ಕರ್ನಾಟಕದ ಉದಯೋನ್ಮುಖ ಕ್ರೀಡಾಪಟುಗಳಿಗೆ ವಿದ್ಯಾರ್ಥಿವೇತನ
ಕರ್ನಾಟಕದ ಉದಯೋನ್ಮುಖ ಕ್ರೀಡಾಪಟುಗಳಿಗೆ ವಿದ್ಯಾರ್ಥಿವೇತನ
ಬೆಂಗಳೂರು,ಕರ್ನಾಟಕ 1-2-2018 ರಾಜ್ಯದ ಭರವಸೆ ಹಾಗೂ ಉದಯೋನ್ಮುಖ ಕ್ರೀಡಾಪಟುಗಳಿಗೆ ಉನ್ನತ ಶಿಕ್ಷಣದ ವಿದ್ಯಾರ್ಥಿವೇತನ ವಿಸ್ತರಿಸಲು ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (ಡಿವೈಎಸ್‍ಎಸ್) ಎಸ್‍ಡಿಎಫ್ ಜತೆ ಒಪ್ಪಂದಕ್ಕೆ ಸಹಿ ಹಾಕಿರುವುದು ಇಂದಿನ ಕಾರ್ಯಕ್ರಮವಾಗಿದೆ.
ಪ್ರಾಥಮಿಕ ಹಂತವಾಗಿ ಕರ್ನಾಟಕದಿಂದ ವಿಶ್ವದರ್ಜೆಯ ಕ್ರೀಡಾಪಟುಗಳನ್ನು ಅಭಿವೃದ್ಧಿ ಪಡಿಸಲು ಡಿವೈಎಸ್‍ಎಸ್ ಮುಂದಾಗಿದ್ದು, ಈ ಮಹತ್ವಾಕಾಂಕ್ಷೆ ಯೋಜನೆಯಲ್ಲಿ ಪಾಲ್ಗೊಳ್ಳಲು ಸುಮಾರು 1000 ವಿದ್ಯಾರ್ಥಿಗಳಲ್ಲಿ ಅರ್ಹ ಕ್ರೀಡಾಪಟುಗಳನ್ನು ಗುರುತಿಸಲು ಕ್ರಮ ಕೈಗೊಳ್ಳಲಾಗಿದೆ. ಕ್ರೀಡಾ ವಿಭಾಗದ ಜತೆಗೆ ಉನ್ನತ ಶಿಕ್ಷಣ ಪಡೆಯಲು ಕ್ರೀಡಾಪಟುಗಳಿಗೆ ಉತ್ತಮ ಅವಕಾಶವಿದೆ ಎಂದು ಎಸ್‍ಡಿಎಫ್ ನಂಬಿಕೆ ಮೂಡಿಸಿದೆ.
ಎಸ್‍ಡಿಎಫ್ ವಿದ್ಯಾಧಾನ ಯೋಜನೆಯೊಂದಿಗೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಂದ ಬಂದ ಉದಯೋನ್ಮುಖ ಕ್ರೀಡಾಪಟುಗಳಿಗೆ ಮುಂದಿನ ಮೂರು ವರ್ಷ 100 ವಿದ್ಯಾರ್ಥಿಗಳಿಗೆ ಎಸ್‍ಡಿಎಫ್‍ನಿಂದ ವಿದ್ಯಾರ್ಥಿವೇತನ
ಆರ್ಥಿಕ ಸಂಕಷ್ಟದ ಹಿನ್ನೆಲೆ ಇರುವ ಹಲವು ಕ್ರೀಡಾಪಟುಗಳನ್ನು ಸರ್ಕಾರ ಆಯ್ಕೆ ಮಾಡಲಿದ್ದು, ಇಂಥ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡಲು ಎಸ್‍ಡಿಎಫ್ ಪ್ರಸ್ತಾಪಿಸಿದೆ. ಈ ಪ್ರಾಥಮಿಕ ಹಂತದ ಬಗ್ಗೆ ಪ್ರತಿಕ್ರಿಯಿಸಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಪ್ರಮೋದ್ ಮಧ್ವರಾಜ್, ವಿದ್ಯಾಕ್ರೀಡಾ ಎಂದು ಕರೆಯಲ್ಪಡುವ ಇಂತಹ ಮೊದಲ ಬಾರಿಯ ಎಸ್‍ಡಿಎಫ್ ಯೋಜನೆಯೊಂದಿಗೆ ಪಾಲುದಾರರಾಗುತ್ತಿರುವುದಕ್ಕೆ ತಮಗೆ ಅತೀವ ಸಂತಸವಾಗುತ್ತಿದೆ. ಹಲವು ಕಾರಣಗಳಿಂದ ಸಮಸ್ಯೆಎದುರಿಸುತ್ತಿರುವ ಕರ್ನಾಟಕದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಎಸ್‍ಡಿಎಫ್ ಬೆಂಬಲ ನೀಡುತ್ತಿದೆ. ಕ್ರೀಡೆಗಳು ಶೈಕ್ಷಣಿಕ ಆಸಕ್ತಿಗಳಿಗೆ ಹಾನಿಕಾರಕ ಎಂದು ಗ್ರಹಿಸಲಾಗಿದೆ. ನಾವು ಇದನ್ನು ಬೇರೆ ರೀತಿಯಲ್ಲಿ ಭಾವಿಸುತ್ತೇವೆ. ಅಲ್ಲದೆ ಇದು ನಮ್ಮ ಕ್ರೀಡಾ ನೀತಿಯನ್ನು ಹೆಚ್ಚಿಸುವ ಒಂದು ಭಾಗವಾಗಿದೆ. ನಮ್ಮ ಅರ್ಹ ಕ್ರೀಡಾ ಪ್ರತಿಭೆಗಳಿಗೆ ಶಿಕ್ಷಣ ನೀಡುವ ಹಿನ್ನೆಲೆಯಲ್ಲಿ ಎಸ್‍ಡಿಎಫ್ ಜತೆ ನಾವು ಪಾಲುದಾರಿಕೆ ಮಾಡಿಕೊಳ್ಳುತ್ತಿದ್ದೇವೆ. ಎಸ್‍ಡಿಎಫ್ ಮತ್ತು ಶೈಕ್ಷಣಿಕ ನೆರವು ನೀಡುವ ಜತೆಗೆ ಎಲ್ಲ ರೀತಿಯ ಮಕ್ಕಳ ಅಭಿವೃದ್ಧಿಯ ಮೌಲ್ಯದ ಮಹತ್ವವನ್ನು ಸಾರುತ್ತಿರುವ ಶಿಬುಲಾಲ್ ಅವರಿಗೆ ವಿಶೇಷ ಅಭಿನಂದನೆಗಳು ಎಂದರು.
ಈ ಕುರಿತಂತೆ ಪ್ರತಿಕ್ರಿಯಿಸಿದ ಎಸ್‍ಡಿಎಫ್ ವ್ಯವಸ್ಥಾಪಕ ಟ್ರಸ್ಟಿ ಎಸ್.ಡಿ. ಶಿಬುಲಾಲ್ , ಗುಣಮಟ್ಟದ ಶಿಕ್ಷಣ ಸಾಮಾಜಿಕ ಅಭಿವೃದ್ದಿಯ ಮೂಲಾಧಾರವಾಗಿದೆ. ವಿದ್ಯಾಧಾನ್, ವಿದ್ಯಾರಕ್ಷಕ್ ಮತ್ತು ಇದೀಗ ವಿದ್ಯಾಕ್ರೀಡಾದ ಮೂಲಕ ಇದನ್ನು ಮುಂದುವರಿಸಲಾಗುತ್ತಿದೆ. ಯೋಜನೆಗೆ ಒಳಪಡುವ ಎಲ್ಲರಿಗೂ ಶೈಕ್ಷಣಿಕವಾಗಿ ಪ್ರಕಾಶಮಾನವಾದ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ಎಸ್‍ಡಿಎಫ್ ಬೆಂಬಲವನ್ನು ಮುಂದುವರಿಸಲಿದೆ. ನಮ್ಮ ಕ್ರೀಡಾ ಪ್ರತಿಭೆಗಳಿಗೆ ಉನ್ನತ ಶಿಕ್ಷಣದ ಪಾಲುದಾರಿಕೆ ನೀಡುವಂತಹ ಯೋಜನೆಗಳಿಗೆ ಡಿವೈಎಸ್‍ಎಸ್ ಜತೆ ಪಾಲುದಾರಿಕೆ ಮಾಡಿಕೊಳ್ಳುತ್ತಿರುವುದಕ್ಕೆ ನಮ್ಮೆಲ್ಲರಿಗೂ ಹೆಮ್ಮೆ ಆಗುತ್ತಿದೆ. ಎಸ್‍ಡಿಎಫ್ ಗುಣಮಟ್ಟದ ಶಿಕ್ಷಣವು ಜೀವನವನ್ನು ರೂಪಾಂತರಗೊಳಿಸುತ್ತಿದೆ ಎಂದು ನಂಬಿದೆ. ಮತ್ತು ಇದು ನಮ್ಮ ಸಣ್ಣ ಕೊಡುಗೆಯಾಗಿದೆ. 2018ರಲ್ಲಿ ಎಸ್‍ಡಿಎಫ್ 10, 000ಕ್ಕೂ ಹೆಚ್ಚು ಮಂದಿಗೆ ವಿದ್ಯಾರ್ಥಿವೇತನ ವಿತರಿಸಲಿದೆ ಎಂದರು.
ಕ್ರೀಡಾ ಸಂಸ್ಥೆ, ಕ್ರೀಡಾಪಟುಗಳೊಂದಿಗೆ ಅಸ್ತಿತ್ವದಲ್ಲಿರುವ ಸಂಬಂಧಗಳನ್ನು ಚಾಲನೆಯಲ್ಲಿರಿಸುವುದರೊಂದಿಗೆ ವಿದ್ಯಾಕ್ರೀಡಾ ವಿದ್ಯಾರ್ಥಿವೇತನಕ್ಕೆ ಯೋಗ್ಯ ಅಭ್ಯರ್ಥಿಗಳನ್ನು ಗುರುತಿಸಲು ಕ್ರೀಡಾ ಇಲಾಖೆ ನೆರವು ನೀಡಲಿದೆ. ತನ್ನ ಪ್ರಸ್ತುತ ಗುಣಮಟ್ಟದ ಆಯ್ಕೆ ಪ್ರಕ್ರಿಯೆ ಮೂಲಕ ಎಸ್‍ಡಿಎಫ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಆಯ್ಕೆಯ ಮಾನದಂಡವು ಕ್ರೀಡಾ ಸಾಧನ ಮತ್ತು ಶೈಕ್ಷಣಿಕ ಪ್ರದರ್ಶನವನ್ನು ಅವಲಂಬಿಸಿರುತ್ತದೆ. ಎಸ್‍ಡಿಎಫ್ ವಿದ್ಯಾಧಾನ ಕಾರ್ಯಕ್ರಮದ ಜತೆಗೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಂದ ಬಂದ ಉದಯೋನ್ಮುಖ ಕ್ರೀಡಾಪಟುಗಳಿಗೆ ಮುಂದಿನ ಮೂರು ವರ್ಷ 100 ವಿದ್ಯಾರ್ಥಿಗಳಿಗೆ ಎಸ್‍ಡಿಎಫ್‍ವಿದ್ಯಾರ್ಥಿವೇತನ ಒದಗಿಸಲಿದೆ. ಕರ್ನಾಟಕದಾದ್ಯಂತ ವೈಯಕ್ತಿಕ ಸಂದರ್ಶನ ಜತೆಗೆ ಕಠಿಣ ಆಯ್ಕೆ ಪ್ರಕ್ರಿಯೆ ಮೂಲಕ ಈ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ವಿದ್ಯಾಕ್ರೀಡಾ ಕಾರ್ಯಕ್ರಮದಿಂದ ಗುರುತಿಸಲ್ಪಟ್ಟ ವಿದ್ಯಾರ್ಥಿಗಳು ವಿಧ್ಯಧಾನ ಕಾರ್ಯಕ್ರಮದಡಿ ಗಮನಾರ್ಹ ಸಾಧನೆ ತೋರಿದರೆ ಅಂತವರಿಗೆ ಪ್ರಶಸ್ತಿ ವಿತರಿಸಲಾಗುತ್ತದೆ.
ಸರೋಜಿನಿ ದಾಮೋದರನ್ ಫೌಂಡೇಷನ್ ಕುರಿತು.
ಶಿಕ್ಷಣದ ಮೂಲಕ ಜೀವನವನ್ನು ರೂಪಾಂತರಗೊಳಿಸುವ ದೃಷ್ಟಿಕೋನ ಹಾಗೂ ಸಮಾಜದ ಜವಾಬ್ದಾರಿಯನ್ನು ಹೊತ್ತು, ಸರೋಜಿನಿ ದಾಮೋದರನ್ ಫೌಂಡೇಷನ್ (ಎಸ್‍ಡಿಎಫ್) ಸಂಸ್ಥೆ ಸ್ಥಾಪಿತಗೊಂಡಿದೆ. ಕುಮಾರಿ ಶಿಬುಲಾಲ್ ಮತ್ತು ಎಸ್.ಡಿ. ಶಿಬುಲಾಲ್ 1999ರಲ್ಲಿ ಎಸ್‍ಡಿಎಫ್‍ಗೆ ಅಡಿಗಲ್ಲು ನೆಟ್ಟಿದ್ದರು. ಕೇರಳದ ಅಲೆಪ್ಪೆಯಲ್ಲಿ ಕೆಲವು ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಒದಗಿಸುವ ಮೂಲಕ, ಸಣ್ಣದಾಗಿ ಎಸ್‍ಡಿಎಫ್ ತನ್ನ ಸಾಮಾಜಿಕ ಹೊಣೆಗಾರಿಕೆ ಆರಂಭಿಸಿತು. ಇಂದು ಎಸ್‍ಡಿಎಫ್, ದೇಶದ ವಿವಿಧ ಭಾಗಗಳಲ್ಲಿ ಶಿಕ್ಷಣ (ವಿದ್ಯಾಧಾನ ಮತ್ತು ವಿದ್ಯಾರಕ್ಷಕ್), ಮಕ್ಕಳ ಆರೋಗ್ಯ(ಆಯುರ್ಧನ್), ಸಾವಯವ ಕೃಷಿ (ಅಕ್ಷಯ ಕೃಷಿ ಪ್ರಶಸ್ತಿಗಳು ) ಮತ್ತು ಸಾಮಾಜಿಕ ಕಾರಣಗಳು (ಹರಿಶ್ರೀ) ಸೇರಿದಂತೆ ಹಲವು ಕಾರಣಗಳಿಗೆ ತನ್ನ ವ್ಯಾಪ್ತಿಯನ್ನು ವಿಸ್ತಿರಿಸುವುದರೊಂದಿಗೆ ನಿರಂತರವಾಗಿ ಬೆಳೆಯುತ್ತಿರುವ ಘಟಕವಾಗಿದೆ.
Comments
Post a Comment