದ್ಧ ಪಕ್ಷಗಳು ಹೇಳುತ್ತಿದೆ.

      ರಾಜಕೀಯ ತಜ್ಞರು ಪ್ರತಿಕ್ರಿಯೆ ನೀಡಿ ಚುನಾವಣಾ ವರ್ಷದಲ್ಲಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡುತ್ತಿದ್ದಾರೆ ಇದನ್ನು ಸಾರ್ವಜನಿಕ ಸಂಪರ್ಕದ ನಿರ್ವಹಣೆ ಎಂದು ಪರಿಗಣಿಸಬೇಕು ತಮ್ಮ ಸರ್ಕಾರ   ಮಾಡಿದ ಸಾಧನೆಗಳು, ಸರ್ಕಾರದ ಕೊಡುಗೆಗಳನ್ನು ಸಿದ್ದರಾಮಯ್ಯ ಅವರು  ಅವಶ್ಯಕವಾಗಿ ಬಳಸಿಕೊಳ್ಳುತ್ತಿದ್ದಾರೆ.  ಬಜೆಟ್ ಮಂಡನೆ ವೇಳೆ ಸಾಕಷ್ಟು ಭರವಸೆ ನೀಡಬಹುದು ಆದರೆ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ಬಳಿಕವಷ್ಟೇ ಅವುಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯ ಎಂದು ಹೇಳಿದ್ದಾರೆ.

      ಬಜೆಟ್ ಮಂಡನೆಗೆ ಭಾರೀ ಸಿದ್ಧತೆಗಳನ್ನು ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ  ಹದಿನೆಂಟು ರಿಂದ ವಿವಿಧ ಸಂಘಟನೆಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ  ಸಭೆ , ಸಮಾಲೋಚನೆಗಳನ್ನು ನಡೆಸುತ್ತಲೇ ಇದ್ದಾರೆ. ಫೆಬ್ರವರಿ ನಾಲ್ಕು ರವರೆಗೂ ಈ ಸಭೆಗಳು ನಡೆಯುತ್ತಲೇ ಇರುತ್ತವೆಂದು ಹೇಳಲಾಗುತ್ತಿದೆ.

     ರೈತರು ಕೃಷಿಕರು ಕಾರ್ಮಿಕರು ಹಾಗೂ ಇನ್ನಿತರೆ ವಲಯಗಳಿಗೆ ಸಹಾಯವಾಗುವ ಸಲುವಾಗಿ ಸರ್ಕಾರ ಚುನಾವಣೆಗೂ ಮುನ್ನ ಬಜೆಟ್ ಮಂಡನೆ ಮಾಡುತ್ತಿದೆ.  ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜೆಟ್ ನಲ್ಲಿ  ಘೋಷಣೆ ಮಾಡಿದ್ದನ್ನು ಸರ್ಕಾರ ಅನುಷ್ಠಾನಕ್ಕೆ ತರಲಿದೆ. ಒಂದು ವೇಳೆ ಬಿಜೆಪಿ ಅಥವಾ ಜೆಡಿಎಸ್ ಅಧಿಕಾರಕ್ಕೆ ಬಂದರೆ ಅವುಗಳಲ್ಲಿ ಬದಲಾವಣೆ ತರಬಹುದು ಎಂದು ಆರ್ಥಿಕ ತಜ್ಞ          ಆರ್, ಎಸ್, ದೇಶಪಾಂಡೆಯವರು ತಿಳಿಸಿದ್ದಾರೆ.

   ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಾಖಲೆ ಬಜೆಟ್ ಇದಾಗಲಿದ್ದು, ಈಗಾಗಲೇ  ಕಳೆದ ನಾಲ್ಕು ವರ್ಷಗಳಿಂದ ಬಡವರಿಗಾಗಿ ಹಲವಾರು ಯೋಜನೆ ಘೋಷಿಸಿದ್ದ ಸಿದ್ದರಾಮಯ್ಯ ಈ ಬಾರಿಯೂ ಈ ಬಾರಿಯೂ ತಮ್ಮ  ಬಜೆಟ್ ನಲ್ಲಿ     ಎಸ್ ಸಿ,    ಎಸ್ ಟಿ,   ಮತ್ತು ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಆದ್ಯತೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

Comments