ಸಮಸ್ಯೆ ಪರಿಹರಿಸದಿದ್ದರೆ ಪ್ರಧಾನಿ ರಾಜ್ಯಕ್ಕೆಬರುವುದು ಬೇಡ: ಸಾಹಿತಿ ಚಂಪಾ

ಸಮಸ್ಯೆ ಪರಿಹರಿಸದಿದ್ದರೆ ಪ್ರಧಾನಿ ರಾಜ್ಯಕ್ಕೆಬರುವುದು ಬೇಡಸಾಹಿತಿ ಚಂಪಾ

ಬೆಂಗಳೂರು : ರಾಜ್ಯದ ಕಳಸಾ ಬಂಡೂರಿಯೋಜನೆಯ ಬಗ್ಗೆ ಸ್ಪಷ್ಟ ನಿಲುವು ತೋರಿಸದ ಪ್ರಧಾನಿಗಳುರಾಜ್ಯಕ್ಕೆ ಬರುವುದು ಅವಶ್ಯಕತೆಯಿಲ್ಲ ಎಂದು ಜನಸಾಮಾನ್ಯರ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಸಾಹಿತಿಚಂಪಾ ಹೇಳಿದ್ದಾರೆ.

ನಗರದ ಪ್ರೀಡಂ ಪಾರ್ಕ್‍ನಲ್ಲಿ ಇಂದಿನಿಂದ ಪ್ರಾರಂಭವಾದಅನಿರ್ದಿಷ್ಟಾವಧಿ ಅಹೋರಾತ್ರಿ ಪ್ರತಿಭಟನಾ ಧರಣಿಯಲ್ಲಿಭಾಗವಹಿಸಿ ಮಾತನಾಡಿದ ಅವರುಕಳಸಾ ಬಂಡೂರಿಸಮಸ್ಯೆಗಳನ್ನು ಪರಿಹರಿಸುವಲ್ಲಿ ರಾಷ್ಟ್ರೀಯ ರಾಜಕೀಯಪಕ್ಷಗಳು ಬಹಳ ತಾರತಮ್ಯ ತೋರಿಸುತ್ತಿವೆಅಲ್ಲದೆ,ಪ್ರಧಾನಿಗಳು ಇದುವರೆಗೂ ತುಟಿಯನ್ನು ಬಿಚ್ಚದೇಇರುವುದು ಬಹಳ ಆಶ್ಚರ್ಯವನ್ನುಂಟು ಮಾಡುತ್ತಿದೆಫೆಬ್ರವರಿ 4 ರಂದು ಬೆಂಗಳೂರಿಗೆ ಆಗಮಿಸುತ್ತಿರುವಪ್ರಧಾನಿಗಳು  ವಿಷಯದ ಬಗ್ಗೆ ತಮ್ಮ ಸ್ಪಷ್ಟ ನಿಲುವನ್ನುವ್ಯಕ್ತಪಡಿಸಬೇಕಾದ ಅವಶ್ಯಕತೆ ಇದೆ ಎಂದರು.

ಪ್ರತಿಭಟನಾ ಧರಣಿಯ ನೇತೃತ್ವವಹಿಸಿರುವ ಜನಸಾಮಾನ್ಯರ ಪಕ್ಷದ ಅಧ್ಯಕ್ಷ ಡಾ ಡಿ ಅಯ್ಯಪ್ಪ ಮಾತನಾಢಿ,ಕಳಸಾ ಬಂಡೂರಿ ನಾಲಾ ಯೋಜನೆ ಹಾಗೂ ಮಹದಾಯಿತಿರುವು ಯೋಜನೆಗಳೂ ಎರಡು ವಿಭಿನ್ನಒಂದೇಪ್ರದೇಶದಲ್ಲಿವೆ ಎನ್ನುವುದನ್ನು ಬಿಟ್ಟರೆ ಇಲ್ಲಿಯ ಯೋಜನೆಗೆಬಹಳಷ್ಟು ವ್ಯತ್ಯಾಸವಿದೆಮಹದಾಯಿ ಯೋಜನೆ ನದಿಗೆಸಂಬಂಧಿಸಿದ್ದು ಹಾಗೂ ಕರ್ನಾಟಕಗೋವಾ ಹಾಗೂಮಹರಾಷ್ಟ್ರ ರಾಜ್ಯದ ಮಧ್ಯೆ ನೀರು ಹಂಚಿಕೆಯ ಬಗ್ಗೆಇನ್ನುವರೆಗೂ ಯಾವುದೇ ತಿರ್ಮಾನಗಳು ಆಗಿಲ್ಲಹಿನ್ನಲೆಯಲ್ಲಿ  ವಿವಾದ ಸಧ್ಯದ ಪರಿಸ್ಥಿತಿಯಲ್ಲಿಯಾವುದೇ ತಾರ್ಕಿಕ ಅಂತ್ಯ ಕಾಣಲು ಸಾಧ್ಯವಿಲ್ಲ.

ಆದರೆಸಣ್ಣ ಸಣ್ಣ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಧಾನಿಗಳುಒಂದು ರಾಜ್ಯದ ಜ್ವಲಂತ ಸಮಸ್ಯೆಗೆ ಪರಿಹಾರದ ಬಗ್ಗೆ ತುಟಿಬಿಚ್ಚದೇ ಇರುವ ಮೂಲಕ ತಾರತಮ್ಯ ಮಾಡುತ್ತಿದ್ದಾರೆ.

ಕರ್ನಾಟಕದ ಜ್ವಲಂತ ಸಮಸ್ಯೆಗೆ ಸ್ಪಂದಿಸದ ಪ್ರಧಾನಿಗಳುರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಕಾಲಿಡುವುದುಸರಿಯಲ್ಲಅಲ್ಲದೆಇಂತಹ ಸಮಸ್ಯೆಗಳನ್ನುಪರಿಹರಿಸಬೇಕಾದ ಪ್ರಧಾನಿಗಳು ಬರುವ ದಿನ ಬಂದ್ ಗೆಕರೆ ನೀಡಿ ಜನ ಸಾಮಾನ್ಯರಿಗೆ ತೊಂದರೆ ಕೊಡುವುದುಸರಿಯಲ್ಲಗಾಂಧೀಜಿವರು ಹುಟ್ಟಿದ ನಾಡಿನಲ್ಲಿಪ್ರತಿಭಟನೆಗೆ ಎಲ್ಲರಿಗೂ ಅವಕಾಶವಿದೆನೆಲ ಜಲದಸಮಸ್ಯೆಗಳು ಬಂದಂತಹ ಸಂಧರ್ಭದಲ್ಲಿ ಎಲ್ಲರೂಪಕ್ಷಾತೀತವಾಗಿ ಹೋರಡುವುದು ಅತ್ಯಗತ್ಯ.

 ಹಿನ್ನಲೆಯಲ್ಲಿ ಬಂದ್ ಗೆ ಕರೆ ನೀಡಿರುವನಾಯಕರುಗಳು ನಮ್ಮ ಜೊತೆ ಪ್ರತಿಭಟನೆಯಲ್ಲಿಕೈಜೋಡಿಸಬೇಕು ಮೂಲಕ ಜನ ಸಾಮಾನ್ಯರಿಗೆಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು ಎಂದುಅಯ್ಯಪ್ಪ ಮನವಿ ಮಾಡಿದರು.

ಕಳಸಾ ಬಂಡೂರಿ ಹೋರಾಟ ಯುವ ಕೇಂದ್ರ ಸಮಿತಿಅಧ್ಯಕ್ಷ ವಿಜಯ ಕುಲಕರ್ಣಿ ಮಾತನಾಡಿಕಳಸಾಬಂಡೂರಿಯ ವಿಷಯವಾಗಿ ಪ್ರಧಾನ ಮಂತ್ರಿಗಳು ಮಧ್ಯಪ್ರವೇಶಿಸಿ ನ್ಯಾಯಾಧಿಕರಣದ ಪರಿಧಿಯಿಂದ ಹೊರಗೆಇತ್ಯರ್ಥಕ್ಕೆ ಮುಂದಾಗಬೇಕಾಗಿದೆಅಲ್ಲದೆ ಪ್ರತಿಭಟನೆನಿರಪೇಕ್ಷಣಾ ಪತ್ರ ದೊರೆಯುವವರೆಗೂಮುಂದುವರೆಯಲಿದೆ ಎಂದರುಪ್ರಧಾನಿಗಳೇ ರಾಜಕೀಯಬಿಡಿ ನೀರು ಕೊಡಿ ಇಲ್ಲದಿದ್ದಲ್ಲಿ ರಾಜ್ಯಕ್ಕೆ ಬರುವುದುಅವಶ್ಯಕತೆ ಇಲ್ಲ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಜನ ಸಾಮಾನ್ಯರ ಪಕ್ಷದ ಸಂಸ್ಥಾಪಕಅಧ್ಯಕ್ಷರಾದ ಟಿ ವಿ ಸತೀಶ್ಪಕ್ಷದ ವಕ್ತಾರರಾದನಾಗರಾಜ್ ಹೊಂಗಲ್ ಸೇರಿದಂತೆ ನೂರಾರು ಜನರುಪಾಲ್ಗೊಂಡಿದ್ದರು ಅಹೋರಾತ್ರಿ ಪ್ರತಿಭಟನೆ ನಾಳೆಯೂಮುಂದುವರೆಯಲಿದೆ.

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ