ವಿ-ಗಾರ್ಡ್‍ನಿಂದ ಹೊಸ ಬ್ರಾಂಡ್ ಐಡೆಂಟಿಟಿ ಪರಿಚಯ  ಹೊಸ ಲೋಗೋ ಮತ್ತು ಬ್ರಾಂಡ್ ಫಿಲಾಸಫಿಯು 40 ವರ್ಷಗಳ ಹಳೆಯ ವಿ ಗಾರ್ಡ್ ಇಂಡಸ್ಟ್ರೀಸ್‍ನ ಇತಿಹಾಸವನ್ನು ಪ್ರದರ್ಶಿಸುತ್ತಿದ್ದು, ಮುಂದಿನ ತಲೆಮಾರಿನ, ಸ್ಮಾರ್ಟ್, ಟೆಕ್ನಾಲಜಿ ಆಧರಿತ ಸಂಸ್ಥೆಯ ಪ್ರತಿಬಿಂಬವಾಗಿರಲಿದೆ.  ಬ್ರಾಂಡ್‍ನ ಹೊಸ ದೃಷ್ಟಿಗೆ ಸೂಕ್ತವಾಗಿರುವ ಉತ್ಪನ್ನ ಶ್ರೇಣಿಯನ್ನು ಇದು ಪ್ರದರ್ಶಿಸುತ್ತದೆ. ಇಂಟಲಿಜೆಂಟ್ ವಾಟರ್ ಹೀಟರ್‍ಗಳು, ಸ್ಮಾರ್ಟ್ ಇನ್ವರ್ಟರ್‍ಗಳು, ಎಲ್‍ಇಡಿ ಹೊಂದಿರುವ ಸ್ಮಾರ್ಟ್ ಫ್ಯಾನ್‍ಗಳನ್ನು ಫೋನ್‍ನಲ್ಲಿರುವ ಆಪ್‍ನಿಂದನೇ ನಿಯಂತ್ರಿಸಬಹುದಾಗಿದೆ. ಅಲ್ಲದೆ ಇತರ ಮುಂದಿನ ತಲೆಮಾರಿನ ಉತ್ಪನ್ನಗಳನ್ನು ಇದು ಸೂಚಿಸುತ್ತದೆ.


ವಿ-ಗಾರ್ಡ್‍ನಿಂದ ಹೊಸ ಬ್ರಾಂಡ್ ಐಡೆಂಟಿಟಿ ಪರಿಚಯ



  ಬೆಂಗಳೂರು, ಫೆಬ್ರವರಿ 07, 2018: ವಿ-ಗಾರ್ಡ್ ಇಂಡಸ್ಟ್ರೀಸ್ ಲಿಮಿಟೆಡ್ ಇಂದು ತನ್ನ ಹೊಸ ಐಡೆಂಟಿಟಿಯನ್ನು ಅನಾವರಣಗೊಳಿಸಿದೆ ಮತ್ತು ಬ್ರಾಂಡ್‍ಗೆ ಹೊಸ ಗುರಿಯನ್ನು ಘೋಷಿಸಿದೆ. 40 ವರ್ಷದ ಕಂಪನಿಯ ಇತಿಹಾಸವನ್ನು ಹೊಸ ತಲೆಮಾರು, ತಂತ್ರಜ್ಞಾನ ಆಧರಿತ ಸ್ಮಾರ್ಟ್ ಸಂಸ್ಥೆಯನ್ನು ಹೊಸ ಐಡೆಂಟಿಟಿಯು ಸೂಚಿಸುತ್ತದೆ. ಇಂಟಲಿಜೆಂಟ್ ವಿಧಾನದಲ್ಲಿ ಗ್ರಾಹಕರ ಜೀವನದ ಮೇಲೆ ಪರಿಣಾಮ ಬೀರುವ ಉಪಯುಕ್ತ 
ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಹೊಸ ದಾರಿಯನ್ನು ವಿ ಗಾರ್ಡ್ ತುಳಿದಿದೆ. ಅಷ್ಟೇ ಅಲ್ಲ, ಈ ನಿಟ್ಟಿನಲ್ಲಿ ಕಂಪನಿಯು ಹೊಸ ಬ್ರಾಂಡ್ ಐಡೆಂಟಿಟಿ ಮತ್ತು ಲೋಗೋ ಸೂಚಕವಾಗಿವೆ. ಬ್ರಾಂಡ್‍ನ ರೂಪಾಂತರದ ಭಾಗವಾಗಿ ಹೊಸ ಲೋಗೋ ತೆಳ್ಳನೆಯ ಕಪ್ಪು ಮತ್ತು ರಾಯಲ್ ಗೋಲ್ಡ್ ಬಣ್ಣದ್ದಾಗಿದೆ. ಇದು ಆಧುನಿಕತೆ ಮತ್ತು ಪ್ರೀಮಿಯಂ ಮೌಲ್ಯಗಳನ್ನು ಸೂಚಿಸುತ್ತವೆ. ತನ್ನ ಚಿಹ್ನೆ ಕಾಂಗರೂ ಅನ್ನು ಇನ್ನಷ್ಟು ವಿನೂತನವಾಗಿಸಿದೆ ಮತ್ತು ಇದು ನಾವೀನ್ಯತೆ ಮತ್ತು ಪ್ರಗತಿಯನ್ನು ಸೂಚಿಸುತ್ತದೆ. ಬ್ರಾಂಡ್ ಹೊಸ ಟ್ಯಾಗ್‍ಲೈನ್‍ಅನ್ನೂ ಹೊಂದಿದ್ದು, `ಉತ್ತಮ ನಾಳೆಗಾಗಿ ಮನೆಗೆ ತನ್ನಿ' ಎಂಬ ಹೊಸ ಘೋಷವಾಕ್ಯವನ್ನು ಸೇರಿಸಿಕೊಂಡಿದೆ.
    ಈ ಹೊಸ ಪ್ರಯಾಣದ ಬಗ್ಗೆ ಮಾತನಾಡಿದ ವಿ ಗಾರ್ಡ್ ಇಂಡಸ್ಟ್ರೀಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಮಿಥುನ್ ಚಿತ್ತಿಲಪಲ್ಲಿ ಹೇಳುವಂತೆ ``ಜೀವನ ಅರಂಭವಾಗುವುದೇ 40 ವರ್ಷದಿಂದ ಎನ್ನುತ್ತಾರೆ. ಇದು ವಿಗಾರ್ಡ್‍ನಲ್ಲಂತೂ ನಿಜವಾಗಿದೆ. ಈ ಜೀವನಕ್ಕಾಗಿ ನಾವು ಸಂಪೂರ್ಣ ಬದಲಾಗಿದ್ದೇವೆ. ನಾವು ಕೇವಲ ಮುಂದಿನ ನಾವೀನ್ಯತೆಯನ್ನಷ್ಟೇ ಯೋಚಿಸುತ್ತಿಲ್ಲ. ಟೂಲ್‍ಗಳು ಮತ್ತು ಅಪ್ಲೈಯನ್ಸ್‍ಗಳ ಮೂಲಕ ಮಾನವ ಜೀವನ ಮತ್ತು ಅವುಗಳ ಸಂಬಂಧವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. 
  ಗ್ರಾಹಕರ ಜೀವನವನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಉತ್ಪನ್ನಗಳನ್ನು ಉತ್ತಮವಾಗಿ ಯೋಜಿಸಿ ರೂಪಿಸುತ್ತಿದ್ದೇವೆ. ವಿಶ್ವಾಸಾರ್ಹ, ಪ್ರಾಮಾಣಿಕ ಬ್ರಾಂಡ್ ರೂಪಿಸುವುದಷ್ಟೇ ನಮ್ಮ ಉದ್ದೇಶವಲ್ಲ. ಬದಲಿಗೆ ಯೋಜಿತ, ಸ್ಪೂರ್ತಿದಾಯಕ 
ಮತ್ತು ಡೈನಾಮಿಕ್ ಟ್ರೆಂಡ್‍ಸೆಟರ್‍ಅನ್ನೂ ರೂಪಿಸಲಿದ್ದೇವೆ.''
ವಿ-ಗಾರ್ಡ್ ಇಂಡಸ್ಟ್ರೀಸ್ ಲಿಮಿಟೆಡ್‍ನ ನಿರ್ದೇಶಕರು ಮತ್ತು ಸಿಒಒ ಆಗಿರುವ ರಾಮಚಂದ್ರನ್ ವಿ ಹೇಳುವಂತೆ ವಿಗಾರ್ಡ್ ಇಂದು ಆರೋಗ್ಯಕರ ಯೋಜನೆಯನ್ನು ರೂಪಿಸಿದೆ ಮತ್ತು ಈ ಕ್ಷೇತ್ರದಲ್ಲಿ ನಾಯಕತ್ವ ಸಾಧಿಸುವ ಸಂಭಾವ್ಯತೆಯನ್ನು ಇದು ಹೊಂದಿದೆ. ನಾವು ಈಗ ಮುಂದಿನ ತಲೆಮಾರಿನ ಬೆಳವಣಿಗೆಗೆ ಅಡಿಗಲ್ಲು ರೂಪಿಸಿದ್ದೇವೆ. 
      ಗ್ರಾಹಕರು, ಮಾರುಕಟ್ಟೆ ಮತ್ತು ತಂತ್ರಜ್ಞಾನದಲ್ಲಿನ 
ಸ್ಪರ್ಧಾತ್ಮಕತೆಯನ್ನು ಬಳಸಿಕೊಳ್ಳುವ ಸ್ಥಾನಕ್ಕೆ ನಾವು ತಲುಪಲಿದ್ದೇವೆ. ಇದರಿಂದ ನಾವು ಇನ್ನೊಂದು 40 ವರ್ಷ ವಹಿವಾಟು ನಡೆಸಬಹುದಾಗಿದೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನು ಈಗಾಗಲೇ ಇಟ್ಟಿದ್ದು, ಎಸಿ ಸ್ಟೆಬಿಲೈಸರ್ (ಡಿಸೈನ್ ಲೀಡರ್‍ಶಿಪ್), ವೆರಾನೋ (ಐಒಟಿ ಎನೇಬಲ್ಡ್ ಗೀಸರ್‍ಗಳು) ಮತ್ತು ನಮ್ಮ ಸ್ಮಾರ್ಟ್ ಇನ್ವರ್ಟರ್‍ಗಳನ್ನು 
ರೂಪಿಸಿದ್ದೇವೆ. ಈ ಉತ್ಪನ್ನಗಳ ಮೂಲಕ ನಾವು ಒದಗಿಸುವ ಸೇವೆಯು, ಮಾರುಕಟ್ಟೆಯಲ್ಲಿ ಮುಂಚೂಣಿ ಸಾಧಿಸುವ ಉತ್ಪನ್ನವನ್ನು ನಾವು ನೀಡಬಹುದು 
ಎಂಬುದನ್ನು ಸಾಬೀತುಪಡಿಸಿದೆ.''
  ವಿ-ಗಾರ್ಡ್ ಇಂಡಸ್ಟ್ರೀಸ್ ಲಿಮಿಟೆಡ್‍ನ ಕಾಪೆರ್Çರೇಟ್ ಕಮ್ಯೂನಿಕೇಶನ್ ಉಪಾಧ್ಯಕ್ಷ ನಂದಗೋಪಾಲ್ ನಾಯರ್ ಹೇಳುವಂತೆ ``ಕೆಲವು ವರ್ಷಗಳ ಹಿಂದೆ ನಾವು ಈ 
ಎಕ್ಸರ್‍ಸೈಜ್ ಅರಂಭಿಸಿದ್ದಾಗ, ಕೇವಲ ಮೇಲ್ಮಟ್ಟದ ಬದಲಾವಣೆಗಷ್ಟೇ ಅಲ್ಲ, ಸಮಗ್ರ ಬದಲಾವಣೆಯನ್ನೂ ಮಾಡಬೇಕು ಎಂದು ನಿರ್ಧರಿಸಿದ್ದೆವು. ಬದಲಾಗುತ್ತಿರುವ 
ಗ್ರಾಹಕರಿಗೆ ಸೂಕ್ತವಾಗಿ ನಮ್ಮ ಬ್ರಾಂಡ್ ಇರಬೇಕು ಮತ್ತು ಭವಿಷ್ಯದ ದೃಷ್ಟಿಕೋನವನ್ನೂ ಬ್ರಾಂಡ್ ಹೊಂದಿರಬೇಕು ಎಂಬ ಉದ್ದೇಶದಿಂದ ಈ ಬದಲಾವಣೆ ಮಾಡಿದ್ದೇವೆ. ಈ ನಿಟ್ಟಿನಲ್ಲಿ ಐಡೆಂಟಿಟಿ ರೂಪಿಸಿದ್ದು ಕೇವಲ ಒಂದು ಆರಂಭಿಕ ಕೇಂದ್ರ ಮಾತ್ರ. ನಂತರ ನಾವು ಹೊಸ ವಿನ್ಯಾಸ ವ್ಯವಸ್ಥೆಯನ್ನು ರೂಪಿಸಿದೆವು. ಇದು ಪ್ಯಾಕೇಜಿಂಗ್, ರಿಟೇಲ್ ಸೇರಿದಂತೆ ವಿವಿಧ ವಲಯಗಳನ್ನು ಒಳಗೊಂಡಿತ್ತು. ಅಷ್ಟೇ ಅಲ್ಲ, ನಮ್ಮ ಕೆಲಸದ ವಾತಾವರಣವ ಬದಲಾಗಿದೆ. ಈ ಸಂದೇಶವನ್ನು ಮುಂದಕ್ಕೆ ಸಾಗಿಸಲು ನಾವು 360 ಡಿಗ್ರಿ ಸಮಗ್ರ ಮಾರ್ಕೆಟಿಂಗ್ ಸಂವಹನವನ್ನೂ ಅನಾವರಣಗೊಳಿಸಲಿದ್ದೇವೆ.''ಉತ್ತಮ ಉತ್ಪನ್ನಗಳನ್ನು ರೂಪಿಸುವ ಬ್ರಾಂಡ್‍ನ ದೃಷ್ಟಿಕೋನಕ್ಕೆ ಅನುಗುಣವಾಗಿ, ವಿ-
ಗಾರ್ಡ್ ತನ್ನ ಸ್ಮಾರ್ಟ್ ಉತ್ಪನ್ನಗಳ ಸರಣಿಯನ್ನು ಪ್ರದರ್ಶಿಸಿದೆ. ಅವುಗಳೆಂದರೆ ಇಂಟಲಿಜೆಂಟ್ ವಾಟರ್ ಹೀಟರ್‍ಗಳು, ಸ್ಮಾರ್ಟ್ ಇನ್ವರ್ಟರ್‍ಗಳು ಮತ್ತು ಎಲ್‍ಇಡಿ ಹೊಂದಿರುವ ಸ್ಮಾರ್ಟ್ ಫಾನ್‍ಗಳಾಗಿವೆ.
   ವೆರಾನೋ ಎಂಬ ಹೆಸರಿನ ಸ್ಮಾರ್ಟ್ ವಾಟರ್ ಹೀಟರ್ ವಿಶಿಷ್ಟವಾದ ಉತ್ಪನ್ನವಾಗಿದೆ. ವಿಶ್ವದ ಯಾವುದೇ ಭಾಗದಲ್ಲಿದ್ದರೂ, ಹೀಟರ್‍ಅನ್ನು ನೀವು ಆನ್ ಆಫ್ ಮಾಡಬಹುದು. ಇದರಲ್ಲಿ ಇಂಟಲಿಜೆಂಟ್ ಶೆಡ್ಯೂಲರ್ ಕೂಡ ಇದ್ದು, ಇದು ಟೆಂಪರೇಚರ್ ಅಲರ್ಟ್ ಅನ್ನು ನೀವು ಕನೆಕ್ಟ್ ಮಾಡಿದ ಸ್ಮಾರ್ಟ್‍ಫೆÇೀನ್‍ಗೆ ಸಾಗಿಸುತ್ತದೆ. ಅಲ್ಲದೆ ಇದು ಎನರ್ಜಿ ಬಳಕೆಯ ನೊಟಿಫಿಕೇಶನ್‍ಅನ್ನೂ ಕಳುಹಿಸುತ್ತದೆ. ಅಷ್ಟೇ ಅಲ್ಲ, ನೀರು ನಿಮತರೆ ಅಥವಾ ಹೀಟರ್‍ನಲ್ಲಿ ನೀರು ಇಲ್ಲದಿದ್ದರೆ ಸೂಚನೆ ನೀಡುತ್ತದೆ.ವಿ-ಗಾರ್ಡ್ ತನ್ನ ಸ್ಮಾರ್ಟ್ ಇನ್ವರ್ಟರ್‍ಗಳನ್ನೂ ಪ್ರದರ್ಶಿಸಿದೆ. ಈ ಸ್ಮಾರ್ಟ್ ತಂತ್ರಜ್ಞಾನವನ್ನು ಬಳಸಲು ನೀವು ಕೇವಲ ಸ್ಮಾರ್ಟ್ ಇನ್ವರ್ಟರ್ ಆಪ್ ಡೌನ್‍ಲೋಡ್ ಮಾಡಿಕೊಂಡರೆ ಸಾಕು. ಇದರಿಂದ ಆನ್/ಆಫ್ ಮಾಡಬಹುದು, ಇನ್ವರ್ಟರ್ ಬ್ಯಾಟರಿ ಬಳಕೆ ಮತ್ತು ಬ್ಯಾಕ್‍ಅಪ್ ತಿಳಿಯಬಹುದು, ನೀವು ಬಳಸಲು ಬಯಸುವ ಅಪ್ಲೈಯನ್ಸ್ ಆಧಾರದಲ್ಲಿ ಪರ್ಫಾರ್ಮೆನ್ಸ್ ನಿಯಂತ್ರಿಸಬಹುದು, ಐರನ್ ಬಾಕ್ಸ್, ಕಾಫಿ ಮೇಕರ್, ಗ್ರೈಂಡರ್, ಟೋಸ್ಟರ್, ರೋಟಿ ಮೇಕರ್, ಹೇರ್ ಡ್ರೈಯರ್ ಮತ್ತು ಇತರ ಪರಿಕರಗಳನ್ನು ಕಡಿಮೆ ಸಾಮಥ್ರ್ಯದ ಇನ್ವರ್ಟರ್ ಮಾಡೆಲ್‍ಗಳಲ್ಲೂ ರನ್ ಮಾಡಬಹುದು. ತುರ್ತು ಸನ್ನಿವೇಶದಲ್ಲಿ ಹೆಚ್ಚು ಸಮಯ ಬೆಳಕು ನೀಡಲು ಸೂಪರ್ ಚಾರ್ಜ್‍ಅನ್ನೂ ಎನೇಬಲ್ ಮಾಡಬಹುದಾಗಿದೆ.
   ವಿ-ಗಾರ್ಡ್ ಸ್ಮಾರ್ಟ್ ಫ್ಯಾನ್‍ಗಳನ್ನೂ ಅನಾವರಣಗೊಳಿಸಿದ್ದು, ಇದಕ್ಕೆ ಇಮಾಜಿನಾ ಎಂದು ಹೆಸರಿಸಿದೆ. ಇದು ಎಲ್‍ಇಡಿ ಲೈಟ್‍ಗಳನ್ನು ಹೊಂದಿದ್ದು, ಇದು ನಿಮ್ಮ ಟೇಸ್ಟ್ ಮತ್ತು ಮೂಡ್‍ಗೆ ಸೂಕ್ತವಾದ ವಿವಿಧ ಬಣ್ಣಗಳನ್ನು ಹೊಂದಿರಲಿದೆ. ಅಲ್ಲದೇ ಇದು ವಿಶಿಷ್ಟ ಬ್ರೀಜ್ 
ಮೊಡ್‍ಅನ್ನೂ ಹೊಂದಿದ್ದು, ನಿಮ್ಮ ಲಿವಿಂಗ್ ರೂಮ್‍ನಲ್ಲಿ ಅದ್ಭುತ ನೋಟಕ್ಕೆ ಅವಕಾಶ ನೀಡಲಿದೆ. ತೆಳ್ಳನೆಯ ಹೊಸ ಎಸಿ ಸ್ಟೆಬಿಲೈಸರ್ ಈ ವಿಭಾಗದಲ್ಲಿ ಮಹತ್ವದ್ದಾಗಿದೆ ಮತ್ತು 
ವಿನ್ಯಾಸ ಅತ್ಯಂತ ಆಕರ್ಷಕವಾಗಿದೆ. ಹೊಸ ದೃಷ್ಟಿಕೋನವನ್ನು ತಾಂತ್ರಿಕವಾಗಿ ಸುಧಾರಿತ ಉತ್ಪನ್ನಗಳನ್ನು ಇನ್ನಷ್ಟು ಒದಗಿಸಲಿದೆ. ಇವು ಇಂಟರ್ನೆಟ್ ಆಫ್ ದಿ ಥಿಂಗ್ಸ್ ಒಳಗೊಂಡಿದ್ದು, ಸಂಪರ್ಕಿತ ವಿಶ್ವಕ್ಕೆ ನಿಮ್ಮನ್ನು ತೆರೆಯುತ್ತದೆ. ಸ್ಮಾರ್ಟ್ ಹೋಮ್ ವಿಭಾಗದಲ್ಲಿ ತನ್ನ ಸೇವೆಯನ್ನು ವಿ-
ಗಾರ್ಡ್ ಮುಂದುವರಿಸಲಿದ್ದು, ನಾವೀನ್ಯತೆ, ವಿನ್ಯಾಸ ಮತ್ತು ಪರ್ಫಾರ್ಮೆನ್ಸ್‍ನಲ್ಲಿ ಹೊಸ ಮಾನದಂಡವನ್ನು ರೂಪಿಸಲಿದೆ. ಬ್ರಾಂಡ್ ಹಲವು ರೂಪಾಂತರಗಳನ್ನು ಕಂಡಿದೆ ಮತ್ತು ಸಂಘಟನೆಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡುವ ಪ್ರಕ್ರಿಯೆಯನ್ನು ಅಳವಡಿಸಿಕೊಂಡಿದೆ. 500 ವಿತರಕರು, 200 ಸೇವಾ ಕೇಂದ್ರಗಳು, 5500 ನೇರ ಡೀಲರ್‍ಗಳು ಮತ್ತು 20,000 ರಿಟೇಲರುಗಳ ವಿಶಾಲ ಜಾಲವನ್ನು ವಿ-ಗಾರ್ಡ್ ಹೊಂದಿದೆ.

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ